ಬೆಂಗಳೂರು: ಶುಕ್ರವಾರ ಶತಮಾನ ಸುದೀರ್ಘ ಕೇತುಗ್ರಸ್ಥ ಚಂದ್ರ ಗ್ರಹಣವಿದೆ. ಆದರೆ ಬೆಂಗಳೂರಿನ ಖಗೋಳ ಪ್ರಿಯರು ಚಂದ್ರ ಗ್ರಹಣ ನೋಡುವ ಸಾಧ್ಯತೆಗಳು ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಭೋಮಂಡಲದಲ್ಲಿ ನಡೆಯುವ ಕೌತಕವನ್ನು ನೋಡಲು ನಗರದ ನೆಹರು ತಾರಾಲಯದತ್ತ ಖಗೋಳ ಪ್ರಿಯರು ಆಗಮಿಸುತ್ತಾರೆ. ಈ ಬಾರಿ ಚಂದ್ರ ಗ್ರಹಣದಂದು ನಗರದಲ್ಲಿ ಮೋಡ ಕವಿದ ವಾತವಾರಣ ಇರಲಿದ್ದು, ಗ್ರಹಣ ಕಾಣಿಸುವುದು ಸಂದೇಹ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶುಕ್ರವಾರ ಕೇತುಗ್ರಸ್ಥ ಚಂದ್ರಗ್ರಹಣ – ಭಕ್ತರಿಗೆ ದೇಗುಲಗಳಿಂದಲೇ ನೋಟಿಸ್
Advertisement
Advertisement
ಬೆಂಗಳೂರಿನಲ್ಲಿ ಮಳೆ ಇಲ್ಲದಿದ್ದರೂ, ಮೋಡ ಕವಿದ ವಾತಾವರಣ ಇರಲಿದೆ. ಇನ್ನು ಮಲೆನಾಡು, ಕರಾವಳಿ ಭಾಗದಲ್ಲೂ ಶುಕ್ರವಾರ ರಾತ್ರಿ ಸಹ ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದ ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಮಾತ್ರ ಗ್ರಹಣ ಗೋಚರಿಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ: ರಾಜ್ಯ ರಾಜಕೀಯದಲ್ಲಿ ಯಾರಿಗೆ ಹಿಡಿಯಲಿದೆ ಗ್ರಹಣ?
Advertisement
ಬೆಂಗಳೂರಲ್ಲಿ ಗ್ರಹಣ ಗೋಚರಿಸುವ ಸಾಧ್ಯತೆಗಳು ಕಡಿಮೆ ಇವೆ. ಆದರೂ ನೆಹರು ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಇಡೀ ರಾತ್ರಿ ತಾರಾಲಯ ತೆರೆಯಲಿದೆ. ಗ್ರಹಣ ನೋಡಲು ಬರುವವರಿಗೆ ಮಹಿತಿ ನೀಡಲು ಸ್ಥಳದಲ್ಲಿ ತಜ್ಞರು ಇರಲಿದ್ದಾರೆ ಎಂದು ನೆಹರು ತಾರಾಲಯ ನಿರ್ದೇಶಕ ಪ್ರಮೋದ್ ಗಲಗಲಿ ಹೇಳಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣದ ವೇಳೆ ಏನು ಮಾಡಬಾರದು? ಅನಿಷ್ಟ ಫಲ ಏನು? – ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳ್ತಾರೆ ಓದಿ