– ಈಗ ಲಡಾಖ್‌ನಲ್ಲಷ್ಟೇ ಗ್ರಹಣ ಗೋಚರ
ಬೆಂಗಳೂರು: ನಭೋಮಂಡಲದ ವಿಸ್ಮಯದ ಅದ್ಭುತ ಕಣ್ತುಂಬಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಈಗಷ್ಟೇ ಚಂದ್ರಗ್ರಹಣದ (Lunar Eclipse) ಪ್ರಕ್ರಿಯೆ ಆರಂಭವಾಗಿಬಿಟ್ಟಿದೆ. ರಾತ್ರಿ 9:57ರಿಂದ ಮಧ್ಯರಾತ್ರಿ 1:26ರ ವರೆಗೆ ಒಟ್ಟು ಮೂರೂವರೆ ಗಂಟೆಗಳ ಕಾಲ ನಿಧಾನವಾಗಿ ಗ್ರಹಣ ಸಂಭವಿಸಲಿದೆ.
ಸದ್ಯ ದೇಶದಲ್ಲಿ ಲಡಾಖ್‌ನಲ್ಲಷ್ಟೇ ಗ್ರಹಣ ಗೋಚರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು (Bengaluru), ತಮಿಳುನಾಡು ಸೇರಿ ನಾಲ್ಕು ಕಡೆಗಳಲ್ಲಿ ಮೋಡ ಕವಿದ ಹಿನ್ನೆಲೆಯಲ್ಲಿ ಚಂದ್ರ ಕಣ್ಮರೆಯಾಗಿದ್ದಾನೆ. ಆಗಾಗ್ಗೆ ಭುವಿಯತ್ತ ಇಣುಕಿ ಮತ್ತೆ ಮೋಡದಲ್ಲಿ ಮರೆಯಾಗುತ್ತಿದ್ದಾನೆ. ಇದನ್ನೂ ಓದಿ: ಗ್ರಹಣದ ವೇಳೆ ಶುಭಕಾರ್ಯಗಳು ನಿಷಿದ್ಧ – ಸೂತಕದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರ್ದು?
ಇನ್ನೂ ನೆಲಮಂಗಲದಿಂದ ಆಕಾಶದಲ್ಲಿ ಹುಣ್ಣಿಮೆ ಚಂದ್ರನ ದರ್ಶನವಾಗಿದೆ. ನೆಲಮಂಗಲ ತಾಲೂಕಿನ ಭಟ್ಟರಹಳ್ಳಿ ಗ್ರಾಮದಲ್ಲಿ ಉಂಗುರ ಆಕಾರದಲ್ಲಿ ಪೂರ್ಣ ಚಂದ್ರ ಕಾಣಿಸಿಕೊಂಡಿದ್ದಾನೆ. ಇದನ್ನೂ ಓದಿ: Lunar Eclipse | ರಕ್ತ ಚಂದ್ರಗ್ರಹಣಕ್ಕೆ ಕೌಂಟ್‌ಡೌನ್ – ಖಗ್ರಾಸ ಖಗೋಳ ಕೌತುಕ ಕಣ್ತುಂಬಿಕೊಳ್ಳಲು ಕಾತರ
ನೆಹರೂ ತಾರಾಲಯದಲ್ಲಿ ಸಕಲ ಸಿದ್ಧತೆ
ಚಂದ್ರಗ್ರಹಣ ವೀಕ್ಷಣೆಗೆ ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಹಣ ವೀಕ್ಷಣೆಗೂ ಮುನ್ನ ತಾರಾಲಯದ ನಿರ್ದೇಶಕ ಗುರುಪ್ರಸಾದ್ ರಿಂದ ಉಪನ್ಯಾಸ ನೀಡಲಾಗುತ್ತಿದೆ. ಇದರ ನಡುವೆ ಮಕ್ಕಳು, ಹಿರಿಯರು ಸೇರಿದಂತೆ ಕುಟುಂಬ ಸಮೇತ ಚಂದ್ರನ ವೀಕ್ಷಣೆ ಮಾಡಲಾಗುತ್ತಿದೆ. ಇದನ್ನೂ ಓದಿ: Lunar Eclipse: ಚಂದ್ರನೇಕೆ ಕೆಂಪು ಕೆಂಪಾಗಲಿದ್ದಾನೆ?; ಗ್ರಹಣ ವೀಕ್ಷಣೆಗೆ ಎಲ್ಲೆಲ್ಲಿ ವ್ಯವಸ್ಥೆ?