-ಸಂಪುಟದಲ್ಲಿ ದಲಿತ, ಒಬಿಸಿ ವರ್ಗದ ನಿರ್ಲಕ್ಷ್ಯ ಎಂದು ಅಸಮಾಧಾನ
ಬೆಂಗಳೂರು: ರಾಜ್ಯದ ಐವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿರುವುದನ್ನು ಸ್ವಾಗತಿಸುತ್ತೇನೆ. ಐವರು ರಾಜ್ಯದ ಸಮಸ್ಯೆಗಳನ್ನು ಕೇಂದ್ರದ ಮಟ್ಟದಲ್ಲಿ ಪರಿಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಗೃಹಸಚಿವ ಜಿ.ಪರಮೇಶ್ವರ್ (G.Parameshwar) ತಿಳಿಸಿದ್ದಾರೆ.
Advertisement
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರು ವಿಫಲರಾದರೆ ಅವರಿಗೂ, ಅವರ ಪಕ್ಷಕ್ಕೂ ನಷ್ಟವಾಗಲಿದೆ. ನಮ್ಮ ಸಮಸ್ಯೆಗಳನ್ನು ಕೇಂದ್ರದಲ್ಲಿ ಬಗೆಹರಿಸದಿದ್ದರೆ ಸಹಜವಾಗಿ ಅವರನ್ನು ದೂರಬೇಕಾಗುತ್ತದೆ. ಇದಕ್ಕೆ ಅವರು ಅವಕಾಶ ಕೊಡುವುದಿಲ್ಲ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: NCP ನಾಯಕ ಪ್ರಫುಲ್ ಪಟೇಲ್‌ಗೆ ಬಿಗ್ ರಿಲೀಫ್ – 180 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಇಡಿ ಆದೇಶ ರದ್ದು!
Advertisement
ನೂತನ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ವಿಚಾರವಾಗಿ, ಅವರು ಎರಡು ಸಲ ಸಿಎಂ ಆಗಿದ್ದವರು. ಈಗ ಕೇಂದ್ರದಲ್ಲಿ ಸಚಿವರಾಗಿ ಆಯ್ಕೆ ಆಗಿದ್ದಾರೆ. ಸ್ವಾಭಾವಿಕವಾಗಿ ಅವರಿಗೆ ಕೇಂದ್ರದ ಸಹಕಾರ ಇದ್ದೇ ಇರುತ್ತದೆ. ಇದನ್ನ ಉಪಯೋಗ ಮಾಡಿಕೊಂಡು ಅವರು ರಾಜ್ಯದ ಹಿತಾಸಕ್ತಿ ಕಾಪಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
Advertisement
Advertisement
ಕೇಂದ್ರದ ಸಂಪುಟದಲ್ಲಿ ರಾಜ್ಯದ ದಲಿತ ಹಾಗೂ ಒಬಿಸಿಗೆ ಪ್ರಾಮುಖ್ಯತೆ ಕೊಡದ ವಿಚಾರವಾಗಿ, ಕೇಂದ್ರದ ಬಿಜೆಪಿಗೆ ದಲಿತ, ಒಬಿಸಿ ಸಂಸದರು ಬೇಕಾಗಿಲ್ಲ ಎಂದು ಕಾಣುತ್ತದೆ. ರಾಜ್ಯದಿಂದ ದಲಿತ, ಒಬಿಸಿ ಸಮುದಾಯದವರೂ ಆಯ್ಕೆಯಾಗಿದ್ದಾರೆ. ಅವರಿಗೂ ಸಚಿವ ಸ್ಥಾನ ಕೊಡಬೇಕಿತ್ತು. ಈ ಎರಡೂ ಸಮುದಾಯಗಳನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಹೆಚ್ಚುವರಿ ಡಿಸಿಎಂ ಹುದ್ದೆಗಳ ಚರ್ಚೆ ನಡೆದಿಲ್ಲ: ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಕುರಿತು ಚರ್ಚೆ ನಡೆಯುತ್ತಿಲ್ಲ. ಯಾರೋ ನಾಲ್ಕು ಜನ ಮಾತಾಡ್ತಾರೆ ಎಂದ ಮಾತ್ರಕ್ಕೆ ಅದು ಪಕ್ಷದ ವಿಚಾರ ಆಗಲ್ಲ. ಪಕ್ಷದಲ್ಲಿ ಅದರ ಬಗ್ಗೆ ಚರ್ಚೆ ನಡೆದಿಲ್ಲ. ಹೆಚ್ಚುವರಿ ಡಿಸಿಎಂ ಸೃಷ್ಟಿ ಮಾಡಬೇಕೋ ಬೇಡವೋ ಎಂಬುದನ್ನು ವರಿಷ್ಠರು ತೀರ್ಮಾನ ಮಾಡ್ತಾರೆ. ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂದು ಹೈಕಮಾಂಡ್‍ಗೆ ಎನಿಸಿದರೆ ಈ ತೀರ್ಮಾನ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ವೈಷ್ಣೋದೇವಿ ದರ್ಶನಕ್ಕೆ (Vaishno Devi Temple) ತೆರಳಿದ್ದ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಉಗ್ರರ ದಾಳಿಯಿಂದ 10 ಜನ ದುರ್ಮರಣ ಹೊಂದಿರುವ ವಿಚಾರವಾಗಿ, ಇದೊಂದು ದುರಾದೃಷ್ಟಕರ ಘಟನೆ. ಮೋದಿ ಪದಗ್ರಹಣ ಕಾರ್ಯಕ್ರಮದ ದಿನದಂದೇ ಈ ದಾಳಿಯಾಗಿದೆ. ಈ ದಾಳಿ ತಪ್ಪಿಸಲು ಹೋಗಿ ಬಸ್ ಕಂದಕಕ್ಕೆ ಬಿದ್ದಿದೆ. ಇದರಲ್ಲಿ ಭದ್ರತಾ ಲೋಪ ಆಗಿದೆ. ಯಾವುದೇ ಉಗ್ರರ ದಾಳಿ ನಡೆದಿಲ್ಲ, ಮಿಲಿಟರಿ ಆಪರೇಷನ್ ಇಲ್ಲ ಎನ್ನುತ್ತಿದ್ದರು. ಈಗ ಬೇರೆ ರೀತಿ ಆಗಿದೆ, ಇನ್ನಷ್ಟು ರಕ್ಷಣೆ ಕೊಡಬೇಕಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿದ್ದ ಬಸ್ ಮೇಲೆ ದಾಳಿ – ಹೊಣೆ ಹೊತ್ತ ಪಾಕ್ ಉಗ್ರ ಸಂಘಟನೆ