ಬೆಂಗಳೂರು: ವೇತನ ಹೆಚ್ಚಳ (Salary Hike) ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಸಾರಿಗೆ ನೌಕರರು (Transport Staff) ಫ್ರೀಡಂಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ (Hunger Strike) ನಡೆಸಲು ಮುಂದಾಗಿದ್ದಾರೆ.
ಸರ್ಕಾರದ ವಿರುದ್ದ ಸಾರಿಗೆ ಮುಖಂಡ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಬೆಳಗ್ಗೆ 10:30 ರಿಂದ 5 ಗಂಟೆಯವರೆಗೆ ನೌಕರರ ಉಪವಾಸ ಸತ್ಯಾಗ್ರಹ ನಡೆಯಲಿದೆ.
Advertisement
ಸಾರಿಗೆ ನೌಕರರಿಗೆ ಜನವರಿ 1ರಿಂದ ಹೊಸ ಒಪ್ಪಂದದ ಪ್ರಕಾರ ವೇತನ ಪರಿಷ್ಕರಣೆ ಆಗಬೇಕು. ಆದರೆ ಇಲ್ಲಿಯವರೆಗೆ ವೇತನ ಪರಿಷ್ಕರಣೆ ವಿಚಾರವನ್ನು ಸಾರಿಗೆ ನಿಗಮಗಳು ಪ್ರಸ್ತಾಪಿಸಿಲ್ಲ. ಹೀಗಾಗಿ ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟು ನೌಕರರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಇದನ್ನೂ ಓದಿ: ಲೋಕಸಭೆಗೆ ಮತ್ತೆ ಒಕ್ಕಲಿಗ ಕಾರ್ಡ್, ಎರಡೂವರೆ ವರ್ಷ ನಂತರ ಡಿಕೆ ಸಿಎಂ ಸಾಧ್ಯತೆ – ಒಕ್ಕಲಿಗ ನಾಯಕರ ಸಭೆಯ ಇನ್ಸೈಡ್ ಸುದ್ದಿ
Advertisement
Advertisement
ಸಾರಿಗೆ ನೌಕರರ ಬೇಡಿಕೆಗಳು?
– ಮೂಲ ವೇತನದ 25% ವೇತನ ಹೆಚ್ಚಿಸಬೇಕು.
– ಎಲೆಕ್ಟ್ರಿಕ್ ಬಸ್ಗಳಲ್ಲಿ ಸಾರಿಗೆ ನಿಗಮದ ನೌಕರರನ್ನೇ ಚಾಲಕರಾಗಿ ನೇಮಿಸಿಕೊಳ್ಳುವುದು.
– ನಿವೃತ್ತಿ ನೌಕರರಿಗೆ ಅಂತಿಮವಾಗಿ ಬರಬೇಕಾದ ಹಣ ಕೊಡಬೇಕು ಮತ್ತು 38 ತಿಂಗಳ ವೇತನ ಹೆಚ್ಚಳದ ಬಾಕಿ ನೌಕರರಿಗೆ ನೀಡಬೇಕು.
– ಎಲ್ಲಾ ನಿಗಮಗಳ ನೌಕರರ ಮುಂಬಡ್ತಿಗೆ ಕ್ರಮವಹಿಸುವುದು. ವಿವಿಧ ಭತ್ಯೆಗಳನ್ನ ಐದು ಪಟ್ಟು ಹೆಚ್ಚಿಸುವುದು.
– ಉಚಿತ ಔಷಧಿ ಸೇರಿದಂತೆ ವೈದ್ಯಕೀಯ ಸೌಲಭ್ಯ ನೀಡಬೇಕು.