ಮುಂಬೈ: ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಪ್ರೀತಿಸುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಆರೋಪದ ಮೇಲೆ 24ರ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ಘಟನೆಯಲ್ಲಿ ಘಟನೆ ನಡೆದಿದ್ದು ಆರೋಪಿ ಆಕಾಶ್ ದೇಸಾಲೆ (24) ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ: ಕನ್ನಡಿಗ ಸಂಸದ ಬೇಸರ
ಏನಿದು ಇನ್ಸ್ಟಾ ಪ್ರೀತಿ?
ಕೆಲ ತಿಂಗಳ ಹಿಂದೆ ಯುವಕ ಹಾಗೂ ಅಪ್ರಾಪ್ತ ಬಾಲಕಿ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದಾರೆ. ಆನ್‌ಲೈನ್‌ನಲ್ಲೇ ಮೆಸೇಜ್ ಮಾಡುತ್ತಾ ಪರಸ್ಪರ ಸಂಪರ್ಕ ಸಂಖ್ಯೆಗಳನ್ನು ಬದಲಾಯಿಸಿಕೊಂಡಿದ್ದಾರೆ. ಕ್ರಮೇಣ ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿ ಆಗಾಗ್ಗೆ ಹೊರಗೆ ಭೇಟಿ ಮಾಡಲೂ ಪ್ರಾರಂಭಿಸಿದ್ದಾರೆ. ಈ ವೇಳೆ ದೈಹಿಕ ಸಂಪರ್ಕ ಬೆಳೆದು ಬಾಲಕಿ ಗರ್ಭಿಣಿಯಾಗಿದ್ದಾಳೆ.
ಯುವಕ ಯಾಮಾರಿಸಲು ಮುಂದಾಗಿದ್ದರಿಂದ ಬಾಲಕಿ ಭಾರತಿ ವಿದ್ಯಾಪೀಠ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯು ಬಾಲಕಿಗೆ ಕಳೆದ 7 ತಿಂಗಳಿಂದ ದೈಹಿಕ ಕಿರುಕುಳ ನೀಡುತ್ತಿದ್ದಾನೆ. ಜಂಭುಲವಾಡಿಯ ಹೋಟೆಲ್ ಮತ್ತು ಮನೆಯಲ್ಲಿ ಹಲವು ಬಾರಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹಾಗಾಗಿಯೇ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ಬಾಲಕಿ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನಾನಿನ್ನೂ ಬದುಕಿದ್ದೇನೆ ಎಂದ ಉರ್ಫಿ ಜಾವೇದ್ : ಸಾವಿನ ಸುದ್ದಿ ಹಬ್ಬಿಸಿದವರ ವಿರುದ್ಧ ಉರ್ಫಿ ಗರಂ
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಆಕಾಶ್ ದೇಸಾಲೆ ವೃತ್ತಿಯಲ್ಲಿ ಛಾಯಾಗ್ರಾಹಕನಾಗಿದ್ದು, ಸಿನ್ಹಗಡ ರಸ್ತೆಯ ಇಂಗಳೆ ಕಾಲೋನಿಯಲ್ಲಿ ವಾಸವಾಗಿದ್ದನು. ಯುವತಿ ಗರ್ಭಿಣಿಯಾಗಿರುವುದು ತಿಳಿಯುತ್ತಿದ್ದಂತೆ ಯುವಕ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಪತ್ತೆಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ಸಂಗೀತ ಯಾದವ್ ತಿಳಿಸಿದ್ದಾರೆ.