ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ಟೈಟಲ್ ಗೆದ್ದು ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಉಡುಪಿ ಮೂಲದ ಸಿನಿ ಶೆಟ್ಟಿ ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ. ಈ ಸುಂದರಿ ಕರ್ನಾಟಕ ಮೂಲದವರು ಎಂದು ಗೊತ್ತಾಗುತ್ತಿದ್ದಂತೆಯೇ ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದಾರೆ. ಅವರು ಹುಟ್ಟಿದ್ದು, ಬೆಳೆದದ್ದು, ಎಜ್ಯುಕೇಷನ್, ಉದ್ಯೋಗಿ, ಅಪ್ಪ ಅಮ್ಮ ಹೀಗೆ ಅವರ ವಿವರವನ್ನು ಅಭಿಮಾನಿಗಳು ಕೆದುಕುತ್ತಿದ್ದಾರೆ. ಆ ಎಲ್ಲ ವಿವರ ಇಲ್ಲಿವೆ.
Advertisement
ಹೌದು, ಸಿನಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಇನ್ನಂಜೆಯವರು. ಹುಟ್ಟಿದ್ದು ಮುಂಬೈನಲ್ಲಿ. ಮುಂಬೈನ ಸೇಂಟ್ ಡೊಮಿನಿಕ್ ಸವಿಯೋ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಮುಗಿಸಿ, ನಂತರ ಅಕೌಂಟಿಂಗ್ ಅಂಡ್ ಫೈನಾನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸದ್ಯ ಚಾರ್ಟರ್ಡ್ ಫೈನಾನ್ಸಿಯಲ್ ಅನಾಲಿಸ್ಟ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾರೆ. ಸಿನಿ ಕೇವಲ ಸೌಂದರ್ಯದ ಕಣಿ ಮಾತ್ರವಲ್ಲ, ಅತ್ಯುತ್ತಮ ನೃತ್ಯಪಟು ಕೂಡ. ತಮ್ಮ 4ನೇ ವಯಸ್ಸಿನಲ್ಲೇ ನೃತ್ಯ ಕಲಿಯಲು ಆರಂಭಿಸಿರುವ ಅವರು 14ನೇ ವಯಸ್ಸಿನಲ್ಲಿ ಅರಂಗ್ರೇಟಂ ಮಾಡಿದ್ದರು. ಇದನ್ನೂ ಓದಿ:ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ
Advertisement
Advertisement
ಉಡುಪಿಯ ಇನ್ನಂಜೆಯಲ್ಲಿ ಸುದೀಪ್ ಶೆಟ್ಟಿ ತಂದೆಯ ಸಂಬಂಧಿಕರು ಉಡುಪಿ ಶಂಕರಪುರ ಕಾಪು ಭಾಗದಲ್ಲಿ ನೆಲೆಸಿದ್ದಾರೆ. ಸಿನಿ ಶೆಟ್ಟಿ ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದಿದ್ದು ಕುಟುಂಬದ ಕಾರ್ಯಕ್ರಮಗಳು ಇದ್ದಾಗ ಉಡುಪಿಗೆ ಬರುತ್ತಾರೆ. ಸಿನಿ ಮುಂಬೈನಲ್ಲಿ ಹುಟ್ಟಿ ಬೆಳೆದರೂ ಕೂಡಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಭಾನುವಾರ ಜುಲೈ 04 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಫಿನಾಲೆಯಲ್ಲಿ ಸಿನಿ ಶೆಟ್ಟಿ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಕೊಂಡಿದ್ದಾರೆ.
Advertisement
ರಾಜಸ್ಥಾನದ ರೂಬಲ್ ಶೇಕಾವತ್ ಫಸ್ಟ್ ರನ್ನರಪ್, ಉತ್ತರ ಪ್ರದೇಶದ ಶಿಂತಾನಾ ಚೌಹಾಣ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ಈ ಪ್ರಶಸ್ತಿ ಗೆಲ್ಲುವ ಮೂಲಕ 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಉಡುಪಿಯ ಕುಟುಂಬಿಕರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದಿದ್ದರೂ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.