ಪತ್ನಿಗೆ ಮೆಸೇಜ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಗೆಳೆಯ ಮಟಾಶ್!

Public TV
2 Min Read
DAVANAGERE MURDER 4

ದಾವಣಗೆರೆ: ಆತ ಬಡತನದಲ್ಲಿದ್ದರೂ ಕಷ್ಟಪಟ್ಟು ದುಡಿದು ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದ. ಹೆಂಡತಿ ಜೊತೆ ಆಗಾಗಾ ಜಗಳ ಮಾಡಿದರೂ ತನ್ನ ಹೆಂಡತಿ ಮಕ್ಕಳ ಜೊತೆ ಸಂತೋಷ ದಿಂದ ಜೀವನ ನಡೆಸುತ್ತಿದ್ದ, ಸ್ನೇಹಿತರ ಜೊತೆ ಕೂಡ ಅತ್ಮೀಯತೆಯಿಂದ ಇದ್ದ. ಆದರೆ ಆತನ ಸ್ನೇಹಿತನೇ ಆತನಿಗೆ ಯಮರೂಪಿಯಾದ. ಕ್ಷುಲ್ಲಕ ಕಾರಣಕ್ಕೆ ಆತನ ಹೆಣ ಬಿದ್ದಿದೆ.

DAVANAGERE MURDER

ಮೃತನನ್ನು ಪ್ರಶಾಂತ್ ಎಂದು ಗುರುತಿಸಲಾಗಿದ್ದು, ಈತ ದಾವಣಗೆರೆ (Davanagere) ಯ ಕಬ್ಬೂರು ಬಸಪ್ಪ ನಗರದ ನಿವಾಸಿ. ಮದುವೆಯಾಗಿದ್ದು ಒಂದು ಮಗು ಕೂಡ ಇದೆ. ಬಡತನವಿದ್ದರೂ ಟೈಲ್ಸ್ ಜೋಡಿಸುವ ಕೆಲಸ ಮಾಡಿಕೊಂಡು ಯಾವುದಕ್ಕೂ ಕೊರತೆಯಾಗದಂತೆ ಸಂಸಾರ ನಡೆಸುತ್ತಿದ್ದ, ಅದರಲ್ಲೂ ಅದೇ ಏರಿಯಾದ ಕೆಲ ಯುವಕರ ಜೊತೆ ಸೇರಿ ಕೆಲಸವಿಲ್ಲದ ಸಮಯದಲ್ಲಿ ಗುಂಪು ಕಟ್ಟಿಕೊಂಡು ಒಡಾಡುತ್ತಿದ್ದ. ಆದರೆ ಅದೇನಾಯಿತೋ ಗೊತ್ತಿಲ್ಲ ಕಳೆದ ರಾತ್ರಿ ಅವರ ಮನೆ ಪಕ್ಕದಲ್ಲಿರುವ ಎಲವಟ್ಟಿ ರೈಸ್ ಮಿಲ್ ಬಳಿ ಇರುವ ಪಾಳು ಬಿದ್ದ ಜಾಗದಲ್ಲಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ದಯವಿಟ್ಟು ನನ್ನನ್ನು ಜೈಲಿಂದ ಹೊರಗೆ ಕಳಿಸ್ಬೇಡಿ – ಎನ್‌ಕೌಂಟರ್ ಭೀತಿಗೆ ನ್ಯಾಯಾಲಯ ಮೊರೆ ಹೋದ UP ಗ್ಯಾಂಗ್‌ಸ್ಟರ್

DAVANAGERE MURDER 1

ಕಳೆದ ರಾತ್ರಿ 8 ಗಂಟೆಗೆ ಅದೇ ಏರಿಯಾದ ಪ್ರಶಾಂತ್ ಸ್ನೇಹಿತ ರಾಕೇಶ್ ಜೊತೆ ಹೋಗಿದ್ದ, ತದಂತರ ಫೋನ್ ಸ್ವಿಚ್ ಆಪ್ ಆಗಿತ್ತು. ಎಷ್ಟು ಹುಡುಕಿದರು ಪತ್ತೆಯಾಗದ ಹಿನ್ನೆಲೆ ಎಲ್ಲೋ ಸ್ನೇಹಿತರ ಜೊತೆ ಹೋಗಿದ್ದಾನೆ ಎಂದುಕೊಂಡಿದ್ದರು. ಆದರೆ ಪ್ರಶಾಂತ್ ಸ್ನೇಹಿತ ರಾಕೇಶ್ ಆರ್ ಎಂಸಿ ಠಾಣೆಗೆ ಹೋಗಿ ಪ್ರಶಾಂತ್‍ನನ್ನು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡು ಸರೆಂಡರ್ ಆದಾಗ ಪ್ರಶಾಂತ್ ಬರ್ಬರವಾಗಿ ಕೊಲೆಯಾಗಿರುವುದು ಬಯಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಯುವತಿಯ ಬರ್ಬರ ಹತ್ಯೆ- 16 ಬಾರಿ ಚುಚ್ಚಿ ಕೊಂದ ಪಾಗಲ್ ಪ್ರೇಮಿ!

DAVANAGERE MURDER 3

ರಾಕೇಶ್ ಹಾಗೂ ಪ್ರಶಾಂತ್ ಇಬ್ಬರು ಕೂಡ ಸ್ನೇಹಿತರು ಯಾವಾಗಲೂ ಜೊತೆಯಲ್ಲಿ ಇದ್ದವರು, ಕೆಲ ತಿಂಗಳುಗಳಿಂದ ರಾಕೇಶ್, ಪ್ರಶಾಂತ್ ಪತ್ನಿಗೆ ಮೆಸೇಜ್ Message) ಮಾಡ್ತಾ ಇದ್ದ ಎನ್ನುವುದು ಪ್ರಶಾಂತ್‍ಗೆ ಗೊತ್ತಾಗಿದೆ. ಇದರಿಂದ ಗಲಾಟೆ ಕೂಡ ಆಗಿತ್ತು, ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಅಲ್ಲದೆ ಇದರಿಂದ ಮನನೊಂದು ಅತ್ಮಹತ್ಯೆಗೆ ಕೂಡ ಪ್ರಶಾಂತ್ ಯತ್ನಿಸಿದ್ದು ಆಸ್ಪತ್ರೆಗೆ ಕರೆದೊಯ್ದು ಉಳಿಸಿಕೊಂಡು ಬಂದಿದ್ದರು. ಆದರೆ ಕಳೆದ ರಾತ್ರಿ ಕೂಡ ರಾಕೇಶ್ ಹಾಗೂ ಪ್ರಶಾಂತ್ ನಡುವೆ ಗಲಾಟೆಯಾಗಿದ್ದು ಇದರಿಂದ ಆತನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

DAVANAGERE MURDER 2

ಒಟ್ಟಾರೆಯಾಗಿ ಮೆಸೇಜ್ ಕಾರಣಕ್ಕೆ ಕೊಲೆಯಾಗಿದ್ಯೋ ಇಲ್ಲ ಬೇರೆ ಏನಾದ್ರು ಕಾರಣ ಇದೆಯೋ ಎನ್ನುವುದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಯಾದ ಸ್ಥಳಕ್ಕೆ ನಗರ ಡಿವೈಎಸ್‍ಪಿ ಮಲ್ಲೇಶ್ ದೊಡ್ಡಮನಿ ಭೇಟಿ ಪರಿಶೀಲನೆ ನಡೆಸಿದ್ದು ಆರ್‍ಎಂಸಿ ಠಾಣೆ (RMC Police Station) ಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *