ಬೆಂಗಳೂರು: ರಾಜಧಾನಿ ಸಿಲಿಕಾನ್ ಸಿಟಿ ರಾಷ್ಟ್ರಮಟ್ಟದ ಸಭೆ, ಸಮಾರಂಭಗಳಿಗೆ ಸಾಕ್ಷಿಯಾಗುತ್ತಿದೆ. ಬೇರೆ ರಾಜ್ಯಗಳ, ವಿದೇಶದ ಜನರು ಸಿಲಿಕಾನ್ ಸಿಟಿಯತ್ತ ಮುಖ ಮಾಡುತ್ತಿದ್ದಾರೆ. ಈ ತಿಂಗಳಲ್ಲೇ ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹ, ಜಿ-20, ಏರ್ ಶೋ (G-20 Air Show) ಗಳು ನಡೆಯುತ್ತಿವೆ.
ಇದೇ ಫೆ.13ರಿಂದ 17ರ ತನಕ ಏರ್ ಶೋ ಆಯೋಜಿಸಲಾಗಿದೆ. ಹೀಗಾಗಿ ಹೊರ ರಾಜ್ಯ ಹಾಗೂ ವಿದೇಶದ ಪ್ರತಿನಿಧಿಗಳು ಬೆಂಗಳೂರಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ನಗರದ ಥ್ರೀ ಸ್ಟಾರ್, ಫೈವ್ ಸ್ಟಾರ್ ಹೋಟೆಲ್ (Five Star Hotel) ಗಳು ಆಲ್ ಮೋಸ್ಟ್ ಭರ್ತಿಯಾಗಿವೆ. ಒಂದು ಅಂದಾಜಿನ ಪ್ರಕಾರ 50 ಸಾವಿರ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಅಂತಾ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
ಕೆಲ ಹೋಟೆಲ್ ಗಳಲ್ಲಿ ಕೆಲವು ಕೊಠಡಿಗಳು ಸಿಕ್ಕರೂ, ಅವುಗಳ ರೇಟ್ ಸಹ ದುಪ್ಪಟಾಗಿದೆ. ಮೂರುಪಟ್ಟು, ನಾಲ್ಕುಪಟ್ಟು ಹೆಚ್ಚು ದರ ಕೊಟ್ಟು ಬುಕ್ ಮಾಡಬೇಕಾದ ಅನಿವಾರ್ಯ ಪರಸ್ಥಿತಿ ಬಂದಿದೆ. ಹೀಗಾಗಿ ಬೆಂಗಳೂರಿನ ಬಹುತೇಕ ಹೋಟೆಲ್ಗಳಲ್ಲಿ ಕೊಠಡಿಗಳು ಖಾಲಿ ಇಲ್ಲ. ಫೆ.20ರ ತನಕ ಇದೇ ಪರಿಸ್ಥಿತಿ ಇರಲಿದೆ ಅಂತಾ ಹೋಟೆಲ್ ಅಸೋಸಿಯೇಷನ್ನವರು ಹೇಳುತ್ತಾರೆ.
ಒಟ್ಟಿನಲ್ಲಿ ಬೆಂಗಳೂರು ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದು, ಬೆಂಗಳೂರಿನ ಹೋಟೆಲ್ ಗಳಲ್ಲಿ ರೂಮ್ ಸಿಗೋದು ಕಷ್ಟ ಆಗಿದೆ. ಇದನ್ನೂ ಓದಿ: ಸಂಚಾರಿ ಪೊಲೀಸರ ಖಜಾನೆಗೆ ಕೋಟಿ ಕೋಟಿ ದಂಡ – 6 ದಿನದಲ್ಲಿ 51 ಕೋಟಿ ವಸೂಲಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k