ಚಿಕ್ಕಬಳ್ಳಾಪುರ: ಬರ್ತ್ ಡೇ ಪಾರ್ಟಿಗೆಂದು (Birth Day Party) ಕರೆಸಿ ಯುವಕನಿಗೆ ಕಂಠಪೂರ್ತಿ ಕುಡಿಸಿ ನಂತರ ಆತನ ಸ್ನೇಹಿತರೇ (Friends) ಚಾಕುವಿನಿಂದ ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.
ಚಿಂತಾಮಣಿಯ (Chintamani) ಅಂಜನಿ ಬಡಾವಣೆಯ ನಿವಾಸಿ ದುರ್ಗೇಶ್ ಅಲಿಯಾಸ್ ಚಿನ್ನಿ(24) ಮೃತ ದುರ್ದೈವಿ. ಈತ ಚಿಂತಾಮಣಿ ನಗರದ ಕನ್ನಂಪಲ್ಲಿ ಬಳಿಯ ನಿರ್ಜನಪ್ರದೇಶದಲ್ಲಿ ಹೇಮಂತ್ ಎಂಬಾತನ ಬರ್ತಡೇ ಪಾರ್ಟಿಗೆ ಹೋಗಿದ್ದ. ಆ ಪಾರ್ಟಿಯಲ್ಲಿ ಸುಮಾರು 10ಕ್ಕೂ ಅಧಿಕ ಜನರು ಸೇರಿದ್ದರು.
ಪಾರ್ಟಿ ವೇಳೆ ಹೇಮಂತ್ ಹಾಗೂ ಆತನ ಸ್ನೇಹಿತರಾದ ಶರತ್, ಮಧು, ಮಹೇಶ್ ಸೇರಿದಂತೆ ದುರ್ಗೇಶ್ ಕಂಠಪೂರ್ತಿ ಕುಡಿದಿದ್ದರು. ಅದಾದ ಬಳಿಕ ಗುರಾಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶರತ್, ಹೇಮಂತ್, ದುರ್ಗೇಶ್ ಮಧ್ಯೆ ವಾಗ್ವಾದ ನಡೆದಿದೆ. ಜೊತೆಗೆ ಹೇಮಂತ್ ಹಾಗೂ ದುರ್ಗೇಶ್ ಮಧ್ಯೆ ಮೊದಲೇ ಹಳೇ ವೈಷಮ್ಯ ಇತ್ತು. ಇದೇ ಕ್ಷುಲ್ಲಕ ನೆಪದಿಂದ ಕುಡಿದ ಅಮಲಿನಲ್ಲಿ ಬರ್ತ್‍ಡೇ ಬಾಯ್ ಹೇಮಂತ್ ಕೇಕ್ ಕಟ್ ಮಾಡಲು ತಂದಿದ್ದ ಚಾಕುವಿನಿಂದ ಸ್ನೇಹಿತ ದುರ್ಗೇಶನ ಕತ್ತು ಸೀಳಿದ್ದಾನೆ. ಅದಕ್ಕೆ ಆತನ ಸ್ನೇಹಿತರಾದ ಶರತ್, ಮಧು, ಮಹೇಶ್ ಸಾಥ್ ನೀಡಿದ್ದಾರೆ. ದುರ್ಗೇಶ್‍ನ ಕೊಲೆಯಾಗುತ್ತಿದ್ದಂತೆ ಅಲ್ಲಿದ್ದ ಸ್ನೇಹಿತರು ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಅಸ್ತು
ಪೊಲೀಸರು ಬೆಳಗ್ಗೆ ಘಟನಾ ಸ್ಥಳಕ್ಕೆ ಹೋದಾಗ ದುರ್ಗೇಶ್‍ನ ಹತ್ಯೆಯಾಗಿತ್ತು. ಆದರೂ ಯಾರೋಬ್ಬರೂ ಪೊಲೀಸರಿಗೆ ಬಾಯ್ಬಿಡದೇ ದುರ್ಗೇಶನ ಶವವಿರಿಸಿದ್ದ ಶವಾಗಾರದ ಬಳಿ ಜಮಾಯಿಸಿ ಅಮಾಯಕರಂತೆ ನಟಿಸಿದ್ದರು. ಈ ಹಿನ್ನೆಲೆಯಲ್ಲಿ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು (Police) ತನಿಖೆ ಕೈಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿ ಬರ್ತ್ ಡೇ ಬಾಯ್ ಹೇಮಂತ್ ಸೇರಿದಂತೆ ಮೃತನ ಸ್ನೇಹಿತರಾದ ಶರತ್, ಮಧು ಮಹೇಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬರ್ತ್‍ಡೇ ಪಾರ್ಟಿಗೆ ಸ್ನೇಹಿತ ಕರೆದಿದ್ದಾನೆಂದು ವೈಮನಸ್ಸು ಮರೆತು ದುರ್ಗೇಶ್ ಅಲಿಯಾಸ್ ಚಿನ್ನಿ ಮೈಮರೆತು ಕಂಠಪೂರ್ತಿ ಕುಡಿದಿದ್ದ. ಇದೇ ಸಂದರ್ಭವನ್ನು ಬಳಸಿಕೊಂಡ ಬರ್ತಡೇ ಬಾಯ್ ಹೇಮಂತ್ ಸ್ನೇಹಿತ ಎನ್ನುವುದನ್ನು ಮರೆತು ಕೇಕ್ ಕಟ್ ಮಾಡಿದಂತೆ ಕತ್ತು ಕಟ್ ಮಾಡಿ ಕೊಲೆ ಮಾಡಿದ್ದಾನೆ ಎನ್ನುವ ವಿಷಯ ಬಯಲಾಗಿದೆ. ಘಟನೆಗೆ ಸಂಬಂಧಿಸಿ 4 ಜನರನ್ನು ಬಂಧಿಸಿದ್ದಾರೆ. ಜೊತೆಗೆ ಚಾಕು ಪೂರೈಸಿದ್ದ ಆರೋಪದ ಮೇರೆಗೆ ಇನ್ನಿಬ್ಬರನ್ನ ಸಹ ಬಂಧಿಸಲಾಗಿದೆ. ಇದನ್ನೂ ಓದಿ: 60 ಸಾವಿರ ಹಸುಗಳನ್ನು ಬಲಿ ಪಡೆದ ಲಂಪಿ ವೈರಸ್ ಕರ್ನಾಟಕಕ್ಕೆ ಎಂಟ್ರಿ