InternationalLatestMain Post

ಭಾರತೀಯ ವರನ ಮದುವೆಗೆ ಸೀರೆಯುಟ್ಟು ಮಿಂಚಿದ ಇಬ್ಬರು ಪುರುಷ ಸ್ನೇಹಿತರು

ಚಿಕಾಗೋ: ಭಾರತೀಯ (India) ಸ್ನೇಹಿತನ ಮದುವೆಗೆ ವಿದೇಶಿ ಸ್ನೇಹಿತರು (Friends) ಸೀರೆಯುಟ್ಟು (Saree) ಮದುವೆಗೆ (Wedding) ಬಂದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಾಮಾನ್ಯವಾಗಿ ಪುರುಷರ ಉಡುಪುಗಳನ್ನು ಮಹಿಳೆಯರು ಹಾಕಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಆದರೆ ಮಹಿಳೆಯರ ಉಡುಗೆಯಾದ ಅದರಲ್ಲೂ ಸೀರೆ, ಲೆಹಂಗಾದಂತಹ ಉಡುಗೆಗಳನ್ನು ಪುರುಷರು ಧರಿಸುವುದಿಲ್ಲ. ಆದರೆ ಅಮೆರಿಕದ ಚಿಕಾಗೊದಲ್ಲಿ ನಡೆದ ಭಾರತೀಯ ಜೋಡಿಗಳ ಮದುವೆಯಲ್ಲಿ ವರನ (Groom) ಇಬ್ಬರು ವಿದೇಶಿ ಪುರುಷ ಸ್ನೇಹಿತರು ಸೀರೆ ಧರಿಸಿ ಬಂದಿದ್ದಾರೆ.

 

View this post on Instagram

 

A post shared by Chicago Wedding Videographers (@paraagonfilms)

ಇದೀಗ ಈ ವೀಡಿಯೋವನ್ನು ಚಿಕಾಗೋ ಮೂಲದ ವೆಡ್ಡಿಂಗ್ ವೀಡಿಯೋಗ್ರಾಫರ್‌ಗಳಾದ ಪ್ಯಾರಾಗಾನ್‍ಫಿಲ್ಮ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಇಬ್ಬರು ಸ್ನೇಹಿತರು ತಮ್ಮ ಸ್ನೇಹಿತನ ಮದುವೆಗೆ ಸೀರೆಯುಟ್ಟು ಸಿದ್ಧರಾಗುತ್ತಿರುತ್ತಾರೆ. ಇದಕ್ಕೆ ಮಹಿಳೆಯೊಬ್ಬರು ಸಹಾಯ ಮಾಡುತ್ತಾರೆ. ಸೀರೆಯನ್ನುಟ್ಟು ಸಿದ್ಧರಾದ ನಂತರ ಅವರು ಹಣೆಗೂ ಬಿಂದಿಯನ್ನು ಇಡುತ್ತಾರೆ. ಅದಾದ ನಂತರ ಅವರು ಸೀರೆಯಲ್ಲೇ ವರನಿರುವ ಬಳಿಗೆ ಬರುತ್ತಾರೆ. ಜುಬ್ಬಾ ಧರಿಸಿಕೊಂಡಿರುವ ವರನು ಆ ಇಬ್ಬರು ಸ್ನೇಹಿತರನ್ನು ನೋಡಿ ನಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಮುಲ್ ಬಟರ್‌ಗೆ ಕೊರತೆ

ಈ ವೀಡಿಯೋಕ್ಕೆ ಅನೇಕರು ಕಾಮೆಂಟ್ ಮಾಡಿದ್ದು, ಅನೇಕ ನೆಟ್ಟಿಗರು ಸಕಾರಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರು, ವರನ ಸಂಸ್ಕೃತಿಯನ್ನು ಗೌರವಿಸಿದ್ದಕ್ಕಾಗಿ ಇಬ್ಬರು ಸ್ನೇಹಿತರನ್ನು ಶ್ಲಾಘಿಸಿದ್ದಾರೆ. ಮತ್ತೊಬ್ಬರು ಇದಕ್ಕೆ ಪರಮಾಶ್ಚರ್ಯ ಎಂದು ಬರೆದಿದ್ದಾರೆ. ಇದನ್ನೂ ಓದಿ: ಬಾವಿಗೆ ಬಿದ್ದ ಒಂಟಿ ಸಲಗ – ಮೇಲಕ್ಕೆತ್ತಲು ಅರಣ್ಯಾಧಿಕಾರಿಗಳಿಂದ ಬಿಗ್ ಸರ್ಕಸ್

Live Tv

Leave a Reply

Your email address will not be published. Required fields are marked *

Back to top button