ಬಿಗ್‌ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಫಿನಾಲೆಗೆ ದಿನಗಣನೆ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಟ ಮುಗಿಯಲಿದೆ. ಈ ಹಂತದಲ್ಲಿ ಮನೆಯ ಎಲ್ಲ ಸ್ಪರ್ಧಿಗಳು ತಮ್ಮ ತಪ್ಪನ್ನು ಅರಿತು, ಒಬ್ಬರಿಗೊಬ್ಬರು ಕ್ಷಮೆ ಕೇಳಿದ್ದಾರೆ.
ಇದೇ ಭಾನುವಾರ (ಜ.18) ಬಿಗ್‌ಬಾಸ್ ಸೀಸನ್ 12ರ ಫಿನಾಲೆ ನಡೆಯಲಿದೆ. ಸದ್ಯ ಮನೆಯಲ್ಲಿ ಕೇವಲ 6 ಸ್ಪರ್ಧಿಗಳು ಉಳಿದಿದ್ದು, ಗೆಲುವಿನ ಕೊನೆಯ ಮೆಟ್ಟಿಲೇರಲು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿದೆ. ಮನೆಯ ಎಲ್ಲ ಸ್ಪರ್ಧಿಗಳು ಸೀಸನ್‌ನಲ್ಲಿ ತಾವು ಮಾಡಿದ ತಪ್ಪು ಹಾಗೂ ಮಾತನಾಡಿದ ತಪ್ಪು ಮಾತುಗಳನ್ನು ಅರಿತು ಒಬ್ಬರಿಗೊಬ್ಬರು ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ:BBK 12 | ಧ್ರುವಂತ್ ಔಟ್ – Top 6 ಸ್ಪರ್ಧಿಯಾಗಿ ಕಾವ್ಯ ಸೇಫ್
ಜಗಳದಿಂದ ಕ್ಷಮೆಯತ್ತ.. ಕೊನೆಯಲಿ ಉಳಿಯುವುದೊಂದೇ ಸುಂದರ ಸ್ನೇಹ😍🤗
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/EA16NOTdPW
— Colors Kannada (@ColorsKannada) January 15, 2026
ಗಿಲ್ಲಿ (Gilli) ಹಾಗೂ ಅಶ್ವಿನಿ ಗೌಡ (Ashwini Gowda) ಪರಸ್ಪರ ಕ್ಷಮೆಯಾಚಿಸಿದ್ದಾರೆ. ಜಗಳ ಆಡೋ ಭರದಲ್ಲಿ ನಾನೇ ಹೋಗೇ ಬಾರೇ ಅಂತ ಮಾತಾಡಿದೀನಿ. ಅದರ ಅವಶ್ಯಕತೆ ಇರಲಿಲ್ಲ ಯಾಕೆಂದ್ರೆ ನೀವು ವಯಸ್ಸಲ್ಲಿ ದೊಡ್ಡವರು. ಅದೆಲ್ಲಾ ನೆನಪು ಮಾಡಿಕೊಂಡಾಗ ಸಿಕ್ಕಾಪಟ್ಟೆ ಬೇಜಾರಾಗುತ್ತದೆ. ಮನಸ್ಸಿಗೆ ತುಂಬಾ ನೋವು ಮಾಡಿದೀನಿ… ಅದಕ್ಕೆ ಅಶ್ವಿನಿಗೆ Sorry ಕೇಳಿದ್ದಾರೆ.
ಇನ್ನೂ ಅಶ್ವಿನಿ ಗೌಡ, ಜೀವನಾನ ನಿನ್ನ ತರ ಲೈಟಾಗಿ ತಗೊಂಡು, ಎಂಜಾಯ್ ಕೂಡ ಮಾಡ್ಬೋದು. ಎಲ್ಲವೂ ಸೀರಿಯಸ್ ಆಗಿಯೇ ತಗೋಬೇಕು ಅಂತೇನು ಇಲ್ಲ. ನಿನಗೆ ಥ್ಯಾಂಕ್ಸ್ ಹೇಳ್ತೀನಿ ಯಾಕಂದ್ರೆ ನಿನ್ನಿಂದ ಒಂದು ಪಾಠ ಕಲ್ತಿದೀನಿ ಎಂದು ಹೇಳಿದ್ದಾರೆ. ಇಬ್ಬರು ಒಬ್ಬರಿಗೊಬ್ಬರು ಬಿಗಿದಪ್ಪಿಕೊಂಡು ಕೋಪವನ್ನು ಬದಿಗಿಟ್ಟು, ಪ್ರೀತಿಯ ನಗು ಚೆಲ್ಲಿದ್ದಾರೆ.ಇದನ್ನೂ ಓದಿ: ರಾಶಿಕಾ ಹೇಳೋ ಆ 5 ಫೈನಲಿಸ್ಟ್‌ಗಳ್ಯಾರು?

