ಬರ್ಮಿಂಗ್‌ಹ್ಯಾಮ್: ಈ ಬಾರಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪ್ರತಿಷ್ಠಿತ ಕಾಮನ್‌ವೆಲ್ತ್ನಲ್ಲಿ 61 ಪದಗಳನ್ನು ಗೆದ್ದು ಬೀಗಿದ ಭಾರತ 4ನೇ ಸ್ಥಾನದೊಂದಿಗೆ ಹೊರಹೊಮ್ಮಿತು. ಈ ಬೆನ್ನಲ್ಲೇ 2026ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಎಲ್ಲಿ ನಡೆಯಲಿದೆ ಎನ್ನುವ ಅಧಿಕೃತ ಮಾಹಿತಿ ಹೊರಬಿದ್ದಿದೆ.
Advertisement
ಮುಂದಿನ ಕಾಮನ್‌ವೆಲ್ತ್ ಗೇಮ್ಸ್ 2026ಕ್ಕೆ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಲಿದೆ. 2026ರ ಮಾರ್ಚ್ 17 ರಿಂದ ಮಾರ್ಚ್ 29ರ ವರೆಗೆ ನಡೆಯಲಿದ್ದು, ಸುಮಾರು 20 ರಾಷ್ಟ್ರಗಳು ಪಾಲ್ಗೊಳ್ಳಲಿವೆ ಎಂದು ಕಾಮನ್‌ವೆಲ್ತ್ ಕ್ರೀಡಾಮಂಡಳಿ ತಿಳಿಸಿದೆ. ಇದನ್ನೂ ಓದಿ: CWG 2022: ಬ್ಯಾಡ್ಮಿಂಟನ್‍ನಲ್ಲಿ 20ರ ಹರೆಯದ ಯುವಕನಿಗೆ ಚಿನ್ನದ ಹಾರ – ದಿಗ್ಗಜರ ಸಾಲಿಗೆ ಸೇರಿದ ಲಕ್ಷ್ಯ ಸೇನ್
Advertisement
You have brought great laurels for our country. Congratulations to all our winners and the participants of CWG 2022. We are so proud of you. Jai Hind ???????????? pic.twitter.com/phKMn7MMdY
— Virat Kohli (@imVkohli) August 9, 2022
Advertisement
ಈ ಬಾರಿ ಬರ್ಮಿಂಗ್‌ಹ್ಯಾಂನಲ್ಲಿ ನಡೆದ ಕಾಮನ್‌ವೆಲ್ತ್ನಲ್ಲಿ ಒಟ್ಟು 61 ಪದಕಗಳನ್ನು ಗೆದ್ದು, ಭಾರತ 4ನೇ ಸ್ಥಾನ ಗಳಿಸಿದೆ. 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳನ್ನು ಗೆದ್ದು ಅತ್ಯುತ್ತಮ ಪ್ರದರ್ಶನದೊಂದಿಗೆ ಹೊರಹೊಮ್ಮಿದೆ. 2010ಲ್ಲಿಯೂ ಭಾರತ 38 ಚಿನ್ನ ಸೇರಿದಂತೆ 101 ಪದಕಗಳನ್ನು ಗೆದ್ದು ಅತ್ಯುತ್ತಮ ಪ್ರದರ್ಶನ ನೀಡಿತ್ತು. ಮ್ಯಾಂಚೆಸ್ಟರ್-2002ರಲ್ಲಿ 69 ಪದಕ, ಗೋಲ್ಡ್ ಕೋಸ್ಟ್-2018ರಲ್ಲಿ 66 ಪದಕ ಹಾಗೂ ಗ್ಲಾಸ್ಗೋ-2014ರಲ್ಲಿ 64 ಪದಕಗಳನ್ನು ಭಾರತ ಮುಡಿಗೇರಿಸಿಕೊಂಡಿತ್ತು.
Advertisement
ಯಾವ ಕ್ರೀಡೆಯಲ್ಲಿ ಎಷ್ಟು ಪದಕ: ಕುಸ್ತಿಯಲ್ಲಿ 6 ಚಿನ್ನ, 1 ಬೆಳ್ಳಿ, 5 ಕಂಚು. ಟೇಬಲ್ ಟೆನ್ನಿಸ್‌ನಲ್ಲಿ 4 ಚಿನ್ನ, 1 ಬೆಳ್ಳಿ, 2 ಕಂಚು. ವೈಟ್‌ಲಿಫ್ಟಿಂಗ್‌ನಲ್ಲಿ 3 ಚಿನ್ನ, 3 ಬೆಳ್ಳಿ, 4 ಕಂಚು. ಬಾಕ್ಸಿಂಗ್‌ನಲ್ಲಿ 3 ಚಿನ್ನ, 1 ಬೆಳ್ಳಿ, 3 ಕಂಚು. ಬ್ಯಾಡ್ಮಿಂಟನ್‌ನಲ್ಲಿ 3 ಚಿನ್ನ, 1 ಬೆಳ್ಳಿ, 2 ಕಂಚು. ಅಥ್ಲೆಟಿಕ್ಸ್ನಲ್ಲಿ 1 ಚಿನ್ನ, 4 ಬೆಳ್ಳಿ, 3 ಕಂಚು. ಲಾನ್ ಬೌಲ್ಸ್ನಲ್ಲಿ 1 ಚಿನ್ನ, 1 ಬೆಳ್ಳಿ. ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ 1 ಚಿನ್ನ. ಜುಡೋದಲ್ಲಿ 2 ಬೆಳ್ಳಿ, 1 ಕಂಚು. ಹಾಕಿಯಲ್ಲಿ 1 ಬೆಳ್ಳಿ, 1 ಕಂಚು. ಕ್ರಿಕೆಟ್‌ನಲ್ಲಿ 1 ಬೆಳ್ಳಿ. ಸ್ಕ್ವಾಷ್‌ನಲ್ಲಿ 2 ಕಂಚು.
ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದ ಕೊಹ್ಲಿ: ಈ ಬಾರಿ ಕಾಮನ್‌ವೆಲ್ತ್‌ನಲ್ಲಿ ಪ್ರಶಸ್ತಿ ವಿಜೇತರಿಗೆ ಶುಭ ಕೋರಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೀವು ನಮ್ಮ ದೇಶಕ್ಕೆ ದೊಡ್ಡ ಪ್ರಶಸ್ತಿಗಳನ್ನೇ ತಂದಿದ್ದೀರಿ. ಎಲ್ಲಾ ವಿಜೇತರು ಹಾಗೂ ಕಾಮನ್‌ವೆಲ್ತ್ ನಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ’ ಎಂದು ಟ್ವೀಟ್ ಮೂಲಕ ಹಾರೈಸಿದ್ದಾರೆ.