ನವದೆಹಲಿ: ಏರ್‍ಪೋರ್ಟ್, ಮಾಲ್ ಹಾಗೂ ಮಲ್ಟಿಪ್ಲೆಕ್ಸ್‍ಗಳಲ್ಲಿ ನೀರಿನ ಬಾಟಲಿಯನ್ನ ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗ್ತಿರೋ ಬಗ್ಗೆ ಸಾಕಷ್ಟು ದೂರುಗಳಿವೆ. ಇದೀಗ ಒಂದೇ ಉತ್ಪನ್ನವನ್ನ ಬೇರೆ ಬೇರೆ ಎಂಆರ್‍ಪಿಗಳಲ್ಲಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ್ದು ಗ್ರಾಹಕರಿಕೆ ರಿಲೀಫ್ ಸಿಕ್ಕಂತಾಗಿದೆ.
ಲೀಗಲ್ ಮೆಟ್ರೋಲಜಿ(ಪ್ಯಾಕೇಜ್ಡ್ ಕಮಾಡಿಟೀಸ್) ನಿಯಮ 2011ರ ತಿದ್ದುಪಡಿಯ ಭಾಗವಾಗಿ ಈ ನಿರ್ದೇಶನ ನೀಡಲಾಗಿದ್ದು, 2018ರ ಜನವರಿ 1ರಿಂದ ಜಾರಿಗೆ ಬರಲಿದೆ.
Advertisement
ಯಾವುದೇ ವ್ಯಕ್ತಿ ಕಾನೂನಿನ ಅಡಿಯಲ್ಲಿ ಅನುಮತಿ ಇಲ್ಲದೆ, ಒಂದೇ ಪ್ಯಾಕೇಜ್ಡ್ ಉತ್ಪನ್ನಕ್ಕೆ ಎರಡೆರೆಡು ಎಂಆರ್‍ಪಿ ಹಾಕುವಂತಿಲ್ಲ ಎಂದು ನಿಯಮದಲ್ಲಿ ಹೇಳಲಾಗಿದೆ. ಅಲ್ಲದೆ ಗ್ರಾಹಕರಿಗೆ ಓದಲು ಸುಲಭವಾಗುವಂತೆ ಎಂಆರ್‍ಪಿ ದರದ ಅಕ್ಷರಗಳು ಹಾಗೂ ಸಂಖ್ಯೆಗಳ ಗಾತ್ರವನ್ನು ದೊಡ್ಡದಾಗಿಸಬೇಕು ಎಂದು ಸರ್ಕಾರ ಆದೇಶಿಸಿದೆ.
Advertisement
ಚಿತ್ರಮಂದಿರ, ಏರ್ಪೋರ್ಟ್, ಮಾಲ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಒಂದೇ ಉತ್ಪನ್ನವನ್ನ ಎರಡೆರಡು ಎಂಆರ್‍ಪಿ ಯಲ್ಲಿ ಮಾರಾಟ ಮಾಡ್ತಿದ್ದ ಬಗ್ಗೆ ದೂರುಗಳನ್ನ ನೀಡ್ತಿದ್ದ ಗ್ರಾಹಕರಿಗೆ ಇದರಿಂದ ನೆರವಾಗಲಿದೆ ಎಂದು ಹೇಳಿದೆ.
Advertisement
ಆದ್ರೆ ಈ ನಿಯಮ ನಮಗೆ ಅನ್ವಯವಾಗುವುದಿಲ್ಲ. ಯಾಕಂದ್ರೆ ಜಿಎಸ್‍ಟಿ ಅಡಿಯಲ್ಲಿ ಇದು ಸಪಲೈಯರ್ ಸರ್ವೀಸ್ ಅಡಿಯಲ್ಲಿ ಬರುತ್ತದೆ ಎಂದು ರೆಸ್ಟೊರೆಂಟ್ ಮಾಲೀಕರು ಹೇಳಿದ್ದಾರೆ. ಹಾಗೂ ಈ ನಿಮಯ ಗ್ರಾಹಕರು ಕೌಂಟರ್‍ಗಳಲ್ಲಿ ಕೊಳ್ಳುವಂತಹ ಚಿಲ್ಲರೆ ವ್ಯಾಪಾರಸ್ಥರಿಗೆ ಅನ್ವಯವಾಗುತ್ತದೆ ಎಂದು ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದ ಕಾರ್ಯದರ್ಶಿ ರಾಹುಲ್ ಸಿಂಗ್ ಹೇಳಿದ್ದಾರೆ.
Advertisement
ಇದಲ್ಲದೆ ವೈದ್ಯಕೀಯ ಉಪಕರಣಗಳಾದ ಸ್ಟೆಂಟ್, ವಾಲ್ವ್‍ಗಳು, ಸಿರಿಂಜ್‍ಗಳು ಹಾಗೂ ಶಸ್ತ್ರಚಿಕಿತ್ಸೆಯ ಸಲಕರಣೆಗಳ ಮೇಲೆ ಎಂಆರ್‍ಪಿಯನ್ನು ಹಾಕಬೇಕೆಂದು ಗ್ರಾಹಕ ವ್ಯವಹಾರಗಳ ಇಲಾಖೆ ಆದೇಶಿಸಿದೆ.