‘ಫುಲ್ ಮೀಲ್ಸ್’ ಸಿನಿಮಾದ ಪೋಸ್ಟರ್ ರಿಲೀಸ್

Public TV
1 Min Read
Full Meals 1

‘ಸಂಕಷ್ಟಕರ ಗಣಪತಿ’ ಹಾಗೂ ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳ ಮೂಲಕ ಜನಮನ ಗೆದ್ದಿರುವ  ಲಿಖಿತ್ ಶೆಟ್ಟಿ (Likhit Shetty) ನಿರ್ಮಿಸಿ ಜೊತೆಗೆ ನಾಯಕರಾಗೂ ನಟಿಸುತ್ತಿರುವ ಚಿತ್ರ ‘ಫುಲ್ ಮೀಲ್ಸ್ (Full Meals). ಈ ಸಿನಿಮಾ ಟೈಟಲ್ ಕಾರಣದಿಂದಾಗಿಯೇ ಗಮನ ಸೆಳೆದಿತ್ತು. ಅಲ್ಲದೇ, ಈ ಸಿನಿಮಾದ ಶೀರ್ಷಿಕೆಯ ವಿಶೇಷತೆಯನ್ನು ಸಿನಿಮಾ ಟೀಮ್ ಹಂಚಿಕೊಂಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ.

Full Meals 3

ಸದ್ಯ ‘ಫುಲ್ ಮೀಲ್ಸ್’ ಚಿತ್ರದ ನೂತನ ಪೋಸ್ಟರ್ (Poster) ಬಿಡುಗಡೆಯಾಗಿದೆ. ಪೋಸ್ಟರ್ ಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ಈ ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಎನ್ ವಿನಾಯಕ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ (Gurukiran) ಸಂಗೀತ ನಿರ್ದೇಶನ ಹಾಗೂ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ. ಇದನ್ನೂ ಓದಿ:ಯಾರನ್ನಾದರೂ ಡೇಟ್ ಮಾಡಿ ಎಂದ ಅಭಿಮಾನಿಗೆ ಸಮಂತಾ ಹೇಳಿದ್ದೇನು?

Full Meals 2

ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮ, ರಂಗಾಯಣ ರಘು, ಸಾಧುಕೋಕಿಲ, ವಿಜಯ್ ಚೆಂಡೂರ್, ರಾಜೇಶ್ ನಟರಂಗ, ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ, ಚಂದ್ರಕಲಾ ಮೋಹನ್, ಸುಜಯ್ ಶಾಸ್ತ್ರಿ, ಗಣೇಶ್ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Share This Article