LatestMain PostNational

ಎರಡು ಲಸಿಕೆ ಪಡೆದಿದ್ದರೂ ಕೊರೊನಾಗೆ ವೈದ್ಯೆ ಬಲಿ

ಭೋಪಾಲ್: ಕೋವಿಡ್-19 ಎರಡೂ ಡೋಸ್ ಲಸಿಯನ್ನು ಪಡೆದ 54 ವರ್ಷದ ಮಹಿಳೆಯೊಬ್ಬರು ಕೊರೊನಾ ವೈರಸ್‍ನಿಂದ ಮೃತಪಟ್ಟಿರುವ ಘಟನೆ ಭೋಪಾಲ್‍ನಲ್ಲಿ ನಡೆದಿದೆ. ಒಂದು ವಾರದೊಳಗೆ ಸೋಂಕಿಗೆ ಎರಡನೇ ಬಲಿ ಇದಾಗಿದ್ದು, ಇಬ್ಬರೂ ಕೂಡ ಎರಡು ಡೋಸ್ ಕೊರೊನಾ ಲಸಿಕೆ ಪಡೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೋಪಾಲ್‍ನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದ ಮಹಿಳೆ ಎರಡೂ ಡೋಸ್  ಲಸಿಕೆಗಳನ್ನು ತೆಗೆದುಕೊಂಡಿದ್ದರು ಎಂದು ಭೋಪಾಲ್‍ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ ಪ್ರಭಾಕರ್ ತಿವಾರಿ ದೃಢಪಡಿಸಿದ್ದಾರೆ.

ಮೃತ ಮಹಿಳೆ ಭೋಪಾಲ್‍ನ ಖ್ಯಾತ ವೈದ್ಯರಾಗಿದ್ದು, ಕೊರೊನಾ ವೈರಸ್ ದೃಢಪಟ್ಟ ನಂತರ ಅವರನ್ನು ನವೆಂಬರ್ 15ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಕಾರವಾರ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೇಬರ ಪತ್ತೆ

ಮಹಿಳೆಗೆ 54 ವರ್ಷ ವಯಸ್ಸಾದ್ದು, ಗುರುವಾರ ಮಧ್ಯ ರಾತ್ರಿ 12:30ರ ಸುಮಾರಿಗೆ ಭೋಪಾಲ್‍ನ ಏಮ್ಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಮಹಿಳೆಗೆ ಯಾವುದೇ ಕಾಯಿಲೆಗಳಿರಲಿಲ್ಲ. ಆದರೆ ಅವರಗೆ ಕೊಂಚ ರಕ್ತದೊತ್ತಡದ ಸಮಸ್ಯೆ ಇತ್ತು. ಅದು ಕೂಡ ನಾರ್ಮಲ್ ಆಗಿತ್ತು ಹೇಳಲಾಗುತ್ತಿದೆ. ಇನ್ನೂ ಮಹಿಳೆಯ ಪತಿ ಕೂಡ ವೈದ್ಯರಾಗಿದ್ದಾರೆ. ಕಳೆದ ವಾರ ಇಂದೋರ್ ನಗರದಲ್ಲಿ ಸಂಪೂರ್ಣ ಲಸಿಕೆ ಪಡೆದ 69 ವರ್ಷದ ವ್ಯಕ್ತಿ ಸೋಂಕಿನಿಂದ ಸಾವನ್ನಪ್ಪಿದ್ದರು. ಇದನ್ನೂ ಓದಿ: ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್

Leave a Reply

Your email address will not be published.

Back to top button