– ಪಹಲ್ಗಾಮ್ ದಾಳಿಯಲ್ಲಿ ಭದ್ರತಾ ಪಡೆಗಳದ್ದೇ ವೈಫಲ್ಯ ಅಂದಿದ್ದ ಜ್ಯೋತಿ ಮಲ್ಹೋತ್ರಾಳ ವಿಡಿಯೋ ಲಭ್ಯ
ನವದೆಹಲಿ: ಭಾರತದಲ್ಲಿದ್ದುಕೊಂಡೇ ಪಾಕಿಸ್ತಾನದ ಕಿವಿಯಲ್ಲಿ ದೇಶದ ಗುಟ್ಟು ಪಿಸುಗುಡುತ್ತಿರುವ ಬೇಹುಗಾರರ (Pakistani Spy) ಬಂಧನ ಸಂಖ್ಯೆ 11ಕ್ಕೆ ಏರಿದೆ.
ಎನ್‌ಐಎ, ಹರಿಯಾಣ, ಪಂಜಾಬ್ ಪೊಲೀಸರು (Punjab Police) ಒಟ್ಟು 8 ಜನರನ್ನು ಬಂಧಿಸಿದ್ರು.. ಈ ಬೆನ್ನಲ್ಲೇ ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ಮತ್ತೋರ್ವ ವ್ಯಕ್ತಿಯನ್ನ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಶೆಹಜಾದ್ ಎಂಬಾತನನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.
ಈತ ಭಾರತದಲ್ಲಿರುವ ಪಾಕ್ ಏಜೆಂಟ್‌ಗಳಿಗೆ ಹಣ ರವಾನಿಸುತ್ತಿದ್ದ.. ಭಾರತದ ಸಿಮ್ ಕೊಡಿಸಲು ಸಹಕಾರ ನೀಡ್ತಿದ್ದ ಎನ್ನಲಾಗಿದೆ. ಇತ್ತ ಪಾಕಿಸ್ತಾನ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದ ತಾರೀಫ್ ಎಂಬಾತನನ್ನು ಹರಿಯಾಣದ ನುಹ್‌ನಲ್ಲಿ ಬಂಧಿಸಲಾಗಿದೆ. ಈತ ವಾಟ್ಸಪ್ ಮೂಲಕ ಭಾರತೀಯ ಮಿಲಿಟರಿ ಚಟುವಟಿಕೆಯ ಗೌಪ್ಯ ಮಾಹಿತಿಯನ್ನು ಪಾಕ್ ಹೈಕಮಿಷನ್ ಏಜೆಂಟ್‌ಗಳಿಗೆ ರವಾನಿಸುತ್ತಿದ್ದಿದ್ದು ಬಯಲಾಗಿದೆ.
ಇನ್ನೂ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಇನ್‌ಸ್ಟಾಗ್ರಾಮ್ ಖಾತೆಯನ್ನ ನಿರ್ಬಂಧಿಸಲಾಗಿದೆ. ಈ ಬೆನ್ನಲ್ಲೇ ಆಕೆಯ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪಹಲ್ಗಾಮ್ ದಾಳಿಯಲ್ಲಿ ನಮ್ಮ ಭದ್ರತಾ ವೈಫಲ್ಯ ಇದೆ… ನಮ್ಮ ಸರ್ಕಾರದ್ದೇ ತಪ್ಪು ಎಂದಿದ್ದ ಜ್ಯೋತಿ ವಿಡಿಯೋ ಸಹ ಸಿಕ್ಕಿದೆ. ಪಹಲ್ಗಾಮ್ ಉಗ್ರದಾಳಿಯಲ್ಲಿ ಪಾಕ್‌ನ ಇಬ್ಬರು ಸೇನಾ ಕಮಾಂಡರ್‌ಗಳು ಶಾಮೀಲಾಗಿದ್ದರು ಅಂತ ತಿಳಿದು ಬಂದಿದೆ.
ಈ ಮಧ್ಯೆ, ಹೈದ್ರಾಬಾದ್‌ನಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದ ಇಬ್ಬರು ಭಯೋತ್ಪಾದಕರನ್ನು ತೆಲಂಗಾಣ, ಆಂಧ್ರಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ, ವಿಜಯನಗರದ ಸಿರಾಜ್ ಮತ್ತು ಹೈದರಾಬಾದ್‌ನ ಸಮೀರ್ ಎಂಬವರನ್ನ ಬಂಧಿಸಿದ್ದಾರೆ.