ಬೆಂಗಳೂರು/ಹಾಸನ: ಸಾವರ್ಕರ್ ವಿರೋಧಿ ಹೇಳಿಕೆ ನೀಡುತ್ತಿರುವ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯಗೆ ಜೀವ ಬೆದರಿಕೆ ಇದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಫುಲ್ ಅಲರ್ಟ್ ಆಗಿದೆ.
ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ ನಂತರವೂ ಮೂಡಿಗೆರೆಯಲ್ಲಿ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕೋ ಪ್ರಯತ್ನ ನಡೆದಿತ್ತು. ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ, ಹಲವರನ್ನು ವಶಕ್ಕೆ ಪಡೆದಿದ್ರು. ಮೂಡಿಗೆರೆಯಿಂದ ಹಾಸನ ಮಾರ್ಗವಾಗಿ ಬೆಂಗಳೂರು ಕಡೆ ಹೊರಟ ಸಿದ್ದರಾಮಯ್ಯಗೆ ಖುದ್ದು ಹಾಸನ ಎಸ್‍ಪಿ ಎಸ್ಕಾರ್ಟ್ ನೀಡಿದ್ರು.
ಹಾಸನ ಗಡಿ ದಾಟುವವರೆಗೂ ಸಿದ್ದರಾಮಯ್ಯ ವಾಹನದ ಹಿಂದೆ ಮುಂದೆಯೇ ಇದ್ರು. ಮಾರ್ಗದುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯಗೆ ಜೈಕಾರ ಹಾಕಿದ್ದು ಕಂಡುಬಂತು. ಹಾಸನದ ಹೊರವಲಯದಲ್ಲಿ ಊಟಕ್ಕೆ ತೆರಳಿದ ಸಂದರ್ಭದಲ್ಲೂ ಅಭಿಮಾನಿಗಳು ಸಿದ್ದರಾಮಯ್ಯಗೆ ಜೈ ಅಂದ್ರು. ಇದನ್ನೂ ಓದಿ: ಧರ್ಮ ಒಡೆಯುವುದು ನನ್ನ ಉದ್ದೇಶವಲ್ಲ, ಕೆಲವರು ನನ್ನನ್ನ ದಾರಿ ತಪ್ಪಿಸಿದ್ರು: ಸಿದ್ದರಾಮಯ್ಯ
ಈ ಮಧ್ಯೆ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ತಮ್ಮ ವಿರುದ್ಧದ ಪ್ರತಿಭಟನೆಗಳೆಲ್ಲಾ ಸರ್ಕಾರಿ ಪ್ರಾಯೋಜಿತ ಎಂಬ ಮಾತನ್ನು ಮೂರನೇ ಬಾರಿಗೆ ಪುನರುಚ್ಚರಿಸಿದ್ರು. ದಾವಣಗೆರೆ ಸಮಾವೇಶದ ಬಳಿಕ ಬಿಜೆಪಿಗೆ ಸೋಲಿನ ಭಯ ಆವರಿಸಿದೆ. ಅದಕ್ಕಾಗಿಯೇ ಅವರು ಹತಾಶರಾಗಿ ಹೀಗೆಲ್ಲಾ ಮಾಡಿಸ್ತಾ ಇದ್ದಾರೆ ಎಂದು ದೂರಿದ್ರು. ಕಪ್ಪು ಬಾವುಟ ತೋಸೋದು. ಧೀರರ ವೀರರ ಲಕ್ಷಣನಾ ಎಂದು ಪ್ರಶ್ನಿಸಿದ್ರು.
ಕೊಡಗು, ಚಿಕ್ಕಮಗಳೂರು ಮಳೆ ಹಾನಿ ಸಂತ್ರಸ್ತರಿಗೆ ಸರ್ಕಾರದಿಂದ ಚಿಕ್ಕಾಸು ಕೂಡ ನೆರವು ದೊರೆತಿಲ್ಲ. ಮಂತ್ರಿಗಳು ಪರಿಹಾರ ಕೊಟ್ಟಿದ್ದೀವಿ ಅಂತಾರೆ. ಆದ್ರೆ ಯಾರಿಗೂ ತಲುಪಿಲ್ಲ. ರೈತರ ಪಾಡೇನು ಆಗಬೇಕು ಎಂದು ಪ್ರಶ್ನೆ ಮಾಡಿದ್ರು. ಅಸಲಿಗೆ ರಾಜ್ಯದಲ್ಲಿ ಸರ್ಕಾರ ಇಲ್ಲ.. ಗುಪ್ತ ಚರ ಇಲಾಖೆ ಇಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಮಹಾತ್ಮ ಗಾಂಧಿ ಕೊಂದವರು, ನನ್ನನ್ನ ಬಿಡ್ತಾರಾ? : ಸಿದ್ದರಾಮಯ್ಯ