ನವದೆಹಲಿ: ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಸಕಾರಾತ್ಮಕ ನಡೆ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ನಾನು ಮೋದಿ ಅವರೊಂದಿಗೆ ಯಾವಾಗಲೂ ಸ್ನೇಹಿತನಾಗಿರುತ್ತೇನೆ. ಅವರು ಒಬ್ಬ ಮಹಾನ್ ಪ್ರಧಾನಿ. ಅವರು ಅದ್ಭುತ ವ್ಯಕ್ತಿ. ಆದರೆ, ಈ ನಿರ್ದಿಷ್ಟ ಸಂದರ್ಭದಲ್ಲಿ ಅವರು ಇಟ್ಟಿರುವ ಹೆಜ್ಜೆ ನನಗೆ ಇಷ್ಟವಿಲ್ಲ. ಆದರೆ, ಭಾರತ (India) ಮತ್ತು ಅಮೆರಿಕ (America) ನಡುವೆ ವಿಶೇಷ ಸಂಬಂಧವಿದೆ. ಚಿಂತಿಸುವ ಅಗತ್ಯವಿಲ್ಲ ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ಹೇಳಿದ್ದರು. ಈ ಬೆನ್ನಲ್ಲೇ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ರಂಪ್ ನಡೆಯನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಮೋದಿ ನನ್ನ ಒಳ್ಳೆಯ ಸ್ನೇಹಿತ: ಮತ್ತೆ ಯೂಟರ್ನ್ ಹೊಡೆದ ಟ್ರಂಪ್
Deeply appreciate and fully reciprocate President Trump’s sentiments and positive assessment of our ties.
India and the US have a very positive and forward-looking Comprehensive and Global Strategic Partnership.@realDonaldTrump @POTUS https://t.co/4hLo9wBpeF
— Narendra Modi (@narendramodi) September 6, 2025
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಸಮಗ್ರ ಹಾಗೂ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಭಾರತ ಹಾಗೂ ಅಮೆರಿಕ ಎದುರುನೋಡುತ್ತಿವೆ ಎಂದಿದ್ದಾರೆ. ಇದನ್ನೂ ಓದಿ: ಭಾರತ ಇನ್ನೆರಡು ತಿಂಗಳಲ್ಲಿ ಟ್ರಂಪ್ ಕ್ಷಮೆಯಾಚಿಸುತ್ತೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ
ಮೋದಿ-ಪುಟಿನ್-ಜಿನ್‌ಪಿಂಗ್ ಭೇಟಿಗೆ ಟ್ರಂಪ್ ಬೇಸರ:
ಕಳೆದ ವಾರ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಸ್ಪಷ್ಟ ಸ್ನೇಹಪರತೆಯ ಬಗ್ಗೆ ಟ್ರಂಪ್ ಟೀಕಾತ್ಮಕ ಮಾತುಗಳನ್ನಾಡಿದ್ದರು. ನಾವು ಭಾರತ ಮತ್ತು ರಷ್ಯಾವನ್ನು ಚೀನಾಗೆ ಬಿಟ್ಟುಕೊಟ್ಟಿದ್ದೇವೆ ಎಂದೂ ಕೂಡ ಹೇಳಿದ್ದರು. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಿರಲಿ ಎಂದು ಟ್ರಂಪ್ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ನಾವು ಭಾರತ, ರಷ್ಯಾವನ್ನು ಚೀನಾಗೆ ಬಿಟ್ಟು ಕೊಟ್ಟಿದ್ದೇವೆ: ಟ್ರಂಪ್