ನವದೆಹಲಿ: ಇಂದಿನಿಂದ ದೆಹಲಿ ಸಾರಿಗೆ ನಿಗಮ(ಡಿಟಿಸಿ) ಬಸ್ಸುಗಳು ಮತ್ತು ಕ್ಲಸ್ಟರ್ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭಗೊಂಡಿದ್ದು, ಕೇಜ್ರಿವಾಲ್ ಸರ್ಕಾರದ ಈ ಹೊಸ ಯೋಜನೆ ದೀಪಾವಳಿಗೆ ಮಹಿಳೆಯರಿಗೆ ಉಡುಗೊರೆ ನೀಡಿದಂತಾಗಿದೆ.
ಭಾಯ್ ಧೂಜ್‍ನಲ್ಲಿ ಪ್ರಾರಂಭವಾದ ಫ್ರೀ-ರೈಡ್ ಯೋಜನೆಯನ್ನು ಪಡೆಯಲು ಡಿಟಿಸಿ ಮತ್ತು ಕ್ಲಸ್ಟರ್ ಬಸ್‍ಗಳಲ್ಲಿ ಮಹಿಳೆಯರಿಗೆ ಗುಲಾಬಿ ಬಣ್ಣದ ಟಿಕೆಟ್ ನೀಡಲಾಗುವುದು. ಹೀಗೆ ವಿತರಿಸಲಾದ ಗುಲಾಬಿ ಟಿಕೆಟ್ ಆಧಾರದ ಮೇಲೆ ಸರ್ಕಾರ ಸಾರಿಗೆಗೆ ಟಿಕೆಟ್ ದರವನ್ನು ಮರುಪಾವತಿ ಮಾಡಲಿದೆ.
Advertisement
दिल्ली की बसों में आज से महिलाओं के लिए मुफ़्त यात्रा शुरू हो चुकी है…. बधाई हो दिल्ली!
महिला सुरक्षा के साथ साथ ये क़दम दिल्ली की अर्थव्यवस्था में महिलाओं की भागीदारी भी बढ़ाएगा…
आप सभी को भाई-दूज की शुभकामनाएँ. भाई बहनों के बीच प्यार और बढ़े…
— Manish Sisodia (@msisodia) October 29, 2019
Advertisement
ದೆಹಲಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಸವಾರಿ ಇಂದಿನಿಂದ ಪ್ರಾರಂಭವಾಗಿದೆ. ಅಭಿನಂದನೆಗಳು ದೆಹಲಿ! ಮಹಿಳಾ ಸುರಕ್ಷತೆಯ ಹೊರತಾಗಿ, ಇದು ದೆಹಲಿ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರವನ್ನೂ ಹೆಚ್ಚಿಸುತ್ತದೆ ಎಂದು ಉಪಮುಖ್ಯಮಂತ್ರಿ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
Advertisement
Flagged off 100 new buses today, fitted with CCTV cameras, panic buttons, hydraulic lifts for the differently-abled and other modern tech
Delhi's bus procurement was delayed for some years, but the good news is that the delivery of thousands of buses has picked up pace. pic.twitter.com/otgmLx1oQe
— Arvind Kejriwal (@ArvindKejriwal) October 25, 2019
Advertisement
ಸೋಮವಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಬಸ್‍ಗಳಲ್ಲಿನ ಸುರಕ್ಷತಾ ವ್ಯವಸ್ಥೆ ಕುರಿತಾಗಿ ತಿಳಿಸಿದರು. ಮಹಿಳೆಯರ ಸುರಕ್ಷತೆಗಾಗಿ ಮಂಗಳವಾರದಿಂದ ದೆಹಲಿಯ ಎಲ್ಲಾ ಬಸ್‍ಗಳಲ್ಲಿ ಬಸ್ ಮಾರ್ಷಲ್‍ಗಳನ್ನು ನಿಯೋಜಿಸಲಾಗುವುದು. ಇದಕ್ಕಾಗಿ 13,000 ಬಸ್ ಮಾರ್ಷಲ್‍ಗಳನ್ನು ನೇಮಕ ಮಾಡಲಾಗಿದೆ ಎಂದು ಸಿಹಿ ಸುದ್ದಿ ನೀಡಿದ್ದರು.
पिंक टिकट…दिल्ली परिवार की सभी बहनों को इस भाई की ओर से भाई दूज की ढेरों शुभ कामनायें। आप सुरक्षित रहें, ख़ूब तरक़्क़ी करें। महिलायें आगे बढ़ेंगी, तभी देश आगे बढ़ेगा। https://t.co/y7DvhpAasl
— Arvind Kejriwal (@ArvindKejriwal) October 29, 2019
ದೆಹಲಿಯಲ್ಲಿ ಪ್ರತಿದಿನ 45 ಲಕ್ಷ ಪ್ರಯಾಣಿಕರು ಬಸ್ ಸೇವೆಯನ್ನು ಪಡೆಯುತ್ತಿದ್ದಾರೆ. ಪ್ರತಿದಿನ ಕೆಲಸಕ್ಕೆ ತೆರಳಲು ಮಹಿಳೆಯರಿಗೆ ಸಹಾಯವಾಗಲಿ, ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ದೆಹಲಿ ಸರ್ಕಾರ ಹೊಸ ಯೋಜನೆ ರೂಪಿಸಿತ್ತು. ದೆಹಲಿಯ ರಾಜ್ಯ ವಿಧಾನಸಭಾ ಚುನಾವಣೆಯ ಮೊದಲು ವಿಧಾನಸಭೆ ಅಧಿವೇಶನದಲ್ಲಿ ಆಗಸ್ಟ್ 29ರಂದು ದೆಹಲಿ ಸಚಿವ ಸಂಪುಟ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ಅನುಮೋದನೆ ನೀಡಿತ್ತು.
महिलाएं आगे बढ़ेंगी तभी देश आगे बढ़ेगा। महिलाओं के लिए फ्री बस यात्रा की शुरुआत पर दिल्लीवासियों को मेरा संदेश। pic.twitter.com/BwRIj2C90q
— Arvind Kejriwal (@ArvindKejriwal) October 29, 2019