ರಾಮನಗರ: ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ ನೀಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮೇಕೆದಾಟು 2.0 ಪಾದಯಾತ್ರೆಗೆ ಇಂದು ಚಾಲನೆ ಹಿನ್ನೆಲೆ, ಡಿಕೆಶಿ ಅವರು ನಿನ್ನೆ ರಾತ್ರಿ ರಾಮನಗರ ಜಾನಪದ ಲೋಕದ ಬಳಿ ಇರುವ ಬಿಜಿಎಸ್ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ಪಾದಯಾತ್ರೆಗೂ ಮುನ್ನ ಡಿಕೆಶಿ ಮಠದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಅನ್ನದಾನೇಶ್ವರ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರು. ಇದನ್ನೂ ಓದಿ: ಮೇಕೆದಾಟು ಹೋರಾಟವಲ್ಲ, ಅದು ರಾಜಕೀಯ ಪಾದಯಾತ್ರೆ : ಸಿಎಂ ವ್ಯಂಗ್ಯ
ಮೇಕೆದಾಟು 2.0 ಪಾದಯಾತ್ರೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ ನೀಡ್ತಿದ್ದೇವೆ. ಆದಿ ಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರ ಶ್ರೀಗಳ ಆಶೀರ್ವಾದ ಪಡೆದು ಹೆಜ್ಜೆ ಹಾಕಲಿದ್ದೇನೆ. ನಗರದ ಚಾಮುಂಡೇಶ್ವರಿ ದೇವಾಲಯ ಹಾಗೂ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ತಮ್ಮ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಈ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಭಾನುವಾರ ರಜೆ ಇರೋದ್ರಿಂದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕೇಳಿಕೊಂಡಿದ್ದಾರೆ. ಇಂದು ತುಂಬಾ ಬಿಸಿಲು ಇದೆ. ಅದನ್ನು ನೀಗಿಸಲು ನೀರು, ಹಣ್ಣು, ತಂಪು ಪಾನೀಯಗಳನ್ನು ನೀಡಲಿದ್ದೇವೆ. ಪ್ರತಿ ಅರ್ಧ ಕಿ.ಮೀ ಗೂ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಇಂದು ಮಂಡ್ಯದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಆಸಕ್ತಿ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಗೆ ಭಾಗವಹಿಸಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಅಲಿಯಾ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು