ನವದೆಹಲಿ: ಹೊಸ ಸಂಸತ್ ಭವನದಲ್ಲಿ ಅನಾವರಣಗೊಂಡ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ ಈಗ ವಿವಾದಕ್ಕೆ ಕಾರಣವಾಗಿದೆ.
ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಾಷ್ಟ್ರೀಯ ಲಾಂಛನವನ್ನು ವಿರೂಪಗೊಳಿಸಿದೆ ಎಂದು ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.
Advertisement
मूल कृति के चेहरे पर सौम्यता का भाव तथा अमृत काल में बनी मूल कृति की नक़ल के चेहरे पर इंसान, पुरखों और देश का सबकुछ निगल जाने की आदमखोर प्रवृति का भाव मौजूद है।
हर प्रतीक चिन्ह इंसान की आंतरिक सोच को प्रदर्शित करता है। इंसान प्रतीकों से आमजन को दर्शाता है कि उसकी फितरत क्या है। pic.twitter.com/EaUzez104N
— Rashtriya Janata Dal (@RJDforIndia) July 11, 2022
Advertisement
ವಿವಾದ ಏನು?
ಸಾರನಾಥದ ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹ ಭಾರತ ರಾಷ್ಟ್ರ ಲಾಂಛನವಾಗಿದೆ. ಮೋದಿ ಅನಾವರಣಗೊಳಿಸಿರುವ ಲಾಂಛನದಲ್ಲಿ ಸಿಂಹಗಳು ಬಾಯಿ ತೆರೆದಿದ್ದು ಎರಡು ಕೋರೆ ಹಲ್ಲುಗಳು ಕಾಣುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ ಅನಾವರಣ – ಏನಿದರ ವಿಶೇಷ?
Advertisement
ರಾಷ್ಟ್ರೀಯ ಜನತಾ ದಳ, ಮೂಲ ಲಾಂಛನದಲ್ಲಿ ನಾಲ್ಕು ಸಿಂಹಗಳ ಮುಖದಲ್ಲಿ ಸೌಮ್ಯವಿದೆ. ಆದರೆ ಹೊಸದಾಗಿ ಅನಾವರಣಗೊಂಡ ಸಿಂಹಗಳು ಬಾಯಿ ತೆರೆದಿದ್ದು ಎಲ್ಲವನ್ನೂ ನುಂಗುವ ಪ್ರವೃತ್ತಿಯಲ್ಲಿದೆ ಎಂದು ಟೀಕಿಸಿದೆ.
Advertisement
From Gandhi to Godse; From our national emblem with lions sitting majestically & peacefully; to the new national emblem unveiled for the top of the new Parliament building under construction at Central Vista; Angry lions with bared fangs.
This is Modi's new India! pic.twitter.com/cWAduxPlWR
— Prashant Bhushan (@pbhushan1) July 12, 2022
ಹಿರಿಯ ವಕೀಲ ಪ್ರಶಾಂತ್ ಭೂಷಣ್ ʼಗಾಂಧಿಯಿಂದ ಗೋಡ್ಸೆಯವರೆಗೆʼ ಎಂದು ಬರೆದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. “ಗಾಂಧಿಯಿಂದ ಗೋಡ್ಸೆಯವರೆಗೆ; ನಮ್ಮ ರಾಷ್ಟ್ರೀಯ ಲಾಂಛನದಲ್ಲಿ ಸಿಂಹಗಳು ಭವ್ಯವಾಗಿ ಮತ್ತು ಶಾಂತಿಯುತವಾಗಿ ಕುಳಿತಿವೆ. ಸೆಂಟ್ರಲ್ ವಿಸ್ತಾದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಸತ್ ಕಟ್ಟಡದ ಮೇಲ್ಭಾಗದಲ್ಲಿ ಅನಾವರಣಗೊಂಡ ಹೊಸ ರಾಷ್ಟ್ರೀಯ ಲಾಂಛನಗಳು ಕೋರೆಹಲ್ಲುಗಳನ್ನು ಹೊಂದಿರುವ ಕೆರಳಿರುವ ಸಿಂಹಗಳು. ಇದು ಮೋದಿಯ ನವ ಭಾರತ ಎಂದು ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಷ್ಟ್ರೀಯ ಲಾಂಛನದಲ್ಲಿರುವ ಸಿಂಹಗಳಿಗೆ ಯಾವುದೇ ರೀತಿಯಲ್ಲಿ ಅವಮಾನವಾಗಿಲ್ಲ. ಮೇಲಿನಿಂದ ಫೋಟೋ ತೆಗೆದರೆ ಎಲ್ಲ ಸಿಂಹಗಳು ಸೌಮ್ಯ ರೀತಿಯಲ್ಲೇ ಕಾಣುತ್ತಿವೆ. ಆದರೆ ಕೆಳಗಡೆಯಿಂದ ಮೇಲುಗಡೆ ಇರುವ ಸಿಂಹದ ಫೋಟೋ ತೆಗೆದಾಗ ಎರಡು ಕೋರೆ ಹಲ್ಲುಗಳು ಕಾಣುತ್ತವೆ ಎಂದಿದ್ದಾರೆ.
Funny that those who've never had a good look at our national emblem are criticising the facial features of the lions in it. Relax & have a look at this official emblem as given in State Emblem of India (Prohibition of Improper Use) Act, 2005.#LionCapitolOfIndia #AshokStambh pic.twitter.com/VrZu7Eh06o
— Sreejith Panickar (@PanickarS) July 12, 2022
ಇನ್ನು ಕೆಲವರು ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಭಾರತ ವಿದೇಶಗಳಿಗೆ ತಲೆ ಬಾಗಿತ್ತು. ಆದರೆ ಮೋದಿ ಅವಧಿಯಲ್ಲಿ ಸಿಂಹದಂತೆ ಭಾರತ ಘರ್ಜಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.