ಬೆಂಗಳೂರು: ನಮ್ಮ ಸರ್ಕಾರದ ವಿರುದ್ಧ ಜನರ ಆಕ್ರೋಶ ಇಲ್ಲ. ಬಿಜೆಪಿ ಪಕ್ಷದವರು ಕಾಣೆ ಆಗುತ್ತೇವೆ ಅನ್ನೋ ಭಯದಲ್ಲಿ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಎಂದು ಗೃಹಸಚಿವ ಜಿ.ಪರಮೇಶ್ವರ್ (G Parameshwar) ಲೇವಡಿ ಮಾಡಿದರು.
ಇಂದಿನಿಂದ ಬಿಜೆಪಿಯಿಂದ (BJP) ಜನಾಕ್ರೋಶ ಯಾತ್ರೆ ಪ್ರಾರಂಭದ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರಿಗೆ ನಮ್ಮ ಸರ್ಕಾರದ ಯಶಸ್ಸು ತಡೆಯಲು ಆಗುತ್ತಿಲ್ಲ. 2 ವರ್ಷಗಳಿಂದ ಒಳ್ಳೆ ಆಡಳಿತ ಕೊಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳನ್ನ ನಾವು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ನಮ್ಮ ಆಡಳಿತ, ಗ್ಯಾರಂಟಿ ಅನುಷ್ಠಾನ ಜನರಿಗೆ ಸಮಾಧಾನ ತಂದಿದೆ ಎಂದರು. ಇದನ್ನೂ ಓದಿ: ಬಿಜೆಪಿ ಅಸ್ತಿತ್ವಕ್ಕಾಗಿ ಜನಾಕ್ರೋಶ ಯಾತ್ರೆ ಮಾಡ್ತಿದೆ ಅಂದವರು ಅಯೋಗ್ಯರು: ವಿಜಯೇಂದ್ರ ಕಿಡಿ
ಸಿಎಂ ಅವರು ಬ್ಯಾಲೆನ್ಸ್ ಬಜೆಟ್ ಕೊಟ್ಟಿದ್ದಾರೆ. ಇದಕ್ಕೆ ಜನ ಮನ್ನಣೆ ಕೊಟ್ಟಿದ್ದಾರೆ. ಇದನ್ನೆಲ್ಲಾ ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ತಾವು ಕಳೆದು ಹೋಗುತ್ತೇವೆ ಎಂದು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ, 5 ತಿಂಗಳಲ್ಲಿ ಪರಿಹಾರ: ರಿಷಬ್‌ಗೆ ಪಂಜುರ್ಲಿ ಅಭಯ
ನಮ್ಮ ಸರ್ಕಾರದ ವಿರುದ್ಧ ಯಾವ ಜನರೂ ಆಕ್ರೋಶ ವ್ಯಕ್ತಪಡಿಸುತ್ತಿಲ್ಲ. ಬಿಜೆಪಿ ಪಕ್ಷದವರೇ ಆಕ್ರೋಶ ಮಾಡುತ್ತಿದ್ದಾರೆ ಅಷ್ಟೆ. ಆಕ್ರೋಶ ಅಂದರೆ ಜನ ಬೀದಿ ಬೀದಿಯಲ್ಲಿ ಮಾಡಬೇಕು. ನಮ್ಮ ಸರ್ಕಾರದ ವಿರುದ್ಧ ಈ ರೀತಿ ಆಗಿಲ್ಲ. ಬಿಜೆಪಿ ಅವರು ಮಾತ್ರ ಆಕ್ರೋಶ ಮಾಡುತ್ತಿದ್ದಾರೆ. ಅಷ್ಟೇ ಮಾಡಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗಳೂರು ದೊಡ್ಡ ನಗರ, ಅಲ್ಲೊಂದು-ಇಲ್ಲೊಂದು ಕಿರುಕುಳ ಘಟನೆ ಆಗುತ್ತೆ: ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ