ನವದೆಹಲಿ: ಮೊಟ್ಟೆಯಲ್ಲಿ (Egg) ಕ್ಯಾನ್ಸರ್‌ಕಾರಕ (Cancer) ರಾಸಾಯನಿಕ ಇದೆ ಎಂಬ ವದಂತಿ ಬೆನ್ನಲ್ಲೇ ಯಾವುದೇ ‘ಆತಂಕದ ಅಗತ್ಯವಿಲ್ಲ’ ಎಂದು ಭಾರತೀಯ ಆಹಾರಸುರಕ್ಷತೆ ಮತ್ತು ಗುಣಮಟ್ಟಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಿಳಿಸಿದೆ.
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ನೈಟ್ರೋಪ್ಯೂರಾನ್ ಅಂಶ ಪತ್ತೆಯಾಗಿರುವುದಾಗಿ ಯೂಟ್ಯೂಬ್ ಚಾನಲ್‌ನಲ್ಲಿ ಒಂದರಲ್ಲಿ ಹೇಳಲಾಗಿತ್ತು. ಇದರ ಬೆನ್ನಲ್ಲೇ ಹಲವು ವಿಧದ ಮೊಟ್ಟೆಗಳ ಪರೀಕ್ಷೆ ನಡೆಸಿರುವ ಎಫ್‌ಎಸ್‌ಎಸ್‌ಎಐ, ಇದು ಜನರ ದಾರಿತಪ್ಪಿಸುವ ವರದಿಯಾಗಿದೆ. ಆ ಆರೋಪಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ವದಂತಿ – ಬೇಕರಿ, ಕಾಂಡಿಮೆಂಟ್ಸ್ ವ್ಯಾಪಾರ ಕುಸಿತ!
2011ರ ಆಹಾರ ಸುರಕ್ಷತೆ ನಿಯಮದಡಿಯಲ್ಲಿ ಕೋಳಿ ಸಾಕಣೆಯಲ್ಲಿ ನೈಟ್ರೋಪ್ಯೂರಾನ್ ಬಳಕೆಯನ್ನು ನಿಷೇಧಿಸಲಾಗಿದೆ. ಪ್ರತಿ ಕೆ.ಜಿ.ಯಲ್ಲಿ 1.0 – ಮೈಕ್ರೋಗ್ರಾಂನಷ್ಟಿದ್ದರೆ ಯಾವುದೇ ಅಪಾಯವಿಲ್ಲ ಎಂದು ಎಫ್‌ಎಸ್‌ಎಸ್‌ಎಐ ತಿಳಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ (Social Media) ನಿರ್ದಿಷ್ಟ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ಅಂಶ ಇದೆ ಎಂಬ ವೀಡಿಯೋ ಹರಿದಾಡಿತ್ತು. ಸಹಜವಾಗಿ ಇದು ಜನರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಈ ಸುದ್ದಿ ಹರಿದಾಡುತ್ತಿದ್ದಂತೆ ರಾಜ್ಯ ಸರ್ಕಾರ (Karnataka Government) ಅಲರ್ಟ್ ಆಗಿದೆ. ಖಾಸಗಿ ಲ್ಯಾಬ್‌ಗಳಲ್ಲಿ ಮೊಟ್ಟೆ ಪರೀಕ್ಷಿಸಲು ಆದೇಶಿಸಿತ್ತು.
ಸರ್ಕಾರದ ಆದೇಶ ಪ್ರತಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಖಾಸಗಿ ಲ್ಯಾಬ್‌ನಲ್ಲಿ (Private Lab) ಟೆಸ್ಟ್‌ಗೆ ಸೂಚಿಸಿರುವ ಸರ್ಕಾರ ಒಂದು ವಾರದಲ್ಲಿ ವರದಿ ನೀಡಲು ಆದೇಶಿಸಿದೆ. ಸರ್ಕಾರಿ ಲ್ಯಾಬ್‌ನಲ್ಲಿ ಹೆಚ್ಚಿನ ತಂತ್ರಜ್ಞಾನ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಲು ಆದೇಶಿಸಿದೆ. ಇದನ್ನೂ ಓದಿ: ಕ್ಯಾನ್ಸರ್ ಕಾರಕ ವದಂತಿ ಬೆನ್ನಲ್ಲೇ ಅಲರ್ಟ್ – ಖಾಸಗಿ ಲ್ಯಾಬ್‌ನಲ್ಲಿ ಮೊಟ್ಟೆ ಟೆಸ್ಟ್‌ಗೆ ರಾಜ್ಯ ಸರ್ಕಾರ ಅದೇಶ

