ಬೆಂಗಳೂರು: ಕಾನ್‌ಸ್ಟೇಬಲ್‌ನಿಂದ (Constable) ಹಿಡಿದು ಅಧಿಕಾರಿಗಳವರೆಗೂ ಹೊಸ ಅಪರಾಧ ಕಾನೂನಿನ (New Criminal Laws) ಬಗ್ಗೆ ತರಬೇತಿ ನೀಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ (Parameshwara) ಹೇಳಿದ್ದಾರೆ.
ಇಂದಿನಿಂದ 3 ದೇಶಿ ಕಾನೂನು ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೊಸ ಕಾನೂನುಗಳ ಜಾರಿ ಬಗ್ಗೆ ಎಲ್ಲರಿಗೂ ತರಬೇತಿ ಕೊಟ್ಟಿದ್ದೇವೆ. ಇದಕ್ಕಾಗಿ ಪೊಲೀಸರಿಗೆ ಅಪ್ಲಿಕೇಶನ್ ಸಿದ್ಧಪಡಿಸಿದ್ದೇವೆ. ಪೊಲೀಸರಿಗೆ ಹೊಂದಾಣಿಕೆ ಆಗುವವರೆಗೂ ಈ ಅಪ್ಲಿಕೇಶನ್ ನೋಡಿಕೊಂಡು ಕೆಲಸ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಭಾರತೀಯ ನ್ಯಾಯ ಸಂಹಿತೆಯಡಿ ದೆಹಲಿಯಲ್ಲಿ ಮೊದಲ FIR ದಾಖಲು
Advertisement
Advertisement
ಇದು ಒಂದು ರೀತಿಯಲ್ಲಿ ಟೆಸ್ಟಿಂಗ್ ಸಮಯ. ಇಡೀ ದೇಶದಲ್ಲಿ ಜಾರಿಯಾಗಿದೆ. ಪ್ರತಿಕ್ರಿಯೆ ನೋಡಿಕೊಂಡು ಸರ್ಕಾರ ಮುಂದೆ ಕೆಲ ಪರಿಷ್ಕರಣೆ ಮಾಡಬಹುದು. ಇವತ್ತಿನಿಂದ ಯಾವೆಲ್ಲ ಪ್ರಕರಣಗಳು ದಾಖಲಾಗುತ್ತದೋ ಅವೆಲ್ಲವೂ ಈ ಹೊಸ ಕಾನೂನಿನ ಅಡಿ ದಾಖಲಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳಿಗೆ ಗುಡ್‌ಬೈ – ಇಂದಿನಿಂದ 3 ದೇಶಿ ಕಾನೂನು ಜಾರಿ
Advertisement
ಹೊಸ ಕಾನೂನುಗಳ ಪರಿಣಾಮ ಏನು ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಸ್ವಲ್ಪ ದಿನಗಳ ನಂತರ ಇದರ ಸಕ್ಸಸ್ ಬಗ್ಗೆ ಗೊತ್ತಾಗಲಿದೆ ಎಂದರು.