ಕೊಪ್ಪಳ: ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣ (Valmiki Development Corporation scam) ದೇಶದಲ್ಲೇ ನಡೆದ ದೊಡ್ಡ ಹಗರಣವಾಗಿದೆ. ಈ ಹಗರಣದಲ್ಲಿ ರಾಜೀನಾಮೆ ಕೊಡಬೇಕಾಗಿರುವುದು ಸಿಎಂ ಸಿದ್ದರಾಮಯ್ಯನವರ (Siddaramaiah) ಹೊರತು ಬೇರೆ ಯಾರು ಅಲ್ಲ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ (G.Janardhana Reddy) ಹೇಳಿದ್ದಾರೆ.
ಗಂಗಾವತಿಯಲ್ಲಿ ಮಾತನಾಡಿದ ಅವರು, ಈ ಹಗರಣದಲ್ಲಿ ನಾಗೇಂದ್ರ ಒಬ್ಬರೇ ಇರಲು ಸಾಧ್ಯವಿಲ್ಲ. ಇನ್ನೂ ಹಲವರು ಇದರ ಹಿಂದೆ ಇದ್ದಾರೆ. ಸಿಎಂ ಹಿಡಿತದಲ್ಲಿರುವ ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ಖಾಸಗಿ ಖಾತೆಗಳಿಗೆ ಹಣ ಜಮಾ ಮಾಡಿದ್ದಾರೆ. ಇದೆ ಹಣವನ್ನು ವಿವಿಧ ಕಡೆಗಳಲ್ಲಿ ಚುನಾವಣೆಗೆ ಬಳಕೆ ಮಾಡಿದ್ದಾರೆ. ಸಿಎಂ ಅವರ ನಿರ್ದೇಶನವಿಲ್ಲದೆ ಈ ಹಗರಣ ನಡೆದಿದೆ ಎಂದರೆ ಇದನ್ನು ಯಾರು ನಂಬಲು ಸಾಧ್ಯವಿಲ್ಲ. ಇದಕ್ಕೆಲ್ಲ ಸಿಎಂ ಅವರದ್ದೇ ನಿರ್ದೇಶನ ಇರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಗ್ಯಾಂಗ್ ಅಂದರ್ – ಹಾಸ್ಯ ನಟ ಚಿಕ್ಕಣ್ಣಗೆ ನೋಟಿಸ್
ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ, ಬೆಲೆ ಏರಿಕೆ ಮಾಡಿ ನಾಚಿಕೆ ಇಲ್ಲದೆ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಬೇಕು ಎಂದು ಕಾಂಗ್ರೆಸ್ ಸಚಿವರು ಮಾತನಾಡುತ್ತಿದ್ದಾರೆ. ಜನರ ರಕ್ತ ಕುಡಿದು ಜನರಿಗೆ ಮರಳಿ ಹಣ ಕೊಡುತ್ತಿದ್ದಾರೆ. ರಾಜ್ಯದ ಜನರನ್ನು ಬೀದಿಗೆ ತರುವ ಸ್ಥಿತಿಗೆ ಕಾಂಗ್ರೆಸ್ ತಂದಿದೆ. ಸರ್ಕಾರ ಈ ಗ್ಯಾರಂಟಿ ಯೋಜನೆಗಳನ್ನ ಮುಂದುವರೆಸಲು ಸಾಧ್ಯವಿಲ್ಲ. ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ತಿರುಗಿ ಬೀಳುವ ಸ್ಥಿತಿಯಲ್ಲಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎಂದು ಅವರು ಹೇಳಿದ್ದಾರೆ.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿನ ವಿಚಾರವಾಗಿ, ಹೊಸ ಅಭ್ಯರ್ಥಿಯ ಪರಿಚಯ ಹಾಗೂ ಕರಡಿ ಸಂಗಣ್ಣ ಅವರ ಗೊಂದಲದ ವಿಚಾರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಸಾವಿನ ಬಗ್ಗೆ ಭಾವನಾತ್ಮವಾಗಿ ಮಾತಾಡಿರುವುದು, ಎಲ್ಲವೂ ಸೇರಿ ನಮ್ಮ ಅಭ್ಯರ್ಥಿಗೆ ಸೋಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಕ್ರೀದ್ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯಗೆ ಅಮಾಮ್ ಟೋಪಿ ಹಾಕಿ ಸನ್ಮಾನ