ಜೈಪುರ: ಡಿಸೆಂಬರ್ 8 ರಂದು ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಅಗಲಿಕೆಯಿಂದ ಇಡೀ ದೇಶವೇ ಶೋಕತಪ್ತವಾಗಿರುವ ಸಂದರ್ಭದಲ್ಲಿ ಕಿಡಿಗೇಡಿಯೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಅವರ ಸಾವಿನ ಸಂಭ್ರಮಾಚರಣೆಯನ್ನು ನಡೆಸಿ ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
Advertisement
ರಾಜಸ್ಥಾನ ಮೂಲದ ಜವ್ವಾದ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಜನರಲ್ ರಾವತ್ ಅವರ ಚಿತ್ರವನ್ನು ಹಂಚಿಕೊಂಡಿದ್ದನು. ಇದರೊಂದಿಗೆ ಜಹನ್ನೂಮ್ ಮುಟ್ಟುವ ಮೊದಲೇ ಜೀವಂತವಾಗಿ ಸುಟ್ಟುಹೋದರು ಎಂಬ ಅವಹೇಳನಕಾರಿ ಸಾಲನ್ನೂ ಬರೆದು ಹಾಕಿದ್ದ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದ್ದಂತೆ ರಾಜಸ್ಥಾನದ ಟೋಂಕ್ ಪೊಲೀಸರು ಆರೋಪಿ ಜವ್ವಾದ್ ಖಾನ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸೈನಿಕರ ತವರು ಜಿಲ್ಲೆ ಕೊಡಗಿಗೆ ಅಮೋಘ ಕೊಡುಗೆ ನೀಡಿದ್ದರು ಬಿಪಿನ್ ರಾವತ್
Advertisement
दिवंगत श्रीमान बिपिन रावत सीडीएस भारतीय सेना के विरुद्ध अमर्यादित टिप्पणी करने वाले व्यक्ति जावादखान, उम्र 21 वर्ष, निवासी नजर बाग रोड टोंक को गिरफ्तार कर लिया गया है, जिस पर कठोरतम विधिक कार्यवाही की जावेगी। #CDSChopperCrash #tonk @rajpolicehelp @igpajmer @omprakaships1 pic.twitter.com/Y7odb1yLAZ
— Tonk Police Rajasthan (@TonkPolice_) December 9, 2021
Advertisement
ಇದರ ಬಳಿಕ ಟ್ವಿಟ್ಟರ್‌ನಲ್ಲಿ ಟೋಂಕ್ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಅವಹೇಳನಕಾರಿ ಹೇಳಿಕೆಯ ಮೇಲೆ ಅಬ್ದುಲ್ ನಕ್ಕಿ ಖಾನ್‍ರ ಮಗ ಜವ್ವಾದ್ ಖಾನ್‍ನನ್ನು ಬಂಧಿಸಲಾಗಿದೆ. 21 ವಯಸ್ಸಿನ ಜವ್ವಾದ್ ಖಾನ್ ರಾಜ್ ಟಾಕೀಸ್ ಬಳಿಯ ನಿವಾಸಿಯಾಗಿದ್ದಾನೆ. ಡಿಸೆಂಬರ್ 8ರಂದು ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿರುವುದರಿಂದ ಆರೋಪಿಯನ್ನು ಬಂಧಿಸಲು ನಾಲ್ಕು ವಿಶೇಷ ತಂಡಗಳ ರಚನೆ ಮಾಡಲಾಗಿತ್ತು. ಅವನನ್ನು ಸದ್ಯ ಬಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಕ್ಯಾಪ್ಟನ್ ವರುಣ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ
Advertisement
ಜವ್ವಾದ್ ಖಾನ್ ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಪ್ರೊಫೈಲ್‍ನಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಎಂದೂ ಬರೆದುಕೊಂಡಿದ್ದಾನೆ. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್