ಹುಬ್ಬಳ್ಳಿ: ಭಾವಿ ಪತಿಯ ಕಿರುಕುಳದಿಂದ ಮನನೊಂದು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂತೋಷ ನಗರದಲ್ಲಿ ನಡೆದಿದೆ.
ಪವಿತ್ರ (25) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಸೆ.1 ರಂದು ಹಾವೇರಿಯ ಅಭಿನಂದನ್ ಜೊತೆಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಪವಿತ್ರಾ ಭಾವಿ ಪತಿ ಅಭಿನಂದನ್ ಕಿರುಕುಳದಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ: ರಕ್ಷಿತಾ
ಈ ಜೋಡಿ ಕಳೆದವಾರ ದಾಂಡೇಲಿಯಲ್ಲಿ ಫ್ರಿ ವೆಡ್ಡಿಂಗ್ ಶೂಟಿಂಗ್ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಬಂದ ಮೇಲೆ ಪವಿತ್ರಗೆ ವಿಪರಿತ ಕಿರುಕುಳ ನೀಡಿದ್ದನಂತೆ. ಆಕೆಯ ನಡತೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದ. ಇದರಿಂದ ಮನನನೊಂದ ಪವಿತ್ರ ಇಂದು ಮನೆಯಲ್ಲೆ ನೇಣಿಗೆ ಶರಣಾಗಿದ್ದಾಳೆ ಎಂದು ಭಾವಿ ಪತಿ ಅಭಿನಂದನ್ ವಿರುದ್ದ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ