ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಿದೆ. ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಮೋದಿ ಕಾಶಿ ವಿಶ್ವನಾಥ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ನಗರವನ್ನು ಅಭಿವೃದ್ಧಿಗೊಳಿಸಿ, ಸ್ಮಾರ್ಟ್ ಸಿಟಿಯನ್ನಾಗಿ ಮಾಡುವುದಾಗಿ ಹೇಳಿದ್ದರು. ಈ ಹೆಸರಿನಲ್ಲಿ 2016ರಲ್ಲಿ ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿತ್ತು. ತಮ್ಮ ಕನಸಿನ ವಾರಣಾಸಿಯ ನವೀಕರಣಕ್ಕೆ ಮೋದಿಯವರು ಜಪಾನ್‌ನ ಮೊದಲ ಪ್ರವಾಸದಲ್ಲೆ ಉಲ್ಲೇಖಿಸಿದ್ದರು. ಭಾರತದ ವಾರಣಾಸಿಯನ್ನು ಜಪಾನಿನ ಟೋಕಿಯೋದಂತೆ ಅಭಿವೃದ್ದಿ ಪಡಿಸುವುದಾಗಿ ತಿಳಿಸಿದ್ದರು.
Advertisement
Advertisement
ಕಾಶಿ ಹಾಗೂ ಟೋಕಿಯೋ ಎರಡೂ ಪುರಾತನ ನಗಗಳಾಗಿದ್ದು, ಇಂದಿನವರೆಗೂ ಉಳಿದುಕೊಂಡಿದೆ. ಟೋಕಿಯೋ ಜಪಾನಿನ ಅಭಿವೃದ್ದಿ ಹೊಂದಿದ ನಗರಗಳಲ್ಲಿ ಒಂದಾಗಿದೆ. ಹೀಗೆ ಕಾಶಿಯನ್ನು ಟೋಕಿಯೋ ಮಾದರಿಯಲ್ಲಿ ಅಭಿವೃದ್ದಿ ಪಡಿಸುವ ಬಗ್ಗೆ ಮೋದಿ ತಿಳಿಸಿದ್ದರು. ಇದನ್ನೂ ಓದಿ: `ದಿವ್ಯ ಕಾಶಿ, ಭವ್ಯ ಕಾಶಿ’ ಪ್ರಧಾನಿ ಮೋದಿ ಕನಸಿನ ಯೋಜನೆ ಲೋಕಾರ್ಪಣೆ – ವಿಶೇಷತೆ ಏನು?
Advertisement
ಕಾಶಿ ವಿಶ್ವನಾಥ ದೇವಾಲಯ:
2019ರಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಗೆ ಪ್ರಧಾನಿ ಶಂಕು ಸ್ಥಾಪನೆ ಮಾಡಿದ್ದರು. ಈ ಯೋಜನೆ ಪ್ರಕಾರ ಮೋದಿಯವರು ಗಂಗಾ ನದಿಯ ದಡದಲ್ಲಿರುವ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಮಂದಿರವನ್ನು ಪ್ರತಿಬಿಂಬಿಸುವ ಗುರಿಯನ್ನು ಹೊಂದಿದ್ದರು.
Advertisement
ಸರ್ಕಾರ ಈ ಯೋಜನೆಗಾಗಿ ಸುಮಾರು 400 ಕಟ್ಟಡಗಳನ್ನು ಅದರ ಮಾಲೀಕರೊಂದಿಗೆ ಮಾತನಾಡಿ ಸ್ವಾಧೀನ ಮಾಡಿದ ಬಳಿಕ ಕೆಡವಲಾಯಿತು. ಈ ಯೋಜನೆಯಿಂದ ಪ್ರಾಚೀನ 40 ದೇವಾಲಯಗಳನ್ನು ಈಗ ಮರುಸ್ಥಾಪಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಈ ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದಿಂದ ಶಿವ ದೇವಾಲಯಗಳನ್ನು ಗಂಗಾ ನದಿಯೊಂದಿಗೆ ಸಂಪರ್ಕಿಸುವಂತೆ ಮಾಡಿದೆ. ಇದನ್ನೂ ಓದಿ: ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ
ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಕೇವಲ ಎರಡು ತಿಂಗಳು ಮುಂಚಿತವಾಗಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯ ಮೇಲೂ ಈ ಯೋಜನೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಸೋಮನಾಥ ದೇವಾಲಯ:
ಗುಜರಾತ್ ನಲ್ಲಿರುವ ಸೋಮನಾಥ ದೇವಾಲಯ ಅಫ್ಘಾನಿಸ್ತಾನದ ಘಜ್ನಿ ಮೊಹಮ್ಮದ್, ಔರಂಗಜೇಬನಂತಹ ಹಲವು ಸೈನ್ಯಗಳಿಂದ ದಾಳಿಗೊಳಗಾದ ವಿಷಯಗಳನ್ನು ನಾವು ಇತಿಹಾಸದಲ್ಲಿ ನೋಡಬಹುದು. ಈ ದೇವಾಲಯವನ್ನು ಮರಾಠ ಸಾಮ್ರಾಜ್ಞಿ ಅಹಲ್ಯಾ ಬಾಯಿ ಹೋಳ್ಕರ್ ಪುನರ್‌ನಿರ್ಮಾಣ ಮಾಡಿದ್ದರು. ಮೋದಿಯವರು ಈ ವರ್ಷದ ಆಗಸ್ಟ್ನಲ್ಲಿ ಸೋಮನಾಥ ದೇವಾಲಯದ ಹೊಸ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ಕೇದಾರನಾಥ ದೇವಾಲಯ:
ಪ್ರಧಾನಿ ಮೋದಿಯವರು ತಮ್ಮ ಹಾಗೂ ಕೇದಾರನಾಥ ದೇವಾಲಯದೊಂದಿಗಿನ ಸಂಬಂಧವನ್ನು ಯಾವಾಗಲೂ ಹೇಳುತ್ತಲೇ ಬಂದಿದ್ದಾರೆ. ಮೋದಿ ರಾಜಕೀಯಕ್ಕೆ ಪ್ರವೇಶಿಸುವ ಮೊದಲೂ ನನ್ನ ನೆಚ್ಚಿನ ದೇವಾಲಯ ಕೇದಾರನಾಥ ಎಂದು ಹಲವು ಬಾರಿ ಹೇಳಿದ್ದರು.
2013ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಪ್ರವಾಹದಿಂದ ದೇವಾಲಯದ ಆವರಣ ಧ್ವಂಸಗೊಂಡಿತ್ತು. 2014ರಲ್ಲಿ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೇವಸ್ಥಾನದ ನವೀಕರಣದ ಯೋಜನೆಯನ್ನು ಮಾಡಲಾಯಿತು. ಇದನ್ನೂ ಓದಿ: ಮತದಾನದದಂದು ಕಣ್ಣೀರಾಕಿದ್ದ ಮಂಡ್ಯ ಬಿಜೆಪಿ ಅಭ್ಯರ್ಥಿ – ಇಂದು ಕಣ್ಣೀರು ಹಾಕೋದ್ಯಾರು?
ಅಯೋಧ್ಯೆಯಲ್ಲಿ ರಾಮ ಮಂದಿರ:
ರಾಮ ಮಂದಿರದ ನಿರ್ಮಾಣದ ಬಗ್ಗೆ ನಡೆದ ಹೋರಾಟ ಇಂದಿನದ್ದಲ್ಲ. ಬಾಬರಿ ಮಸೀದಿ ಇದ್ದ ಜಾಗದಲ್ಲಿ ರಾಮ ಮಂದಿರ ನಿರ್ಮಾಣವಾಗಬೆಕೆಂದಿದ್ದ ಯೋಜನೆ ಅದೆಷ್ಟೋ ವರ್ಷಗಳ ಬಳಿಕ 2020ರಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಶಂಕುಸ್ಥಾಪನೆ ನೆರವೇರಿದೆ.
ಚಾರ್ ಧಾಮ್ ಯೋಜನೆ:
ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದರಿನಾಥ ದೇವಾಲಯಗಳನ್ನು ಸಂಪರ್ಕಿಸುವ ಚಾರ್ ಧಾಮ್ ಯೋಜನೆಯನ್ನು ಮೋದಿ ಸರ್ಕಾರ ಪ್ರಾರಂಭಿಸಿತು. ಚಾರ್ ಧಾಮ್ ಪ್ರವಾಸವನ್ನು ಹಿಂದೂ ಧಾರ್ಮಿಕ ಪ್ರವಾಸ ಎಂದು ಕರೆಯಾಲಾಗುತ್ತದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮೊದಲ ಓಮಿಕ್ರಾನ್ ಪತ್ತೆ
ಕಾಶ್ಮೀರದ ದೇವಾಲಯಗಳ ನವೀಕರಣ:
ಜಮ್ಮು ಹಾಗೂ ಕಾಶ್ಮೀರದಲ್ಲಿ ದೇವಾಲಯಗಳ ನವೀಕರಣದ ಬಗ್ಗೆ ಪ್ರಧಾನಿ ಹೆಚ್ಚು ಬಾರಿ ಮಾತನಾಡಿದ್ದಾರೆ. 2019ರಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಗೊಳಿಸಿದ ಬಳಿಕ ಅಲ್ಲಿನ ದೇವಾಲಯಗಳನ್ನು ನವೀಕರಣಗೊಳಿಸುವ ಕಾರ್ಯವನ್ನು ಪ್ರಾರಂಭಿಸಿದೆ.
ವಿದೇಶದಲ್ಲಿರುವ ದೇವಾಲಯಗಳು:
ಪ್ರಧಾನಿ 2018ರಲ್ಲಿ ಅಬುಧಾಬಿಗೆ ಭೇಟಿ ನೀಡಿದ್ದಾಗ ಅಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಅಡಿಪಾಯ ಹಾಕಿದ್ದರು. ಈ ದೇವಾಲಯಕ್ಕೆ 2015ರಲ್ಲಿ ಯುಎಇ ಸರ್ಕಾರ ಭೂಮಿಯನ್ನು ನೀಡಿತ್ತು. 2019ರಲ್ಲಿ ಬಹ್ರೇನ್ ನಲ್ಲಿನ 200 ವರ್ಷಗಳಷ್ಟು ಹಳೆಯದಾದ ಶ್ರೀ ಕೃಷ್ಣ ದೇವಾಲಯದ ನವೀಕರಣ ಯೋಜನೆಯನ್ನು ಕೈಗೊಳ್ಳಲಾಗಿದೆ.