ಬಾಗಲಕೋಟೆ: ಸೇನಾ ಟೆಂಟ್ ನಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ವಿದ್ಯುತ್ ತಗುಲಿ ಮೃತಪಟ್ಟ ಯೋಧನ ಅಂತ್ಯ ಸಂಸ್ಕಾರ ಇಂದು ಬಾಗಲಕೋಟೆ ಜಿಲ್ಲೆಯ ಸ್ವಗ್ರಾಮ ರಕ್ಕಸಗಿಯಲ್ಲಿ ನಡೆಯಲಿದೆ.
36 ವರ್ಷದ ಪಾಪಣ್ಣ ಯರನಾಳ ಮೃತ ಯೋಧನಾಗಿದ್ದು, ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ನಿವಾಸಿಯಾಗಿದ್ದಾರೆ. ಇಂದು ಬೆಳಗ್ಗೆ11 ಗಂಟೆ ಸುಮಾರಿಗೆ ಮೃತ ಯೋಧನ ಅಂತ್ಯಸಂಸ್ಕಾರ ರಕ್ಕಸಗಿ ಗ್ರಾಮ ಪಂಚಾಯತ್ ಪಕ್ಕದ ಸರ್ಕಾರಿ ಜಾಗದಲ್ಲಿ ನಡೆಯಲಿದೆ.
ಪಾಪಣ್ಣ ಮದ್ರಾಸ್ ರೆಜಿಮೆಂಟ್ ನಲ್ಲಿ ಬಿ.ಎಸ್.ಎಫ್ ಯೋಧರಾಗಿದ್ದು, ಗುಜರಾತ್ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದ್ರೆ ಜುಲೈ 17 ರಂದು ಗುಜರಾತ್ ನ ಜಾಮ್ ಸೇನಾ ಟೆಂಟ್ ನಲ್ಲಿ ವಿದ್ಯುತ್ ತಗುಲಿ ಮೃತರಾಗಿದ್ದರು.
17 ವರ್ಷದಿಂದ ಬಿ ಎಸ್.ಎಪ್ ನಲ್ಲಿದ್ದ ಪಾಪಣ್ಣ ಇನ್ನು ಮೂರು ತಿಂಗಳಲ್ಲಿ ನಿವೃತ್ತಿಯಾಗಲಿದ್ದರು. ಆದ್ರೆ ಯೋಧ ಪಾಪಣ್ಣನ ಸಾವಿನಿಂದ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಇನ್ನು ಮೃತ ಯೋಧನ ಪಾರ್ಥಿವ ಶರೀರವನ್ನು ಅಮೀನಗಢ ಪಟ್ಟಣದಿಂದ ತೆರೆದ ವಾಹದಲ್ಲಿ ಮೆರವಣಿಗೆ ಮೂಲಕ ರಕ್ಕಸಗಿ ಗ್ರಾಮಕ್ಕೆ ತರಲಾಗುತ್ತದೆ. ಬಳಿಕ ಸಕಲ ಸರಕಾರಿ ಮತ್ತು ಸೇನಾಗೌರವದ ಮೂಲಕ ಹಿಂದೂ ಪದ್ದತಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತೆ. ಪತ್ನಿ, ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಪಾಪಣ್ಣ ಅಗಲಿದ್ದಾರೆ.