ಬೆಂಗಳೂರು: ಹಾಲಿನ ದರ (Milk Rate) 3 ರೂ. ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದ್ದು, ಆಗಸ್ಟ್ 1 ರಿಂದ ಈ ದರ ಜಾರಿಯಾಗಲಿದೆ.
ಹೆಚ್ಚಳವಾಗಿರುವ ಹಾಲಿನ ದರವನ್ನು ರೈತರಿಗೆ (Farmer) ನೀಡಲು ತೀರ್ಮಾನ ಮಾಡಲಾಗಿದೆ. ಪ್ರತಿ ಲೀಟರ್ ಹಾಲಿನ ದರ 3 ರೂಪಾಯಿ ಏರಿಕೆಯಾಗಲಿದೆ. ಕೆಎಂಎಫ್ 5 ರೂಪಾಯಿ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸಚಿವ ಸಂಪುಟ ಸಭೆಯಲ್ಲಿ 3 ರೂ. ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ. ಹೀಗಾಗಿ ಆಗಸ್ಟ್ 1 ರಿಂದ ನೂತನ ಹಾಲಿನ ದರ ಜಾರಿಯಾಗಲಿದೆ.
Advertisement
Advertisement
ಯಾವುದಕ್ಕೆ ಎಷ್ಟು ದರ..?
ಟೋನ್ಡ್ ಹಾಲು- 39- 42 ರೂ.
ಹೋಮೋಜಿನೈಸ್ಟ್ ಟೋನ್ಡ್ ಹಾಲು (ನೀಲಿ ಪ್ಯಾಕೇಟ್) 40- 43 ರೂ.
ಸ್ಪೇಷಲ್ ಹಾಲು (ಆರೆಂಜ್) 45- 48 ರೂ.
ಶುಭಂ ಹಾಲು (ಹಸಿರು)- 45-48 ರೂ.
ಸಮೃದ್ದಿ ಹಾಲು (ನೇರಳೆ ಪ್ಯಾಕೆಟ್) -50-53 ರೂ.
ಸಂತೃಪ್ತಿ ಹಾಲು- 52-55 ರೂ.
ಮೊಸರು- 47- 50 ರೂ.
Advertisement
Advertisement
ಒಟ್ಟಿನಲ್ಲಿ ಹಾಲಿನ ದರ ಏರಿಕೆಯಾಗುತ್ತಿರುವ ಸುದ್ದಿ ಕೇಳುತ್ತಿದಂತೆಯೇ ಜನ ಕಿಡಿಕಾರಿದ್ದಾರೆ. ಈ ಸರ್ಕಾರ ಬಂದ್ಮೇಲೆ ಎಲ್ಲ ರೇಟ್ ಜಾಸ್ತಿ ಆಗುತ್ತಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ಹಾಲಿನ ದರ ಕೂಡ ಜಾಸ್ತಿ ಮಾಡ್ತ ಇದ್ದಾರೆ. ಒಂದು ಕಡೆ ಫ್ರೀ ಕೊಟ್ಟು ಹೀಗೆ ರೇಟ್ ಜಾಸ್ತಿ ಮಾಡಿ ಜನರಿಗೆ ತೊಂದರೆಯಾಗುವಂತೆ ಮಾಡುತ್ತಿದ್ದಾರೆ. ಫ್ರೀ ಸ್ಕೀಮ್ ಬೇಡ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಬೇಡಿ ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.
Web Stories