Connect with us

ಫುಡ್ ಫ್ಯಾಕ್ಟರಿಯಲ್ಲಿ ಕೊಳೆತ ಹಣ್ಣುಗಳಿಂದ ತಯಾರಾಗ್ತಿದೆ ಜಾಮ್!

ಫುಡ್ ಫ್ಯಾಕ್ಟರಿಯಲ್ಲಿ ಕೊಳೆತ ಹಣ್ಣುಗಳಿಂದ ತಯಾರಾಗ್ತಿದೆ ಜಾಮ್!

ಬೆಂಗಳೂರು: ಐಸ್‍ಕ್ರೀಂ ಮೇಲೆ ವಿವಿಧ ಬಗೆಯ ಫ್ರುಟ್‍ಗಳನ್ನು ಹಾಕಿ ತಿನ್ನುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದ್ರೆ ಇನ್ಮುಂದೆ ಫ್ರುಟ್ಸ್ ಹಾಕಿದ ಐಸ್‍ಕ್ರೀಂ, ಜಾಮ್ ತಿನ್ನುವ ಮೊದಲು ಸರಿಯಾಗಿ ನೋಡಿ ತಿನ್ನಿ. ಯಾಕಂದ್ರೆ ಫ್ರೂಟ್ಸ್ ಹಾಗೂ ಜಾಮನ್ನು ಕೊಳೆತ ಹಣ್ಣುಗಳಿಂದ ತಯಾರು ಮಾಡುತ್ತಾರೆ.

ಬೆಂಗಳೂರಿನ ಅಂಚೆಪಾಳ್ಯದಲ್ಲಿರುವ ಸಂತೋಷ್ ಫುಡ್ ಫ್ಯಾಕ್ಟರಿ ಫ್ರೂಟ್ಸ್ ಮತ್ತು ಜಾಮ್ ತಯಾರು ಮಾಡಿ ಕರ್ನಾಟಕದಾದ್ಯಂತ ಸರಬರಾಜು ಮಾಡ್ತಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಕಾರ ಆಹಾರ ತಯಾರಿಕೆ ಸ್ಥಳ ಮತ್ತು ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಆದ್ರೆ ಅದ್ಯಾವುದೂ ಇಲ್ಲಿ ಕಾಣಿಸ್ತಿಲ್ಲ. ಕೊಳೆತ ಪಪ್ಪಾಯಿ ಹಣ್ಣು, ಜಾಮ್ ತಯಾರು ಮಾಡೋ ಯಂತ್ರಗಳ ಮೇಲೂ ಕಸ, ಕ್ರಿಮಿ, ಕೀಟಗಳು ಕಣ್ಣಿಗೆ ರಾಚುತ್ತೆ. ಈ ಬಗ್ಗೆ ಕರ್ನಾಟಕ ಕಾರ್ಮಿಕ ವೇದಿಕೆ ಸದಸ್ಯರೊಬ್ಬರು ಫ್ಯಾಕ್ಟರಿ ಮಾಲೀಕರನ್ನ ಪ್ರಶ್ನೆ ಮಾಡಿದ್ರೆ, ನನಗೆ ಕಮೀಷನರ್ ಗೊತ್ತು. ಪೊಲೀಸ್ ಅಧಿಕಾರಿ ಗೊತ್ತು ಅಂತಾ ಅವರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಸ್ಚಚ್ಛತೆ ಬಗ್ಗೆ ಕೇಳಿದ್ರೆ, ಸರಿಯಾಗಿ ಉತ್ತರ ನೀಡದೇ ನೀವು ಯಾರು ಪ್ರಶ್ನೆ ಮಾಡೋದಕ್ಕೆ ಅಂತಾ ಧಮ್ಕಿ ಹಾಕ್ತಾರೆ ಅಂತ ಆರೋಪಿಸಲಾಗಿದೆ.

ಜಾಮ್ ಮತ್ತು ಚೆರ್ರಿ ತಯಾರು ಮಾಡಬೇಕಾದ್ರೆ 6 ದಿನಗಳ ಕಾಲ ಪಪ್ಪಾಯಿ ಹಣ್ಣನ್ನು ಕೊಳೆಯುವಂತೆ ಮಾಡಿ ತಯಾರು ಮಾಡುವುದು ಸರಿ. ಕೊಳೆತಿರುವುದರಿಂದ ಕೆಟ್ಟ ವಾಸನೆ ಬರುತ್ತೆ ಅದು ಸಹಜ ಅಂತ ಫುಡ್ ಫ್ಯಾಕ್ಟರಿ ಮಾಲೀಕ ಸಂತೋಷ್ ವಾದ ಮಾಡ್ತಾರೆ.

ಸಂತೋಷ್ ಪುಡ್ ಫ್ಯಾಕ್ಟರಿ ವಿರುದ್ಧ ಆಹಾರ ಸುರಕ್ಷತಾ ಆಯುಕ್ತರಿಗೆ ಕರ್ನಾಟಕ ಕಾರ್ಮಿಕ ವೇದಿಕೆಯವರು ದೂರು ನೀಡಿದ್ದಾರೆ. ಆಹಾರ ಸುರಕ್ಷತಾ ಇಲಾಖೆ ಫ್ಯಾಕ್ಟರಿ ವಿರುದ್ಧ ಯಾವ ರೀತಿ ಕ್ರಮ ಜರುಗುಸುತ್ತೋ ಕಾದು ನೋಡ್ಬೇಕು.

Advertisement
Advertisement