ಬೆಂಗಳೂರು: ಕರ್ನಾಟಕ ಜನತೆಗೆ ಗುಡ್ ನ್ಯೂಸ್. ರಾಜ್ಯ ಸರ್ಕಾರ ಪ್ರವೇಶ ತೆರಿಗೆಯನ್ನು ರದ್ದು ಪಡಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ ಮೂರು ರೂ. ಕಡಿಮೆಯಾಗಿದೆ.
ಹೌದು. ಜುಲೈ 1ರಂದು ದೇಶದೆಲ್ಲೆಡೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾಗುತ್ತಿದ್ದಂತೆ ಕರ್ನಾಟಕ ಸರ್ಕಾರ ಶೇ.5ರಷ್ಟಿದ್ದ ಪ್ರವೇಶ ತೆರಿಗೆಯನ್ನು ರದ್ದು ಮಾಡಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಡೀಸೆಲ್ ಅತಿ ಕಡಿಮೆ ಬೆಲೆಗೆ ಕರ್ನಾಟಕದಲ್ಲಿ ಲಭ್ಯವಾಗುತ್ತಿದೆ.
Advertisement
ಜುಲೈ 2ರಂದು checkpetrolprice.com ಪ್ರಕಾರ ಅತಿ ಕಡಿಮೆ ಡೀಸೆಲ್ ಬೆಲೆ ಪ್ರತಿ ಲೀಟರ್‍ಗೆ ಮಂಗಳೂರಿನಲ್ಲಿ 53.71 ರೂ. ಇದ್ದರೆ ಬೆಂಗಳೂರಿನಲ್ಲಿ 54.31 ರೂ. ಇದೆ. ಮಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 63.63 ಪೈಸೆ ಇದ್ದರೆ, ಬೆಂಗಳೂರಿನಲ್ಲಿ 64.21 ರೂ. ಪೈಸೆ ಇದೆ.
Advertisement
ಮಂಗಳೂರು ತೈಲ ಶುದ್ಧೀಕರಣ ಸ್ಥಾವರ(ಎಂಆರ್‍ಪಿಎಲ್) ಇರುವ ಕಾರಣ ಮಂಗಳೂರಿನಲ್ಲಿ ತೈಲ ಬೆಲೆ ಸಾಧಾರಣವಾಗಿ ಕಡಿಮೆ ಇದ್ದರೆ, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಸಾಗಾಣಿಕಾ ವೆಚ್ಚದಿಂದಾಗಿ ನಗರದಿಂದ ನಗರಕ್ಕೆ ಬೆಲೆ ಬದಲಾಗುತ್ತಿರುತ್ತದೆ.
Advertisement
ಎಷ್ಟು ಕಡಿಮೆ?
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ತಮಿಳುನಾಡಿಗಿಂತ ಕರ್ನಾಟದಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 2.50 ರೂ. ಕಡಿಮೆ ಇದ್ದರೆ, ಮಹಾರಾಷ್ಟ್ರಕ್ಕೆ ಹೋಲಿಸಿದರೆ 3.50 ರೂ. ಕಡಿಮೆ ಇದೆ. ಇನ್ನೂ ಗೋವಾಗೆ ಹೋಲಿಸಿದರೆ 1.50 ರೂ., ಆಂಧ್ರಕ್ಕೆ ಹೋಲಿಸಿದರೆ 6 ರೂ., ತೆಲಂಗಾಣಕ್ಕೆ ಹೋಲಿಸಿದರೆ 4 ರೂ. ಕಡಿಮೆ ಇದೆ.
Advertisement
ಪೆಟ್ರೋಲ್ ಜಿಎಸ್‍ಟಿಯಲ್ಲಿ ಬರಲ್ಲ:
ಅಡುಗೆ ಅನಿಲ (ಎಲ್‍ಪಿಜಿ), ಸೀಮೆಎಣ್ಣೆ, ನಾಫ್ತಾ ಗಳಿಗೆ ಜಿಎಸ್‍ಟಿ ಅನ್ವಯವಾಗುತ್ತಿದೆ. ಆದರೆ ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.