ತುಮಕೂರು: ನಂಬಿಕೆ ದ್ರೋಹ ಅನ್ನೋದು ಮನುಷ್ಯನ ಹುಟ್ಟುಗುಣ. ಇಂಥ ಮೋಸಗಳಿಗೆ ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಒಳಗಾಗುತ್ತಿರುತ್ತಾರೆ. ಅಂಥದ್ದೇ ಒಂದು ಘಟನೆ ತುಮಕೂರಿನಲ್ಲಿ ನಡೆದಿದೆ. ಮೂಲತಃ ಬೆಂಗಳೂರಿನವರಾದ ಅಂತರಾಜ್ ಎಂಬವರು ತಮ್ಮ ಪುಟ್ಟ ಕುಟುಂಬದೊಂದಿಗೆ ತುಮಕೂರಿ (Tumakuru) ನಲ್ಲಿ ವಾಸ ಮಾಡುತ್ತಿದ್ದರು. ಜೀವನಕ್ಕಾಗಿ ಒಳ್ಳೆಯ ಸಂಪಾದನೆ ಮಾಡಿ ಬಂಗಲೆ, ಕಾರುಗಳು, ಬೈಕ್‍ಗಳ ಮಾಲೀಕರಾಗಿದ್ರು. ಆದರೆ ಸದ್ಯಕ್ಕೆ ಈ ಕುಟುಂಬ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿದೆ.
Advertisement
ಹೌದು. ಸಿರಿವಂತ ಅಂತರಾಜ್ ತಮ್ಮ ಬಂಗಲೆ ಮಾರಿಕೊಂಡು ಈಗ ನೆಂಟರ ಹಂಗಿನಲ್ಲಿದ್ದಾರೆ. ಐಷಾರಾಮಿ ಕಾರಲ್ಲಿ ಓಡಾಡುತ್ತಿದ್ದವರು ಈಗ ಟ್ರೈನ್ ಟಿಕೆಟ್‍ಗೂ ಪರದಾಡ್ತಿದ್ದಾರೆ. ಅಷ್ಟಕ್ಕೂ ಈ ಕುಟುಂಬದ ಈ ಸ್ಥಿತಿಗೆ ಕಾರಣ ನಂಬಿದ ವ್ಯಕ್ತಿಯೊಬ್ಬ ಮಾಡಿದ ಮಹಾದೋಖಾ. ಒಂದಷ್ಟು ಹಣ ಇಟ್ಕೊಂಡು ಸುಖವಾಗಿದ್ದ ಅಂತರಾಜ್‍ಗೆ ಕೆಲವು ವರ್ಷಗಳ ಹಿಂದೆ ವೈ.ಸಿ ಸಿದ್ದರಾಮಯ್ಯ ಎಂಬವರ ಪರಿಚಯ ಆಗಿತ್ತು.
Advertisement
Advertisement
ಈ ಪರಿಚಯ ವ್ಯವಹಾರಕ್ಕೆ ತಿರುಗಿ ಅವರ ಸಂಬಂಧಿ ಬಸವರಾಜ್ ಎಂಬವರ ತ್ರಿ ಸ್ಟಾರ್ ಹೋಟೆಲ್‍ನ್ನು ಅಂತರಾಜ್ ಬಾಡಿಗೆಗೆ ತಗೊಂಡು ನಡೆಸ್ತಾ ಇದ್ದರು. ಮುಂದೆ ಹೊಟೇಲ್ ಇಂಟಿರಿಯರ್ ಮತ್ತು ಪೀಠೋಪಕರಣಕ್ಕಾಗಿ ಅಂತರಾಜ್ 1 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಜೊತೆಗೆ 50 ಲಕ್ಷ ರೂ ಮುಂಗಡ ಹಣವನ್ನೂ ನೀಡಿದ್ದರೂ ಎನ್ನಲಾಗಿದೆ. ಆದರೆ ಹೊಟೇಲ್ ಆರಂಭವಾಗುತ್ತಿದ್ದಂತೆ ಅಂತರಾಜ್ ಜೊತೆ ಹೊಟೇಲ್ ಮಾಲೀಕ ಬಸವರಾಜ್ ಹಾಗೂ ವೈ.ಸಿ.ಸಿದ್ದರಾಮಯ್ಯ ಕ್ಯಾತೆ ತೆಗೆದು ಅಂತರಾಜ್‍ರನ್ನು ಹೋಟೆಲ್‍ನಿಂದಲೇ ಹೊರಹಾಕಿದ್ದಾರಂತೆ. ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ – SC, ST ಸಮುದಾಯಗಳಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್
Advertisement
ಸ್ವತಃ ವೈ.ಸಿ.ಸಿದ್ದರಾಮಯ್ಯರೇ ಅಂತರಾಜ್‍ನನ್ನು ಬೆಂಗಳೂರಿ (Bengaluru) ನಿಂದ ಕರೆದುಕೊಂಡು ಬಂದು ಹೊಟೆಲ್ ಬಾಡಿಗೆಗೆ ಕೊಡಿಸಿದ್ರು. ಬಳಿಕ ಇವರ ಮಾತುಗಳನ್ನ ನಂಬಿದ ಅಂತರಾಜ್ ಕೋಟಿ ಕೋಟಿ ರೂಪಾಯಿ ಬಂಡವಾಳ ಹಾಕಿ ಈ ಹೋಟೆಲ್ (Hotel) ರೆಡಿ ಮಾಡಿಸಿದ್ರಂತೆ. ಆದರೆ ಈಗ ಅಂತರಾಜ್ ಅವರನ್ನೇ ಹೋಟೆಲ್‍ನಿಂದ ಹೊರಹಾಕಿ, ಹಣ ವಾಪಸ್ ನೀಡಲು ಸಾಧ್ಯ ಇಲ್ಲ ಎಂದು ಧಮ್ಕಿ ಹಾಕಿದ್ದಾರಂತೆ. ನಷ್ಟ ಆದ ಸುಮಾರು 1.5 ಕೋಟಿ ರೂಪಾಯಿಯಲ್ಲಿ 70 ಲಕ್ಷ ಕೊಡೋದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದ ವೈ.ಸಿ.ಸಿದ್ದರಾಮಯ್ಯ ಮತ್ತೇ ಉಲ್ಟಾ ಹೊಡೆದಿದ್ದಾರಂತೆ.
ಸದ್ಯ ಹೊಟೇಲ್‍ಗಾಗಿ ಅಂತರಾಜ್ ಸುಮಾರು 2 ಕೋಟಿ ರೂಪಾಯಿ ಬ್ಯಾಂಕಿನಿಂದ ಸಾಲ ಮಾಡಿದ್ರಿಂದ ಬ್ಯಾಂಕ್‍ನವರು ಅಂತರಾಜ್ ಅವರ ಡುಫ್ಲೆಕ್ಸ್ ಮನೆ, ಮತ್ತೊಂದು 3 ಅಂತಸ್ತಿನ ಮನೆಯನ್ನು ಹರಾಜು ಹಾಕಿದ್ದಾರೆ. ಜೊತೆಗೆ ಎಕ್ಸ್ ಯುವಿ ಕಾರು, ಇನ್ನೋವಾ ಕಾರು ಹಾಗೂ ರಾಯಲ್ ಎನ್‍ಫೀಲ್ಡ್ ಬೈಕ್‍ನ್ನೂ ಮಾರಿ ಅಂತರಾಜ್ ಕುಟುಂಬ ಹೋಟೆಲ್ ಮುಂದಿನ ರಸ್ತೆಯಲ್ಲಿ ನ್ಯಾಯಕ್ಕಾಗಿ ಧರಣಿ ಮಾಡುತ್ತಿದ್ದಾರೆ.