ಬೆಂಗಳೂರು: ಪಿಎಂ ಆವಾಸ್ ಯೋಜನೆಯಲ್ಲಿ ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಗಳಿಗೆ ಅನುದಾನ ಹೆಚ್ಚಳವಾಗಿದೆ. ಆದರೆ ಕರ್ನಾಟಕಕ್ಕೆ ಅರ್ಧದಷ್ಟು ಅನುದಾನ ಕಡಿತವಾಗಿದೆ. ಕೇಂದ್ರದಿಂದ ಕರ್ನಾಟಕಕ್ಕೆ ಯಾಕೆ ಈ ತಾರತಮ್ಯ? ರಾಜ್ಯದ ಜನರು ಬಿಜೆಪಿಗೆ ವೋಟ್ ಹಾಕಿದ ತಪ್ಪಿಗೆ ಈ ಶಿಕ್ಷೆಯೇ ಎಂದು ಕೇಂದ್ರ ಸರ್ಕಾರದ ವಿರುದ್ಧ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
Advertisement
ಟ್ವೀಟ್‍ನಲ್ಲಿ ಏನಿದೆ?
ಜಿಎಸ್‍ಟಿ ಪರಿಹಾರದಲ್ಲೂ ರಾಜ್ಯಕ್ಕೆ ಅನ್ಯಾಯ. ಜಿಎಸ್‍ಟಿ ಬಾಕಿಯಲ್ಲೂ ಅನ್ಯಾಯ. 5,495 ಕೋಟಿ ರೂ. ವಿಶೇಷ ಅನುದಾನದಲ್ಲೂ ರಾಜ್ಯಕ್ಕೆ ಅನ್ಯಾಯ. ಈಗ ಪಿಎಂ ಆವಾಸ್ ಯೋಜನೆಯ ಅನುದಾನದಲ್ಲೂ ಅನ್ಯಾಯ. ಬಿಜೆಪಿಯ 25 ಸಂಸದರನ್ನು ಆಯ್ಕೆ ಮಾಡಿದ ರಾಜ್ಯದ ಜನರಿಗೆ ಇದೇನಾ ಪ್ರತಿಫಲ? ಬಿಜೆಪಿಯವರೇ ಡಬಲ್ ಇಂಜಿನ್ ಸರ್ಕಾರದ ಸ್ವರ್ಗ ಸೃಷ್ಟಿಯೆಂದರೆ ರಾಜ್ಯಕ್ಕೆ ಅನ್ಯಾಯವೆಸಗುವುದೇ? ಇದನ್ನೂ ಓದಿ: ಸಂಪಾಜೆ ಘಾಟ್ ರಸ್ತೆಯಲ್ಲಿ ನಾಳೆಯಿಂದ ಎಲ್ಲ ವಾಹನಗಳ ಸಂಚಾರಕ್ಕೆ ಅನುಮತಿ: ಸಿಸಿ ಪಾಟೀಲ್
Advertisement
Advertisement
ಪಿಎಂ ಆವಾಸ್ ಯೋಜನೆಯಲ್ಲಿ ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಗಳಿಗೆ ಅನುದಾನ ಹೆಚ್ಚಳವಾಗಿದೆ. ಆದರೆ ಕರ್ನಾಟಕಕ್ಕೆ ಅರ್ಧದಷ್ಟು ಅನುದಾನ ಕಡಿತವಾಗಿದೆ. ಕೇಂದ್ರದಿಂದ ಕರ್ನಾಟಕಕ್ಕೆ ಯಾಕೆ ಈ ತಾರತಮ್ಯ? ರಾಜ್ಯದ ಜನರು ಬಿಜೆಪಿಗೆ ವೋಟ್ ಹಾಕಿದ ತಪ್ಪಿಗೆ ಈ ಶಿಕ್ಷೆಯೇ? ಅಥವಾ ರಾಜ್ಯದ ಜನ ಹೇಗಿದ್ದರೂ ಕೇಳುವುದಿಲ್ಲ ಎಂಬ ಉದಾಸೀನವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದಂತಚೋರರ ಬೆನ್ನಿಗೆ ನಿಂತ್ರಾ ಪ್ರಜ್ವಲ್ ರೇವಣ್ಣ? – ಸಿಎಂಗೆ ಮನೇಕಾ ಪತ್ರ