ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯಲ್ಲಿ (Hampi) ಇದೇ ಮೊದಲ ಬಾರಿಗೆ ಜಿ-20 ಶೃಂಗಸಭೆ (G-20 Summit) ನಡೆಯುತ್ತಿದೆ. ಜುಲೈ 9ರಿಂದ 16 ರವರೆಗೆ ನಡೆಯಲಿರುವ ಜಿ-20 ಶೃಂಗಸಭೆಗೆ ಹಂಪಿ ನವವಧುವಿನಂತೆ ಶೃಂಗಾರಗೊಂಡಿದೆ. ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಿ-20 ಸಲುವಾಗಿ ಹಂಪಿಯಲ್ಲಿ ಕೈಗೊಳ್ಳಲಾಗಿದೆ.
ಜಿ-20 ಶೃಂಗಸಭೆಗೆ ಈ ಬಾರಿಯ ಅಧ್ಯಕ್ಷೀಯ ರಾಷ್ಟ್ರ ಭಾರತವಾಗಿದೆ. ಅದಕ್ಕಾಗಿಯೇ ಅತಿ ಮುಖ್ಯವಾದ ಜಿ-20 ಶೃಂಗಸಭೆಯ 3ನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಇಂದಿನಿಂದ 16 ರವರೆಗೆ ನಡೆಯಲಿದೆ. 3 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 3 ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ಹಂಪಿಯಲ್ಲಿ ನಡೆಯಲಿದೆ.
Advertisement
Welcome to glorious #Hampi!????✨
A @UNESCO World Heritage Site that symbolises India’s rich history & architectural beauty, this majestic city is ready to welcome #G20India delegates for the 3⃣rd Culture Working Group Meeting.
????️ July 9-12#G20CWG #G20India pic.twitter.com/zvoHxFJqJB
— G20 India (@g20org) July 8, 2023
Advertisement
ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ಹಂಪಿ ಪ್ರದೇಶದ ಸುತ್ತಮುತ್ತಲಿನ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ. ಸ್ಮಾರಕಗಳ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ. 43 ರಾಷ್ಟ್ರಗಳ 20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿರುವುದರಿಂದ ಹಂಪಿಯ ಸುತ್ತಮುತ್ತ ಎಲ್ಲೆಡೆ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಮೇಘಸ್ಫೋಟ – ಸಂಕಷ್ಟದಲ್ಲಿ ರಾಜ್ಯದ 83 ಅಮರನಾಥ ಯಾತ್ರಿಕರು
Advertisement
Advertisement
ಶೃಂಗಸಭೆಗೆ 20 ದೇಶಗಳ ಪೈಕಿ 19 ದೇಶಗಳ 30 ಪ್ರತಿನಿಧಿಗಳು, 9 ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು ಸೇರಿದಂತೆ ಒಟ್ಟು 52 ಗಣ್ಯರು ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಮಹಿ ಗ್ರೌಂಡ್ ಹೊರಗೂ ಲೆಜೆಂಡ್ – ಸಾವಿರ ಕೋಟಿ ದಾಟಿತು ಆಸ್ತಿ ಮೌಲ್ಯ
Web Stories