ಬೆಂಗಳೂರು: ಕಾವೇರಿ ನೀರಿಗಾಗಿ ನಾಳೆ ಕರ್ನಾಟಕ ಬಂದ್ (Karnatak Bandh) ಆಗಲಿದ್ದು, ಈ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದಲೇ ತಮಿಳುನಾಡು ಸಾರಿಗೆ ಬಸ್ ಗಳ ಸಂಚಾರ ಬಂದ್ ಮಾಡಲಾಗುತ್ತದೆ.
ಬೆಂಗಳೂರು ಟು ತಮಿಳುನಾಡು (Tamilnadu) ಸಂಚಾರ ಮಾಡುವ ತಮಿಳುನಾಡು ಸಾರಿಗೆಯ 350ಕ್ಕೂ ಹೆಚ್ಚು ಬಸ್‍ಗಳು ನಾಳೆ ಸ್ಥಗಿತವಾಗಲಿವೆ. ತಮಿಳುನಾಡು ಸಾರಿಗೆ ಬಸ್ ಗಳು ರಾತ್ರಿ 10 ಗಂಟೆಗೆ ಸಂಪೂರ್ಣ ಓಡಾಟ ನಿಲ್ಲಿಸಲಿವೆ. ಇದನ್ನೂ ಓದಿ: ಡೈರಿ ಉತ್ಪನ್ನ ಬೇಡ – ಕೂಲ್ ಕೂಲ್ ಗ್ರೇಪ್ ಐಸ್ ಟ್ರೈ ಮಾಡಿ
ತಮಿಳುನಾಡಿನಿಂದ ಆಗಮಿಸುವ ಬಸ್‍ಗಳು ರಾತ್ರಿ 10 ಗಂಟೆ ವೇಳೆಗೆ ಕರ್ನಾಟಕ ಗಡಿ ಪ್ರವೇಶಿಸಿ ಮತ್ತೆ ವಾಪಸ್ ಆಗಲಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನ ಸ್ಯಾಟಲೈಟ್, ಶಾಂತಿನಗರ ಬಸ್ ನಿಲ್ದಾಣದಿಂದ ತಮಿಳುನಾಡಿನ ವಿವಿಧ ಭಾಗಗಳಿಗೆ ಸಂಚಾರ ಮಾಡುವ ತಮಿಳುನಾಡು ಸಾರಿಗೆ ಬಸ್ ಸಂಚಾರ ನಿಲ್ಲಿಸಿವೆ.
Web Stories