ನಟ, ರಾಜಕಾರಣಿ, ಉದ್ಯಮಿಯೂ ಅಲ್ಲ -ಸ್ನೇಹಿತರಿಂದ ಸಿಕ್ತು ಸರ್ಪ್ರೈಸ್

Public TV
1 Min Read
MNL MARRIAGE copy

ಬೆಂಗಳೂರು: ಆತ ನಟನೂ ಅಲ್ಲ ರಾಜಕಾರಣಿಯೂ ಅಲ್ಲ, ಇತ್ತ ಹೆಸರಾಂತ ಉದ್ಯಮಿಯೂ ಅಲ್ಲ. ಕೇವಲ ಸಣ್ಣ ಹಾಲು ವ್ಯಾಪಾರಿ ಅಷ್ಟೇ. ಆದರೆ ನೂತನ ವಧು ವರನಿಗೆ ತನ್ನ ಸ್ನೇಹಿತರು ಸರ್ಪ್ರೈಸ್ ಗಿಫ್ಟ್ ಕೊಡುವ ಉದ್ದೇಶದಿಂದ ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಬೆಂಕಿಯ ಫೈರಿಂಗ್ ಮೂಲಕ ವಧುವರರನ್ನ ವೇದಿಕೆಗೆ ಬರಮಾಡಿಕೊಂಡಿದ್ದಾರೆ.

ಇಂತಹ ಅಪರೂಪದ ಮದುವೆ ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ. ವರ ಜಗದೀಶ್ ಹಾಗೂ ವಧು ಕಾವ್ಯ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಮನೆಯವರ ಒಪ್ಪಿಗೆ ಪಡೆದ ಪ್ರೇಮಿಗಳು ಸಂಪ್ರದಾಯದಂತೆ ಮನೆಯವರ ಮೆಚ್ಚುಯಂತೆ ಮದುವೆ ಮಾಡಿಕೊಂಡಿದ್ದಾರೆ.

NML copy

ಅಷ್ಟೇ ಅಲ್ಲದೇ ವರ ಜಗದೀಶ್ ಹುಟ್ಟು ಹಬ್ಬದಂದೇ ಮದುವೆ ಇದ್ದುದ್ದರಿಂದ ನೂತನ ದಂಪತಿಗಳಿಗೆ ಆತನ ಸ್ನೇಹಿತರು, ಡಿಫರೆಂಟ್ ಆಗಿರುವ ಉಡುಗೊರೆ ನೀಡಿದ್ದಾರೆ. ವಧು-ವರ ಸ್ನೇಹಿತರು ಹಾಗೂ ಸಂಬಂಧಿಗಳು ಭರ್ಜರಿಯಾಗಿ ಡ್ಯಾನ್ಸ್ ಮಾಡುವ ಮೂಲಕ ವಧುವರರನ್ನ ವೇದಿಕೆಗೆ ಬರಮಾಡಿಕೊಂಡಿದ್ದಾರೆ. ಸ್ನೇಹಿತರ ಈ ಸರ್ಪ್ರೈಸ್ ಕಂಡ ವಧು-ವರರ ಕುಟುಂಬಸ್ಥರು ಹಾಗೂ ನೆರೆದವರು ದಿಲ್ ಖುಷ್ ಆಗಿದ್ದರು.

ಹೊರ ರಾಜ್ಯದ ದಾಂಡಿಯ ನೃತ್ಯ ಕೋಲಾಟ, ಇನ್ನಿತರ ಡ್ಯಾನ್ಯ್ ಮಾಡಿದ್ದು, ಯಾವ ನಟ ನಟಿ, ರಾಜಕಾರಣಿ ಹಾಗೂ ಉದ್ಯಮಿಗಳ ಕುಟುಂಬದ ಮದುವೆಗಿಂತ ಹಾಲು ವ್ಯಾಪಾರಿ ಮನೆಯ ಮದುವೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಇನ್ನೂ ಈ ವೇಳೆ ವರನ ತಾಯಿ ಹಾಗೂ ಕುಟುಂಬಸ್ಥರು ಕುಣಿದು ಕುಪ್ಪಳಿಸಿ ಸಂಭ್ರಮದಲ್ಲಿ ವಿವಾಹವನ್ನ ನಡೆಸಿದ್ದಾರೆ.

NML 1 copy

ನಮ್ಮ ಮದುವೆ ಕಾರ್ಯಕ್ರಮದಲ್ಲಿ ಸ್ನೇಹಿತರೆಲ್ಲಾ ಸೇರಿ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ. ಇದೆಲ್ಲಾ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ನನ್ನ ಹುಟ್ಟುಹಬ್ಬ ದಿನದಂದೇ ಮದುವೆ ನಡೆಯುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ವರ ಜಗದೀಶ್ ಮತ್ತು ವಧು ಕಾವ್ಯ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *