– 10-15 ವರ್ಷಗಳಲ್ಲಿ ಮಣ್ಣಿನಲ್ಲಿ ಮೂಳೆಗಳು ಬಹುತೇಕ ಕರಗುತ್ತವೆ: ಡಾ.ಅರವಿಂದ್
ಬೆಂಗಳೂರು: ಮೂಳೆಗಳು (Bones) ಸಿಕ್ಕ ತಕ್ಷಣ ಈ ಮೂಳೆ ಗಂಡಸಿನದ್ದಾ ಅಥವಾ ಹೆಂಗಸಿನದ್ದಾ ಅಂತ ಹೇಳಬಹುದೇ ಹೊರತು ಸತ್ತ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆಯಾ? ಇಲ್ಲವಾ ಎಂದು ಹೇಳಲು ಆಗುವುದಿಲ್ಲ ಎಂದು ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ (JSS Medical College) ವಿಧಿವಿಜ್ಞಾನ ವಿಭಾಗದ ಪ್ರೊ. ಅರುಣ್ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ (Dharmasthala) ಸಿಕ್ಕಿರುವ ಮೂಳೆಗಳ ವಿಚಾರಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ತಜ್ಞರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬೆನ್ನಲ್ಲೇ ಮೈಸೂರು ಪ್ರೊ. ಅರುಣ್ ʻಪಬ್ಲಿಕ್ ಟಿವಿʼ ಜೊತೆಗೆ ಈ ಬಗ್ಗೆ ಕೆಲವು ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್| ದಾರಿ ಬಿಡಿ ಮುಂದಕ್ಕೆ ಹೋಗಬೇಕು: ಪ್ರಣಬ್ ಮೊಹಂತಿ
ಮೂಳೆಗಳು ಸಿಕ್ಕ ತಕ್ಷಣ ಈ ಮೂಳೆ ಗಂಡಸಿನದ್ದಾ ಅಥವಾ ಹೆಂಗಸಿನದ್ದಾ ಅಂತ ಹೇಳಬಹುದೇ ಹೊರತು ಸತ್ತ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆಯಾ? ಇಲ್ಲವಾ ಎಂದು ಹೇಳಲು ಆಗುವುದಿಲ್ಲ. ಇದು ಕೊಲೆಯಾ ಅಥವಾ ಸಹಜ ಸಾವಾ ಎಂದು ಹೇಳುವುದಕ್ಕೆ ಒಂದೆರಡು ಮೂಳೆಯಿಂದ ಸಾಧ್ಯವಿಲ್ಲ. ವಯಸ್ಸು ಕೂಡ ನಿಖರವಾಗಿ ಹೇಳಲು ಆಗಲ್ಲ ಎಂದು ಅವರು ವಿವರಣೆ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ – ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ: ಪರಮೇಶ್ವರ್ ಎಚ್ಚರಿಕೆ
ನಮಗೆ ಪೂರ್ಣ ಸ್ಕೆಲಿಟನ್ (Skeleton) ಸಿಕ್ಕರೆ 100% ಖಚಿತ ಮಾಹಿತಿ ಸಿಗುತ್ತೆ. ತೊಡೆ ಮೂಳೆ ಸಿಕ್ಕರೆ 80%, ಸೊಂಟದ ಮೂಳೆ ಸಿಕ್ಕರೆ 95% ನಿಖರ ಮಾಹಿತಿ ಹೇಳಬಹುದು. ಈಗ ಧರ್ಮಸ್ಥಳದಲ್ಲಿ ಸಿಕ್ಕಿರುವ ಮೂಳೆಗಳು ಮೊದಲು ಮನುಷ್ಯನದ್ದಾ ಅಥವಾ ಪ್ರಾಣಿಯದ್ದಾ ಅಂತ ತಿಳಿದುಕೊಳ್ಳಬೇಕಾಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: Malegaon Case | ಮೋಹನ್ ಭಾಗವತ್ ಬಂಧನಕ್ಕೆ ಆದೇಶಿಸಿದ್ದ ತನಿಖಾಧಿಕಾರಿ – ನಿವೃತ್ತ ಇನ್ಸ್‌ಪೆಕ್ಟರ್ ಸ್ಫೋಟಕ ಹೇಳಿಕೆ
10-15 ವರ್ಷಗಳಲ್ಲಿ ಮೂಳೆಗಳು ಮಣ್ಣಿನಲ್ಲಿ ಕರಗುತ್ತವೆ:
ಅಲ್ಲದೇ 10- 15 ವರ್ಷಗಳಲ್ಲಿ ಮನುಷ್ಯನ ಮೂಳೆಗಳು ಮಣ್ಣಿನಲ್ಲಿ ಬಹುತೇಕ ಕರಗುತ್ತವೆ. ಕೆಲ ಭಾಗದ ಮೂಳೆಗಳು ಅಷ್ಟೇ ಸಿಗಬಹುದು. ತಲೆ ಬುರುಡೆಯೂ ಸಂಪೂರ್ಣವಾಗಿ ಇರಲು ಸಾಧ್ಯವಿಲ್ಲ ಎಂದು ವಿಧಿ ವಿಜ್ಞಾನದ ಪ್ರೊಫೆಸರ್ ಡಾ. ಅರವಿಂದ್ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಸಿಕ್ಕಿರುವ ಮೂಳೆಗಳ ಕುರಿತು ವೈದ್ಯಕೀಯ ಮಾಹಿತಿಯನ್ನು ಅರವಿಂದ್ ಹಂಚಿಕೊಂಡಿದ್ದಾರೆ.