ಹುಬ್ಬಳ್ಳಿ: ಮೂರು ನಂಬರ್‌ನಿಂದ ನನಗೆ ಕಿರಿಕಿರಿ, ಧಮ್ಕಿ, ಬೆದರಿಕೆ ಕರೆ ಬರುತ್ತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು.
Advertisement
ಪ್ರಮೋದ್ ಮುತಾಲಿಕ್ ವಿರುದ್ಧ ಇನ್‍ಸ್ಟಾಗ್ರಾಮ್‍ನಲ್ಲಿ ಜೀವ ಬೆದರಿಕೆ ಪೋಸ್ಟ್ ಮಾಡಲಾಗಿತ್ತು. ಈ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಮುತಾಲಿಕ್ ಅವರು ಮನವಿ ಸಲ್ಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ದಿನದ ಹಿಂದೆ ಮಾರಿಗುಡಿ ಗ್ರೂಪ್‍ನಲ್ಲಿ ನನಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಸದ್ಯ ಪೊಲೀಸ್ ಆಯುಕ್ತರ ಜೊತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯಸಭೆ ಫೈಟ್‍ನಲ್ಲಿ ಟ್ವಿಸ್ಟ್ – ಕಾಂಗ್ರೆಸ್, ಜೆಡಿಎಸ್ ಮಧ್ಯೆ ‘ಆತ್ಮಸಾಕ್ಷಿ’ ಫೈಟ್
Advertisement
Advertisement
ಮೂರು ನಂಬರ್‌ನಿಂದ ನನಗೆ ಕಿರಿಕಿರಿ, ಧಮ್ಕಿ, ಅಶ್ಲೀಲ ಶಬ್ಧ ಬಳಸಿ ಬೆದರಿಕೆ ಹಾಕುತ್ತಿದ್ದಾರೆ. ಆ ಮೂರು ನಂಬರ್ ಕೂಡಾ ದೂರಿನಲ್ಲಿ ಉಲ್ಲೇಖ ಮಾಡಿದ್ದೇನೆ. ಇದಕ್ಕೆ ಹಿಂದೇಟು ಹಾಕಿ ಸುಮ್ಮನೆ ಕುಳಿತುಕೊಳ್ಳುವ ಮಾನಸಿಕತೆ ನನಗಿಲ್ಲ. ನಾವು ವಾಸ ಮಾಡುವ ಸ್ಥಳೀಯ ಠಾಣೆಗೆ ದೂರನ್ನ ಕೊಡಲು ಹೇಳಿದ್ದಾರೆ. ಅದನ್ನ ನಾನು ಮಾಡುತ್ತೇನೆ ಎಂದರು.
Advertisement
ಇನ್‍ಸ್ಟಾಗ್ರಾಮ್‍ನಲ್ಲಿ ನನಗೆ ಜೀವ ಬೆದರಿಕೆ ಹಾಕಿದ್ದಕ್ಕೆ 60 ಜನ ಲೈಕ್ ಮಾಡಿದ್ದಾರೆ. ಕೆಲವರು ಕಾಮೆಂಟ್ ಮಾಡಿ ದುಡ್ಡು ಕೊಡುವುದು ಬೇಡ, ನಾವು ಹಾಗೆಯೇ ಕೊಂದು ಹಾಕುತ್ತೇವೆ ಎಂದಿದ್ದಾರೆ. 60 ಜನ ಲೈಕ್ ಮಾಡಿದ್ದು, ಈ ಮೂಲಕ ಪೋಸ್ಟ್‌ಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಅರ್ಥವಾಗುತ್ತೆ. ಅವರು ಅಪರಾಧಿ ಆಗ್ತಾರೆ. ಪೋಸ್ಟ್ ಹಾಕಿದ ಹಾಗೂ ಕಾಮೆಂಟ್ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ಕೊಟ್ಟಿದ್ದೇನೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಸಂಖ್ಯೆ 19 ರಲ್ಲಿದೆ ಲೆಹರ್ ಸಿಂಗ್ ಗೆಲುವಿನ ಸೀಕ್ರೆಟ್