ದಾವಣಗೆರೆ: ಸ್ನೇಹಿತನ ಅಂಗಡಿಯಲ್ಲಿ ಟೀ ಕುಡಿಯಲಲು ಬಂದಿದ್ದ ಇಬ್ಬರು ಸ್ನೇಹಿತರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆಯ ದೇವಿಕೆರೆ ಗ್ರಾಮದಲ್ಲಿ ನಡೆದಿದೆ.
ಕಲ್ಲಪ್ಪ (38) ಹಾಗೂ ಶಂಕರ್ ನಾಯ್ಕ (45) ಸಾವನ್ನಪ್ಪಿದ ಸ್ನೇಹಿತರಾಗಿದ್ದು, ಶುಕ್ರವಾರ ಸಂಜೆ ಗ್ರಾಮದ ಶಂಕರ್ ನಾಯ್ಕ ಹಾಗೂ ಟೀ ಅಂಗಡಿಯಲ್ಲಿ ಕಲ್ಲಪ್ಪ ಟೀ ಸೇವಿಸಿದ್ದು, ಕೆಲ ಹೊತ್ತಿನಲ್ಲಿ ಅಂಗಡಿ ಮುಂದೆ ಕುಸಿದು ಬಿದ್ದಾರೆ. ಕೂಡಲೇ ಅವರನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಇತ್ತ ಕಲ್ಲಪ್ಪರನ್ನ ಆಸ್ಪತ್ರೆಗೆ ದಾಖಲಿಸುತ್ತಿದಂತೆ ಶಂಕರ್ ನಾಯ್ಕ ಕೂಡ ಕುಸಿದು ಬಿದ್ದು ಸಾವನ್ನಪ್ಪಿದಾರೆ. ಆಪ್ತ ಸ್ನೇಹಿತರಾಗಿದ್ದ ಗೆಳೆಯರು ಕೆಲವೇ ಕ್ಷಣಗಳ ಅಂತರದಲ್ಲಿಯೇ ಸಾವನ್ನಪ್ಪಿದ್ದು ಗ್ರಾಮದಲ್ಲಿ ಸಂಶಯಕ್ಕೆ ಕಾರಣವಾಗಿದೆ.
ಘಟನೆ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆ ದೂರು ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗೆ ವರದಿ ಬಳಿಕ ಇಬ್ಬರ ಸಾವಿನ ಬಗ್ಗೆ ನಿಖರ ಕಾರಣ ತಿಳಿಯುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.