ಬೆಂಗಳೂರು: ವಿಧಾನಸಭೆ ಮೊಗಸಾಲೆಯಲ್ಲಿ ಇವತ್ತು ಸ್ವಾರಸ್ಯಕರ ಚರ್ಚೆ ನಡೆಯಿತು. ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಆಹೋರಾತ್ರಿ ಧರಣಿ ನಡೆಸುತ್ತಿದೆ. ಈ ವೇಳೆ ಯೋಗ ಕ್ಷೇಮ ವಿಚಾರಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ದರಾಮಯ್ಯ ಬಳಿ ಬಂದ್ರು. ಮೊಗಸಾಲೆಯಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ರು. ಆ ವೇಳೆ ಸಿದ್ದರಾಮಯ್ಯ ಹಾರಿಸಿದ ಹಾಸ್ಯ ಚಟಾಕಿ ಎಲ್ಲರ ಗಮನ ಸೆಳೆಯಿತು.
Advertisement
ಅಂದಹಾಗೆ ಆಹೋರಾತ್ರಿ ಧರಣಿ ಮಾಡ್ತಿರುವಾಗ ನಿಮಗೆ ಏನಾದ್ರೂ ಅಗತ್ಯ ಇದೆಯಾ ಹೇಳಿ ಅಂತಾ ಸ್ಪೀಕರ್ ಕೇಳ್ತಾರೆ. ಆಗ ಸಿದ್ದರಾಮಯ್ಯ ರಿಯಾಕ್ಟ್ ಮಾಡಿ ಈ ಹಿಂದೆ ನಾವು ಧರಣಿ ಮಾಡಿದಾಗ ವಿಧಾನಸಭೆಯಲ್ಲಿ ಹೆಗ್ಗಣಗಳು ಇದ್ವು, ಈಗ ಏನ್ ಕಥೆಯೋ ಅಂತಾ ನಗು ನಗುತ್ತಾ ಹೇಳ್ತಾರೆ. ತಕ್ಷಣವೇ ಸ್ಯಾನಿಟೈಸ್ ಮಾಡಿಸಿದಾಗ ಹೆಗ್ಗಣಗಳು ಹೋಗಿವೆ, ಇಲ್ಲ ಸರ್, ಇಲಿಗಳು ಇರಬಹುದು ಅಂತಾ ಎಂದ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಹೇಳ್ತಾರೆ. ಆಗ ಸ್ಪೀಕರ್ ಮಧ್ಯಪ್ರವೇಶ ಮಾಡಿ ಹೆಗ್ಗಣಗಳು ಬಂದ್ರೆ ಸ್ಪೀಕರ್ ಅವರೇ ಬಿಟ್ಟಿದ್ದಾರೆ ಅಂತೇಳ್ಬೇಡಿ ಎಂದು ಸಿದ್ದರಾಮಯ್ಯ ಕಾಲೆಳೆದ್ರು. ಆಗ ಮೊಗಸಾಲೆಯಲ್ಲಿ ಇದ್ದ ಶಾಸಕರೆಲ್ಲರೂ ನಗೆಗಡಲಲ್ಲಿ ತೇಲಿದ್ರು. ಇದನ್ನೂ ಓದಿ: ಕಲಾಪ ಹಾಳು ಮಾಡುತ್ತಿರುವವರನ್ನು ಸದನದಿಂದ ಹೊರಹಾಕಿ: ಹೆಚ್‍ಡಿಕೆ
Advertisement
Advertisement
ಸಿದ್ದರಾಮಯ್ಯ ಸ್ಪೀಕರ್ ಮಧ್ಯೆ ಸ್ವಾರಸ್ಯಕರ ಮಾತುಕತೆ:
ಸ್ಪೀಕರ್: ನಿಮಗೆ ಏನಾದರೂ ಅಗತ್ಯ ಇದ್ದರೆ ಹೇಳಿ
ಸಿದ್ದರಾಮಯ್ಯ: ಏನಿಲ್ಲ, ವಿಧಾನಸಭೆಯಲ್ಲಿ ಕಳೆದ ಬಾರಿ ಮಲಗಿದ್ದಾಗ ಹೆಗ್ಗಣಗಳು ಕಾಟ ಕೊಟ್ಟಿದ್ದವು
ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ: ಈಗ ಹೆಗ್ಗಣಗಳಿಲ್ಲ ಸಾರ್, ಸ್ಯಾನಿಟೈಸ್ ಮಾಡಿದ್ದೇವೆ, ಎಲ್ಲೋ ಸಣ್ಣ ಪುಟ್ಟ ಇಲಿಗಳು ಇರಬಹುದು
ಸ್ಪೀಕರ್: ಇವತ್ತೂ ಏನಾದ್ರೂ ಹೆಗ್ಗಣ ಬಂದ್ರೆ ಸ್ಪೀಕರ್ ಅವರೇ ಬಿಟ್ಟಿದ್ದು ಅಂತ ಮಾತ್ರ ಹೇಳಬೇಡಿ (ನಗೆಗಡಲಲ್ಲಿ ತೇಲಿದ ಶಾಸಕರು) ಇದನ್ನೂ ಓದಿ: ಶುಕ್ರವಾರವಾದರೂ ಹಿಜಬ್ ಧರಿಸಲು ಅನುಮತಿ ನೀಡಿ: ವಿನೋದ್ ಕುಲಕರ್ಣಿ