ಗಂಡು ಮಗುವಾಯ್ತು ಅಂತ ಪಾರ್ಟಿ ಕೊಡಿಸಿದವನ ತಲೆ ಬುರುಡೆ ಓಪನ್ ಮಾಡಿದ ಸ್ನೇಹಿತರು!

Public TV
1 Min Read
amruthahalli police station

ಬೆಂಗಳೂರು: ವ್ಯಕ್ತಿಯೊಬ್ಬ ತನಗೆ ಗಂಡು (Boy Baby) ಮಗುವಾಯಿತು ಎಂದು ಸ್ನೇಹಿತರಿಗೆ ಪಾರ್ಟಿ ಕೊಡಿಸಿದ. ಆದರೆ ಆ ಸ್ನೇಹಿತರು ಆತನ ತಲೆ ಬರುಡೆಯನ್ನೇ ಓಪನ್ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿ (Bengaluru) ನಲ್ಲಿ ನಡೆದಿದೆ.

ರಂಗನಾಥ್ ಹಲ್ಲೆಗೊಳಗಾದ ವ್ಯಕ್ತಿ. ತನಗೆ ಗಂಡು ಮಗು ಆದ ಎಂಬ ಖುಷಿಯಲ್ಲಿ ಸ್ನೇಹಿತರಾದ ಮನೋಜ್, ಮಧುಸೂದ್, ಪ್ರಸಾದ್‍ಗೆ ಪಾರ್ಟಿ ಕೊಡಿಸಿದ್ದನು. ಈ ಪಾರ್ಟಿಯಲ್ಲಿ ರಾಜಕೀಯ ಪಕ್ಷದ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ.

ಪಾರ್ಟಿ ವೇಳೆ ರಂಗನಾಥ್ ಹಾಗೂ ಸ್ನೇಹಿತರ ನಡುವೆ ರಾಜಕೀಯ ಮಾತನಾಡುವಾಗ ಗಲಾಟೆ ಆಗಿದೆ. ಕಾಂಗ್ರೆಸ್ (Congress) ಪರ ಮಾತನಾಡುತ್ತಿದ್ದ ರಂಗನಾಥ್‍ಗೆ ಸ್ನೇಹಿತರು ಬಿಜೆಪಿ (BJP) ಪರ ಮಾತನಾಡಿಕೊಂಡು ಕಿಚಾಯಿಸಿದ್ದಾರೆ. ಆಗ ರಂಗನಾಥ್ ಹಾಗೂ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಜಗಳ ತಾರಕಕ್ಕೇರಿ ಪಕ್ಕದಲ್ಲಿದ್ದ ಬಿಯರ್ ಬಾಟ್ಲಿಯಿಂದ ರಂಗನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಿಂದ ತೀವ್ರ ರಕ್ತಸ್ರಾವ ಹಿನ್ನೆಲೆ ರಂಗನಾಥ್‍ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಂಗನಾಥ್ ಹಾಗೂ ಸ್ನೇಹಿತರು ಸ್ವಿಗ್ಗಿ ಡೆಲಿವರಿ ಬಾಯ್ (Swiggy Deliver Boy) ಆಗಿ ಕೆಲಸ ಮಾಡಿಕೊಂಡಿದ್ದು, ಅಮೃತಹಳ್ಳಿ ಬಳಿ ಇರುವ ಈಶ್ವರ ದೇವಸ್ಥಾನದ ಬಳಿ ರೂಂ ಮಾಡಿಕೊಂಡಿದ್ದರು. ಸದ್ಯ ಹಲ್ಲೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article