ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಅವರಿಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
Advertisement
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮನಮೋಹನ್ ಸಿಂಗ್ (Manmohan singh) ಅವರ ತಿಳಿವಳಿಕೆ, ಉದಾತ್ತಗುಣ, ವಿನಯವಂತಿಕೆ ಗುಣಗಳನ್ನು ಒತ್ತಿ ಹೇಳಿರುವ ಸೋನಿಯಾ, ಮಾಜಿ ಪ್ರಧಾನಿಯ ಅಗಲಿಕೆಯು ತುಂಬಲಾರದ ನಷ್ಟ, ನನ್ನ ಪಾಲಿಗಿದು ವೈಯಕ್ತಿಕ ನಷ್ಟ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತ ಇಲಾಖೆಯಲ್ಲಿ ಪೆಟ್ರೋಲ್ ಗೋಲ್ಮಾಲ್ ಆರೋಪ – ಕ್ರಮಕ್ಕೆ ಆಗ್ರಹಿಸಿ ಸಿಎಸ್‌ಗೆ ಯತ್ನಾಳ್ ಪತ್ರ
Advertisement
Advertisement
ಮನಮೋಹನ್ ಸಿಂಗ್ ಅವರು ನನ್ನ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾಗಿದ್ದರು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಅಪಾರ ನಷ್ಟವಾಗಿದೆ. ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಮನಮೋಹನ್ ಸಿಂಗ್ ಸಲ್ಲಿಸಿರುವ ಅಪಾರವಾದ ಕೊಡುಗೆಯನ್ನು ಅಳೆಯಲಾಗದು. ಅವರಂತಹ ನಾಯಕರನ್ನು ಹೊಂದಿದ್ದಕ್ಕಾಗಿ ಇಡೀ ದೇಶ ಮತ್ತು ನಮ್ಮ ಪಕ್ಷ ಹೆಮ್ಮೆಪಡುತ್ತದೆ, ಅವರಿಗೆ ಯಾವಾಗಲೂ ಕೃತಜ್ಞರಾಗಿದ್ದೇವೆ ಎಂದು ಭಾವುಕ ನುಡಿಗಳನ್ನಾಡಿದ್ದಾರೆ. ಇದನ್ನೂ ಓದಿ: ಅಂತ್ಯಕ್ರಿಯೆ ಸ್ಥಳದಲ್ಲೇ ತಲೆಯೆತ್ತಲಿದೆಯೇ ಸಿಂಗ್ ಸ್ಮಾರಕ? – ಪ್ರಧಾನಿ ಮೋದಿಗೆ ಕಾಂಗ್ರೆಸ್ ಪತ್ರ!
Advertisement
ದೇಶಕ್ಕಾಗಿ ಹೃದಯವಂತಿಕೆ ಮತ್ತು ಮನಸ್ಸಿನಿಂದ ಮನಮೋಹನ್ ಸಿಂಗ್ ಸೇವೆ ಸಲ್ಲಿಸಿದ್ದರು. ದೇಶದ ಪ್ರತಿಯೊಬ್ಬರ ಹೃದಯದಲ್ಲಿ ಮನಮೋಹನ್ ಅವರ ಮೇಲಿನ ಪ್ರೀತಿ ಅಡಗಿದೆ. ಆದ್ರೆ ನನ್ನ ಪಾಲಿಗೆ ಮನಮೋಹನ ಅವರ ನಿಧನವು ವೈಯಕ್ತಿಕ ನಷ್ಟವಾಗಿದೆ. ಅವರು ಸದಾ ಸೌಮ್ಯವಾಗಿರುತ್ತಿದ್ದರು ಮತ್ತು ದೃಢನಿಶ್ಚಯ ಹೊಂದಿದ್ದರು. ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅವರ ಬದ್ಧತೆಯು ಅಚಲವಾಗಿತ್ತು ಎಂದು ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಶನಿವಾರ ಬೆಳಗ್ಗೆ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಮನಮೋಹನ್ ಸಿಂಗ್ ಅಂತಿಮ ದರ್ಶನಕ್ಕೆ ವ್ಯವಸ್ಥೆ