ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ನಮಗೆ ಮುಖ್ಯ ಅಲ್ಲ: ಪರಮೇಶ್ವರ್

Public TV
1 Min Read
G.Parameshwar

ಬೆಂಗಳೂರು: ಚನ್ನಪಟ್ಟಣದಲ್ಲಿ (Channapatna ByElection) ನಿಖಿಲ್ (Nikhil Kumaraswamy) ಸ್ಪರ್ಧೆ ನಮಗೆ ಮುಖ್ಯ ಅಲ್ಲ ಎಂದು ಗೃಹ ಸಚಿವ ಡಾ.ಜಿ‌.ಪರಮೇಶ್ವರ್ (G.Parameshwar) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ಮಾಡಿದ್ದಾರೆ. ಯಾರು ಸ್ಪರ್ಧೆ ಮಾಡ್ತಾರೆ ಅನ್ನೋದು ನಮಗೆ ಮುಖ್ಯ ಅಲ್ಲ. ನಾವು ಗೆಲ್ಲೋದಷ್ಟೇ ನಮಗೆ ಮುಖ್ಯ. ಅದಕ್ಕೆ ಬೇಕಾದ ರಣ ನೀತಿಯನ್ನು ನಾವು ಮಾಡ್ತೀವಿ. ಅವರು ಯಾರನ್ನಾದರೂ ನಿಲ್ಲಿಸಿಕೊಳ್ಳಲಿ ಎಂದಿದ್ದಾರೆ. ಇದನ್ನೂ ಓದಿ: ಸ್ವಂತ ಕಾರಿಲ್ಲ, ಸಾಲ ಇಲ್ಲ – ಶಿಗ್ಗಾಂವಿ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಆಸ್ತಿ ಎಷ್ಟಿದೆ?

ಇದೇ ಸಂದರ್ಭದಲ್ಲಿ ಶಿಗ್ಗಾವಿಯಲ್ಲಿ ಅಜ್ಜಂ ಫೀರ್ ಬಂಡಾಯ ಸ್ಪರ್ಧೆ ವಿಚಾರವಾಗಿ, ಪ್ರಯತ್ನ ಮಾಡಿ ಮನವೊಲಿಕೆ ಮಾಡ್ತೀವಿ. ನಮ್ಮವರೇ ಹೆಚ್ಚು ಬಂಡಾಯ ಎದ್ದರೆ ಕಷ್ಟ. ಮನವೊಲಿಕೆ ಮಾಡುವ ಕೆಲಸ ಪಕ್ಷ ಮಾಡುತ್ತದೆ. ಅಂತಿಮವಾಗಿ ಯಾರು ಗೆಲ್ತಾರೆ ಎಂಬ ಮಾಹಿತಿ ಆಧಾರದ ಮೇಲೆಯೇ ಟಿಕೆಟ್ ಕೊಟ್ಟಿರುತ್ತಾರೆ. ಈ ವಿಚಾರದಲ್ಲಿ ಪಕ್ಷದ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದಿದ್ದಾರೆ.

ಶಾಸಕ ಸತೀಶ್ ಸೈಲ್ ಬಂಧನ ವಿಚಾರ 2009ರ ಕೇಸ್ ಇದಾಗಿದ್ದು, ಅನಧಿಕೃತ ಗಣಿಗಾರಿಕೆ ಎಂದು ಕೋರ್ಟ್ ಹೇಳಿದೆ. ಹಿಂದೆ ಸೀಜ್ ಮಾಡಲಾಗಿತ್ತು. ಗೊತ್ತಿಲ್ಲದಂತೆ ರಫ್ತು ಮಾಡಿದ್ದರು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಹಿಂದೆಯೂ ಅರೆಸ್ಟ್ ಆಗಿದ್ದರು, ನಂತರ ಬೇಲ್ ಮೇಲೆ ಬಿಟ್ಟಿದ್ದರು. ಕಾನೂನಿನಲ್ಲಿ ಮುಂದೆ ಏನಾಗಲಿದೆ ಎಂದು ನೋಡೋಣ ಎಂದಿದ್ದಾರೆ.

ಮುಡಾ ಕೇಸ್ ವಿಚಾರವಾಗಿ, ಸಿಎಂ ಮೇಲ್ಮನವಿ ಸಲ್ಲಿಸಿದ್ದಾರೆ. ಡಬ್ಬಲ್ ಬೆಂಚ್‌ಗೆ ಹೋಗೋದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಕೋರ್ಟ್‌ನಲ್ಲಿ ಏನು ತೀರ್ಮಾನ ಆಗುತ್ತೆ ನೋಡೋಣ ಎಂದಿದ್ದಾರೆ. ಇದನ್ನೂ ಓದಿ: ಸಂಡೂರು ಉಪ ಚುನಾವಣೆ| 2.5 ಕೆ.ಜಿ ಚಿನ್ನ, 25 ಕೆಜಿ ಬೆಳ್ಳಿ – ಬಂಗಾರು ಬಳಿ ಆಸ್ತಿ ಎಷ್ಟಿದೆ?

Share This Article