ತುಮಕೂರು: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕ್ಷೇತ್ರದಲ್ಲಿ ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಡಿಸಿಎಂ ಸ್ವಂತ ಶಕ್ತಿಯಿಂದ ಗೆದ್ದಿಲ್ಲ. ಜೆ.ಡಿ.ಎಸ್‍ನೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿ ಗೆದ್ದಿದ್ದು ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.
ಸೋಮವಾರ ಕೊರಟಗೆರೆ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಪ್ರಚಾರದಲ್ಲಿ ತೊಡಗಿದ್ದ ಸುರೇಶ್ ಗೌಡ, ಡಿಸಿಎಂ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಡಿಸಿಎಂ ಸ್ವಂತ ಬಲದಿಂದ ಗೆದ್ದಿಲ್ಲ. ಜೆಡಿಎಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿ ಗೆದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಚೆನ್ನಿಗಪ್ಪಗೆ 5 ಕೋಟಿ ರೂ ಕೊಟ್ಟು ಸುಧಾಕರ್ ಲಾಲ್‍ರನ್ನ ಪರಮೇಶ್ವರ್ ಸೋಲಿಸಿದರು. ಆದ್ದರಿಂದ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಪರಮೇಶ್ವರ್ ಗೆಲುವಿಗೆ ಚೆನ್ನಿಗಪ್ಪ ಕಾರಣವಾದರು ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಬಳಿಕ ಅತ್ತ ಗ್ರಾಮಾಂತರ ಕ್ಷೇತ್ರದಲ್ಲೂ ಫಿಕ್ಸಿಂಗ್ ನಡೆದಿತ್ತು. ಜೆಡಿಎಸ್ ಅಭ್ಯರ್ಥಿ ಗೌರಿಶಂಕರ ಅವರನ್ನು ಗೆಲ್ಲಿಸಲು ಕಾಂಗ್ರೆಸ್ಸಿನಿಂದ ಡಮ್ಮಿ ಕಾಂಡಿಡೇಟ್ ಹಾಕಲಾಗಿತ್ತು. ಈ ಫಿಕ್ಸಿಂಗ್ ವಿಚಾರ ದೇವೇಗೌಡರಿಗೂ ಗೊತ್ತು. ಅವರ ಪಕ್ಷದವರು ಹಣ ತೆಗೆದುಕೊಂಡಿರೋದು ಅವರಿಗೆ ಗೋತ್ತಿರಲ್ವಾ? ಸಿದ್ದರಾಮಯ್ಯ ಅವರಿಗೆ ಸಿಎಂ ಸೀಟು ತಪ್ಪಿಸಿ, ಜೆಡಿಎಸ್‍ಗೆ ಸೀಟು ಕೊಡಿಸಲು ಈ ತಂತ್ರ ಮಾಡಿದ್ದಾರೆ. ಜೆಡಿಎಸ್ ಅವರನ್ನು ಕಾಂಗ್ರೆಸ್ ಜೊತೆ ಕಳುಹಿಸಿದ್ದಾಗ ದೇವೇಗೌಡ ಹಾಗೂ ಕುಮಾರಣ್ಣಗೆ ಗೊತ್ತಿರಲಿಲ್ವಾ? ಎಲ್ಲಾ ಮ್ಯಾಚ್ ಫಿಕ್ಸ್ ಮಾಡಿಸಿ ಜೆಡಿಎಸ್ ಅವರನ್ನ ಕಾಂಗ್ರೆಸ್‍ಗೆ ಕಳುಹಿಸಿ ಸುಧಾಕರ್ ಲಾಲ್ ಅವರನ್ನು ಚೆನ್ನಿಗಪ್ಪ ಸೋಲಿಸಿದರು ಎಂದು ಟೀಕಿಸಿದರು.