ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಕ್ರಮ ಹಣ ವರ್ಗಾವಣೆ ಆರೋಪದ ಅಡಿ ಜೈಲು ಸೇರಿರುವ ಮಾಜಿ ಸಚಿವ ನಾಗೇಂದ್ರ (Nagendra) ಅವರು ಲೋಕಸಭಾ ಚುನಾವಣೆಯ (Lok Sabaha Election) ಸಂದರ್ಭದಲ್ಲಿ ಮತದಾರರಿಗೆ ಮದ್ಯ ಹಂಚಲು ಗಿಫ್ಟ್ ಕೂಪನ್ ಹಂಚಿಕೆ ಮಾಡಿದ್ದರು ಎಂದು ಜಾರಿ ನಿರ್ದೇಶನಾಲಯ (ED) ಗಂಭೀರ ಆರೋಪ ಮಾಡಿದೆ.
ನಾಗೇಂದ್ರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಇಡಿ ರಿಮ್ಯಾಂಡ್ ಕಾಪಿ (Remand Copy) ಸಲ್ಲಿಕೆ ಮಾಡಿತ್ತು. ಅದರ ಎಕ್ಸ್‌ಕ್ಲೂಸಿವ್ ಕಾಪಿ ಪಬ್ಲಿಕ್ ಟಿವಿಗೆ ಈಗ ಲಭ್ಯವಾಗಿದೆ. ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗೆ ಅಕ್ರಮವಾಗಿ ಬಳಕೆ ಮಾಡಿರುವುದರ ಬಗ್ಗೆ ಈ ಹಿಂದೆ ಇಡಿ ಉಲ್ಲೇಖ ಮಾಡಿತ್ತು. ಈಗ ಇನ್ನೊಂದಿಷ್ಟು ಮಾಹಿತಿಯನ್ನು ಕಲೆಹಾಕಿ ನ್ಯಾಯಾಲಯಕ್ಕೆ ವಿವರಣೆ ನೀಡಿದೆ. ಇದನ್ನೂ ಓದಿ: ಐಎನ್‌ಎಸ್ ಬ್ರಹ್ಮಪುತ್ರ ನೌಕೆಯಲ್ಲಿ ಅಗ್ನಿ ದುರಂತ; ಓರ್ವ ಸಿಬ್ಬಂದಿ ನಾಪತ್ತೆ – ಒಂದು ಕಡೆ ವಾಲಿದ ನೌಕೆ
ರಿಮ್ಯಾಂಡ್ ಕಾಪಿಯಲ್ಲಿ ಏನಿದೆ?
ನಾಗೇಂದ್ರ ಬಳಿ ಮೂರು ಮೊಬೈಲ್‌ಗಳು ಇದ್ದವು. ಹಗರಣ ಬೆಳಕಿಗೆ ಬಂದ ಬಳಿಕ ನಾಶ ಮಾಡಿದ್ದಾರೆ. ಇದರ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಹಣದ ರಾಶಿ ಸುರಿದಿರುವುದಕ್ಕೆ ಪೂರಕವಾದ ಡಿಜಿಟಲ್ ಸಾಕ್ಷ್ಯ ಮತ್ತು ಫೋಟೋ ಸಿಕ್ಕಿವೆ. ಆದರೆ ಇದನ್ನು ನಾಗೇಂದ್ರ ಒಪ್ಪಿಕೊಂಡಿಲ್ಲ.
ಹೈದರಾಬಾದ್‌ನಲ್ಲಿ ಲಿಕ್ಕರ್ ವ್ಯಾಪಾರಿಗಳ ಜೊತೆ ಡೀಲ್ ಮಾಡಿದ್ದಾರೆ. ಹಣವನ್ನು ವ್ಯಾಪಾರಿಗಳಿಂದ ಪಡೆದುಕೊಂಡಿದ್ದು ಇದರ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಹೈದರಾಬಾದ್ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಗಿಫ್ಟ್ ಕೂಪನ್ ನೀಡಲಾಗಿದೆ.1.40 ಕೋಟಿ ರೂ. ಮೌಲ್ಯದ ಕೂಪನ್ ನೀಡಿರೋದಕ್ಕೆ ಪೂರಕ ಸಾಕ್ಷ್ಯ ಸಿಕ್ಕಿದೆ.