ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ವೈಯಕ್ತಿಕ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವ ಕುರಿತು ಪತ್ನಿ ಸಾಕ್ಷಿ ಸಿಂಗ್ ಕಿಡಿಕಾರಿದ್ದಾರೆ.
ಮಂಗಳವಾರ ಆಧಾರ್ ಕಾರ್ಡಿನ ನೋಂದಣಿ ಸೇವೆ ಒದಗಿಸುವ ಸಂಸ್ಥೆ ಸಿಎಸ್ ಸಿ ಇ-ಆಡಳಿತ ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ ಧೋನಿಯವರ ಆಧಾರ್ ಕಾರ್ಡಿನ ಅರ್ಜಿಯ ಚಿತ್ರವನ್ನು ಪೋಸ್ಟ್ ಮಾಡಿತ್ತು. ಇದನ್ನು ಗಮನಿಸಿದ ಸಾಕ್ಷಿ ಧೋನಿ ತಕ್ಷಣವೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟ್ವೀಟ್ ಮಾಡಿದರು.
Advertisement
Advertisement
ಈ ಟ್ವೀಟನ್ನು ಕೂಡಲೇ ಸಚಿವರು ಸಿಎಸ್‍ಸಿ ಇ ಗವರ್ನೆಸ್ಸ್ ಸರ್ವಿಸ್ ಇಂಡಿಯಾಗೆ ಟ್ಯಾಗ್ ಮಾಡಿದ್ದಾರೆ. ಮಾತ್ರವಲ್ಲದೇ `ಇದು ಸಾರ್ವಜನಿಕ ಸ್ವತ್ತು ಅಲ್ಲ, ಇದ್ರಲ್ಲಿ ಏನಾದ್ರೂ ಖಾಸಗಿ ಮಾಹಿತಿಗಳಿವೆಯೇ’ ಎಂದು ಸಚಿವರು ಸಾಕ್ಷಿಯನ್ನು ಪ್ರಶ್ನಿಸಿದ್ರು.
Advertisement
ಸಚಿವರ ಪ್ರಶ್ನೆಗೆ ಸಿಎಸ್ ಸಿ ಇ- ಆಡಳಿತ ಪೋಸ್ಟ್ ಮಾಡಿದ್ದ ಟ್ವೀಟ್ ನ ಸ್ಕ್ರೀನ್ ಶಾಟ್ ತೆಗೆದು ಫೋಟೋ ಕಳುಹಿಸುವ ಮೂಲಕ ಸಾಕ್ಷಿ `ಖಾಸಗಿ ಮಾಹಿತಿಗಳು ಬಹಿರಂಗವಾಗಲು ಇನ್ನೇನು ಉಳಿದಿದೆ ಅಂತಾ ಮರು ಪ್ರಶ್ನೆ ಹಾಕಿದ್ದಾರೆ. ಬಳಿಕ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ತಮ್ಮ ಗಮನಕ್ಕೆ ವಿಷಯವನ್ನು ತಂದಿದ್ದೀಕೆ ಸಾಕ್ಷಿ ಸಿಂಗ್ ಗೆ ಧನ್ಯವಾದ ಹೇಳಿದರು.
Advertisement
ಖಾಸಗಿ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಕಾನೂನಿಗೆ ವಿರುದ್ಧವಾದುದು. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಂತಾ ಸಚಿವರು ಧೋನಿ ಪತ್ನಿಗೆ ತಿಳಿಸಿದ್ದಾರೆ.
@rsprasad @CSCegov_ is there any privacy left ??? Information of adhaar card including application is made public property!#disappointed
— Sakshi Singh ????????❤️ (@SaakshiSRawat) March 28, 2017
@SaakshiSRawat No it is not a public property. Does this Tweet divulge any personal information?
— Ravi Shankar Prasad (@rsprasad) March 28, 2017
@rsprasad Sir personal information filled in form is leaked !
— Sakshi Singh ????????❤️ (@SaakshiSRawat) March 28, 2017
@SaakshiSRawat Thanks for bringing this to my notice. Sharing personal information is illegal. Serious action will be taken against this.
— Ravi Shankar Prasad (@rsprasad) March 28, 2017
@rsprasad thank you Sir ! Appreciate your prompt reply !
— Sakshi Singh ????????❤️ (@SaakshiSRawat) March 28, 2017