ಹೈದರಾಬಾದ್: ಸ್ನೇಹಿತನಿಗೆ ಬೈಕ್ ನೀಡಿದ ತಪ್ಪಿಗೆ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರ ಪ್ರದೇಶದ ವಿಜಯವಾಡಾದಲ್ಲಿ ನಡೆದಿದೆ.
ಚರಣ್‍ರಾಜ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಚರಣ್‍ರಾಜ್ ತಾಡೇಪಲ್ಲಿ ನಿವಾಸಿಯಾಗಿದ್ದು, ಖಾಸಗಿ ಚಾನೆಲ್‍ನಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದನು. ಡಿ. 24ರಂದು ಸ್ನೇಹಿತರಾದ ಶಿವ ಹಾಗೂ ಆತನ ಜೊತೆಗಿದ್ದ ಮತ್ತೊಬ್ಬ ಯುವಕ ಚರಣ್‍ರಾಜ್ ಬೈಕ್ ತೆಗೆದುಕೊಂಡು ಹೋಗಿದ್ದರು.
ಚರಣ್ ರಾಜ್ ತನ್ನ ಬೈಕನ್ನು ಸ್ನೇಹಿತರಿಗೆ ನೀಡಿ ಚರ್ಚ್‍ಗೆ ತೆರಳಿದ್ದನು. ಶಿವ ಹಾಗೂ ಆತನ ಸ್ನೇಹಿತ ಬೈಕಿನಲ್ಲಿ ವಿಜಯವಾಡದಲ್ಲಿರುವ ಒನ್‍ಟೌನ್‍ಗೆ ಹೋಗಿದ್ದರು. ಈ ವೇಳೆ ಇಬ್ಬರು ಯುವತಿಗೆ ಕಿರುಕುಳ ನೀಡಿದ್ದರು. ಬಳಿಕ ಯುಬತಿ ಬೈಕ್ ನಂಬರ್ ಆಧಾರದ ಮೇಲೆ ಒನ್ ಟೌನ್ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.
ಬೈಕ್ ನಂಬರ್ ಆಧಾರದ ಮೇಲೆ ಪೊಲೀಸರು ಚರಣ್‍ರಾಜ್‍ನನ್ನು ವಶಕ್ಕೆ ಪಡೆದು ಇಡೀ ದಿನ ವಿಚಾರಣೆ ನಡೆಸಿದರು. ಈ ವೇಳೆ ಚರಣ್‍ರಾಜ್ ನಾನು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದರೂ ಪೊಲೀಸರು ಅದನ್ನು ನಂಬದೇ ವಿಚಾರಣೆ ಮುಂದುವರಿಸುತ್ತಿದ್ದರು.
ಬಳಿಕ ಚರಣ್‍ರಾಜ್ ಯುವತಿಗೆ ಕಿರುಕುಳ ನೀಡಲಿಲ್ಲ ಎಂದು ತಿಳಿದ ಪೊಲೀಸರು ಆತನನ್ನು ಬಿಡುಗಡೆ ಮಾಡಿದ್ದಾರೆ. ಇದರಿಂದ ಅವಮಾನಗೊಂಡ ಚರಣ್‍ರಾಜ್ ಮನೆಗೆ ಹೋಗುತ್ತಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.