ಚಾಮರಾಜನಗರ: ಸ್ನೇಹಿತರೆ ಸ್ಕೆಚ್ ಹಾಕಿ ಮನೆಯಲ್ಲಿದ್ದ ಯುವಕನನ್ನು ಕರೆಸಿಕೊಂಡು ಚಾಕು ಇರಿದು ಕೊಲೆ ಮಾಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ನಿವಾಸಿ ಸಂಜಯ್ ಕೊಲೆಯಾದ ದುರ್ದೈವಿ. ಗುಂಡ್ಲುಪೇಟೆ ತರಕಾರಿ ಮಾರುಕಟ್ಟೆಯಲ್ಲಿ ಈತ ಕೆಲಸ ಮಾಡಿಕೊಂಡಿದ್ದ. ಒಂದೆರೆಡು ದಿನದಲ್ಲಿ ಸಂಜಯ್‍ಗೆ ಎಂಗೇಜ್ಮೆಂಟ್ ನಡೆಯಬೇಕಿತ್ತು. ಇದರ ಖುಷಿಯಲ್ಲಿ ಮನೆಯವರೆಲ್ಲ ಇದ್ದರು. ಇದನ್ನೂ ಓದಿ: ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರೂ ಏನೂ ಪ್ರಯೋಜನವಿಲ್ಲ: ಬಿಜೆಪಿ
ಆದ್ರೆ ಸೋಮವಾರ ರಾತ್ರಿ ಸಂಜಯ್ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ. ಈ ವೇಳೆ ಸ್ನೇಹಿತನೊಬ್ಬ ಕರೆ ಮಾಡಿ ತಮ್ಮ ಬೀದಿಯ ಅರಳಿಕಟ್ಟೆಯ ಬಳಿಗೆ ಬರಲು ಹೇಳಿದ್ದಾನೆ. ಅದರಂತೆ ಸಂಜಯ್ ಅರಳಿಕಟ್ಟೆ ಬಳಿಗೆ ಬಂದಿದ್ದು, ತಕ್ಷಣ ಅಲ್ಲೆ ಇದ್ದ ಅಭಿಲಾಷ್ ಎದೆಯ ಭಾಗಕ್ಕೆ ಚಾಕು ಹಾಕಿದ್ದಾನೆ. ನೋಡ ನೋಡುತ್ತಿದ್ದಂತೆ ಸಂಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ನೇಹದ ಹೆಸರಿನಲ್ಲಿ ಕರೆದು ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಇಡೀ ಶಾಪ ಹಾಕಿದರು.
ಕೊಲೆ ಬಗ್ಗೆ ಈವರೆಗೂ ಯಾವುದೇ ರೀತಿಯ ಸರಿಯಾದ ಮಾಹಿತಿ ಇಲ್ಲ. ಮೊನ್ನೆ ಗುಂಡ್ಲುಪೇಟೆಯಲ್ಲಿ ನಡೆದ ಪಟ್ಟಲದಮ್ಮ ಜಾತ್ರೆಯಲ್ಲಿ ಸಂಜಯ್ ಹಾಗೂ ಕೆಲ ಹುಡುಗರ ನಡುವೆ ಗಲಾಟೆಯಾಗಿತ್ತು. ಇದೇ ರೀತಿ ಈ ಹಿಂದೆ ಕೂಡ ಸಂಜಯ್ ಹಾಗೂ ಕೆಲ ಹುಡುಗರ ನಡುವೆ ಗಲಾಟೆ ನಡೆಯುತಿತ್ತಂತೆ. ಆದ್ರೆ ಯಾವ ವಿಚಾರಕ್ಕೆ ಗಲಾಟೆಯಾಗುತಿತ್ತು ಅನ್ನೊದು ಮಾತ್ರ ಕುಟುಂಬಸ್ಥರಿಗೆ ಗೊತ್ತಿರಲಿಲ್ಲ. ಆದ್ರೆ ಮೊನ್ನೆ ನಡೆದ ಗಲಾಟೆ ವಿಚಾರ ಇಟ್ಟುಕೊಂಡು ಈ ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ದೂರಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ನಡೆದ ಹಿಂಸಾಚಾರಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವೇ ಕಾರಣ: ಮೆಹಬೂಬಾ ಮುಫ್ತಿ
ಪ್ರಸ್ತುತ ಈ ಪ್ರಕರಣ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಭಿಲಾಷ್‍ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.