ಮೈಸೂರು: ಮಕ್ಕಳ ಅಪೌಷ್ಠಿಕತೆ ಹೊಗಲಾಡಿಸಲು ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುತ್ತಿದ್ದ ಹಾಲಿನ ಪುಡಿ ಪ್ಯಾಕೆಟ್‌ಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದ ಮುಖ್ಯ ಶಿಕ್ಷಕ ರೆಡ್ ಹ್ಯಾಂಡ್ ಆಗಿ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಹೆಚ್.ಡಿ. ಕೋಟೆ (Heggadadevankote) ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಯ ಗಣೇಶ್ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ(HeadTeacher). ಇದನ್ನೂ ಓದಿ: Kolkata Doctor Rape-Murder| ಶವ ಹಸ್ತಾಂತರ ಮಾಡಿದ 3 ಗಂಟೆಗಳ ಬಳಿಕ ಎಫ್‍ಐಆರ್ ದಾಖಲಾಗಿದ್ದು ಯಾಕೆ – ಸುಪ್ರೀಂ ಚಾಟಿ
ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಉಚಿತವಾಗಿ ನೀಡುವ ಒಟ್ಟು 10 ಹಾಲಿನ ಪುಡಿಗಳು ಶಿಕ್ಷಕ ದ್ವಿಚಕ್ರ ವಾಹನದಲ್ಲಿ ಕೊಂಡೊಯ್ಯುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ. ಹಾಲಿನ ಪ್ಯಾಕೆಟ್‌ಗಳ ಅವಧಿ ಮೀರಿದ್ದರಿಂದ ಮನೆಗೆ ಕೊಂಡೊಯ್ಯುತ್ತಿದ್ದೆ ಎಂದು ಶಿಕ್ಷಕ ಸ್ಪಷ್ಟೀಕರಣ ಕೊಡಲು ಮುಂದಾಗಿದ್ದರು. ಆದರೆ ಹಾಲಿನ ಪ್ಯಾಕೆಟ್‌ಗಳ ಪರಿಶೀಲನೆ ಮಾಡಿದಾಗ ಬರುವ ಡಿಸೆಂಬರ್ ವರೆಗೂ ಹಾಲಿನ ಪುಡಿ ಬಳಕೆ ಮಾಡಲು ಅವಧಿ ಇರುವುದು ಖಾತರಿಯಾಗಿದೆ. ಇದನ್ನೂ ಓದಿ: ಹೆಚ್ಚುತ್ತಿರುವ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ- ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾರ್ಗಸೂಚಿ ಪ್ರಕಟ
ಹಾಲಿನ ಪುಡಿಗಳ ಸಮೇತ ದ್ವಿಚಕ್ರ ವಾಹನವನ್ನು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ವಾಮಮಾರ್ಗದ ಮೂಲಕ ಸರ್ಕಾರ ಕೆಡವಲು ಮುಂದಾಗುತ್ತಿದೆ: ಹರಿಪ್ರಸಾದ್ ಕಿಡಿ